MIRROR FOCUS

ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದೇಸೀ ಗೋತಳಿ ಸಂರಕ್ಷಣೆಗೆ ಗ್ರಾಮೀಣ ಪ್ರದೇಶ, ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯವಿದೆ. ದನ ಸಾಕುವುದು ಕೂಡಾ ಸಾಧ್ಯ ಇದೆ. ಆದರೆ ಪ್ರೀತಿ ಹಾಗೂ ಕಾಳಜಿ ಇರಬೇಕು ಅಷ್ಟೇ.  ಇದಕ್ಕೊಂದು ಉದಾಹರಣೆ ಮಂಗಳೂರಿನ ಕದ್ರಿ ಕಂಬಳದ ಮಲ್ಲಿಕಾ ಬಡಾವಣೆಯಲ್ಲಿರುವ ಪ್ರದೀಪ್‌ ಕುಮಾರ್‌ ಕಲ್ಕೂರ ಅವರ ಮನೆ. ಕಳೆದ ಕೆಲವು ವರ್ಷಗಳಿಂದ ದೇಸೀ ಗೋವನ್ನುಅವರ ಮನೆಯಲ್ಲಿ ಸಾಕುತ್ತಿದ್ದಾರೆ. …… ಮುಂದೆ ಓದಿ……

Advertisement

ಮನೆಯ ಮುಂದೆ ದೇಸೀ ಗೋವು. ಒಂದು ಹೋರಿ-ಎರಡು ದನ. ಕೃಷ್ಣ-ದೇವಕಿ-ಯಶೋಧೆ ಅಲ್ಲಿದ್ದಾರೆ. ಮಂಗಳೂರು ನಗರದಲ್ಲಿ ಸಾಧ್ಯ ಇದೆಯಾ ಎನ್ನುವ ಪ್ರಶ್ನೆಯೇ ಬೇಡ. ಪ್ರದೀಪ್‌ ಕುಮಾರ್‌ ಕಲ್ಕೂರ ಅವರ ಮನೆಯಲ್ಲಿ ದೇಸೀ ಗೋವು ಅದರಲ್ಲೂ ಮಲೆನಾಡು  ಗಿಡ್ಡ ಅಂದರೆ ಕರಾವಳಿ ಭಾಗದಲ್ಲಿ ಹಿಂದಿನಿಂದಲೂ ಇದ್ದ ಗೋವು ಅದು. ಸುಮಾರು ವರ್ಷಗಳಿಂದ ದನವನ್ನು ಸಾಕುತ್ತಿದ್ದೇವೆ. ಬಹುದೊಡ್ಡ ಖರ್ಚಿನಿಂದ ನಾಯಿ ಸಾಕುವ ನಮಗೆ ಕಡಿಮೆ ಖರ್ಚಿನಲ್ಲಿ ಬೆಳೆಸಬಹುದಾದ ದನವನ್ನು ಸಾಕಲು ಕಷ್ಟ ಇದೆಯಾ ಎಂದು ಮರುಪ್ರಶ್ನೆ ಮಾಡುತ್ತಾ, ದನ ಸಾಕಾಣಿಕೆಯ ಬಗ್ಗೆ ಮಾತು ಆರಂಭಿಸುತ್ತಾರೆ. ನಗರದಲ್ಲಿ ಹುಲ್ಲನ್ನು ಖರೀದಿ ಮಾಡುತ್ತೇವೆ, ಒಣಹುಲ್ಲು ತರುತ್ತೇವೆ. ಸೆಗಣಿ-ಮೂತ್ರವನ್ನು ತಮ್ಮದೇ ಕೈತೋಟಕ್ಕೆ ಬಳಕೆಯಾಗುತ್ತದೆ. ಅಗತ್ಯ ಇದ್ದರೆ ಆಸುಪಾಸಿನವರೂ ಪಡೆಯುತ್ತಾರೆ. ದೊಡ್ಡ ಕಷ್ಟವೇ ಆಗುವುದಿಲ್ಲ.ಮನೆಯ ಮುಂದೆ ಇರುತ್ತದೆ, ಹಟ್ಟಿ ಎನ್ನುವ ದೊಡ್ಡ ಖರ್ಚು ಕೂಡಾ ಇಲ್ಲ ಎನ್ನುತ್ತಾರೆ ಪ್ರದೀಪ್‌ ಕುಮಾರ್‌ ಅವರು.

ದೇಸೀ ತಳಿಯ ದನ ಇರಬೇಕು ಎಂದು ನಮ್ಮದು ಆಸೆ. ಮಲೆನಾಡು ಗಿಡ್ಡ ಅಥವಾ  ನಮ್ಮದೇ ಊರ ದನವಾದರೆ ಖರ್ಚುಗಳು ಕಡಿಮೆ, ದೊಡ್ಡ ಕ್ಲೀನಿಂಗ್‌ ಕೆಲಸವೂ ಇರುವುದಿಲ್ಲ ಎನ್ನುತ್ತಾರೆ. ಮೊದಲು ಇರಬೇಕಾದ್ದು ದನದ ಮೇಲೆ ಪ್ರೀತಿ ಹಾಗೂ ಕಾಳಜಿ. ಇದು ಇದ್ದರೆ ದೊಡ್ಡ ಕಷ್ಟೇ ಇಲ್ಲ, ದನವೊಂದು ಇದ್ದರೆ ಕೈತೋಟವೂ ಆರೋಗ್ಯಪೂರ್ಣವಾಗಿರುತ್ತದೆ , ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಎನ್ನುತ್ತಾರೆ ಪ್ರದೀಪ್‌ ಕುಮಾರ್‌ ಕಲ್ಕೂರ.

Advertisement

ಗ್ರಾಮೀಣ ಭಾಗದಲ್ಲಿ ಅಂದರೆ ಹಳ್ಳಿಯಲ್ಲಿ ದನ ಸಾಕಾಣಿಕೆ ಕಡಿಮೆಯಾಗುತ್ತಿರುವ ಸಂದರ್ಭ, ಕಾಳಜಿ ಇದ್ದರೆ ಎಲ್ಲಿ ಬೇಕಾದರೂ ಸಾಕಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಗೋತಳಿ ಉಳಿಯಲು ಇಂತಹ ಕಾಳಜಿಗಳೇ ಕಾರಣವಾಗುತ್ತದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಮ್-4 ಮಿಷನ್‌ನ ನಾಲ್ವರು ಗಗನಯಾತ್ರಿಗಳನ್ನು ಒಳಗೊಂಡ…

2 hours ago

ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ

ರಾಜ್ಯದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ…

2 hours ago

ಹೃದಯಾಘಾತದಿಂದ ಸಾವುಗಳ ಸಂಖ್ಯೆ ಹೆಚ್ಚಾಗಿಲ್ಲ | ಯಾವುದೇ ಆತಂಕ ಬೇಡ – ಸಚಿವ ಶರಣಪ್ರಕಾಶ್ ಪಾಟೀಲ್

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು…

2 hours ago

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ | ತುಂಬಿ ಹರಿಯುತ್ತಿರುವ ನದಿಗಳು

ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ…

2 hours ago

ವ್ಯಾಪಾರದಲ್ಲಿ ಈ ರಾಶಿಯವರಿಗೆ ಗಳಿಕೆಯ ಬದಲು ಖರ್ಚು ಹೆಚ್ಚಾಗುವ ಸೂಚನೆ

ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…

16 hours ago