ಕೃಷಿಯಲ್ಲಿ ದೇಸಿ ತಳಿಗಳ ಸಂರಕ್ಷಣೆಗೆ ಕೃಷಿ ಇಲಾಖೆ ಕಾರ್ಯಕ್ರಮ ರೂಪಿಸಿದ್ದು, 2025-26ನೇ ಸಾಲಿಗೆ ಇಲಾಖೆಯ ಮೂಲಕ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ. ದೇಸಿ ತಳಿಗಳನ್ನು ಬೆಳೆಯುತ್ತಿರುವ ರೈತರನ್ನು ಗುರುತಿಸುವುದು, ತಳಿಗಳನ್ನು ಸಂರಕ್ಷಿಸುವುದು ಹಾಗೂ ಈ ತಳಿಗಳ ಅಭಿವೃದ್ಧಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಕಾರ್ಯಕ್ರಮದಲ್ಲಿ ಭತ್ತ, ಅವರೆ, ಅಲಸಂದೆ ಮತ್ತು ಇತರೆ ಬೆಳೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರಾಥಮಿಕವಾಗಿ ಸ್ಥಳೀಯ ತಳಿಗಳನ್ನು ಬೆಳೆಯುತ್ತಿರುವ ರೈತರನ್ನು ಗುರುತಿಸಬೇಕಾಗಿರುವುದರಿಂದ ಸಮೀಕ್ಷಾ ಕಾರ್ಯವನ್ನು ಇಲಾಖೆಯಿಂದ ಕೈಗೊಳ್ಳಲಾಗುತ್ತಿದ್ದು ಜಿಲ್ಲೆಯಲ್ಲಿ ದೇಸಿ ತಳಿಗಳನ್ನು ಬೆಳೆಯುತ್ತಿರುವ ರೈತರು ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಮೇ 31 ರೊಳಗೆ ನೋಂದಾಯಿಸಿಕೊಳ್ಳಬೇಕು. ಹಾಗೂ ಸ್ಥಳೀಯ ದೇಸಿ ತಳಿಗಳನ್ನು ಬೆಳೆಯುತ್ತಿರುವ ರೈತರ ಬಗ್ಗೆ ಮಾಹಿತಿಯನ್ನು ಇಲಾಖೆಗೆ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾವೊಂದು ಯೋಚನೆ ಮಾಡಿದ್ದೇವೆ. ಎಲ್ಲಾ ಕಡೆ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಗರ…
ವೃಷಭ ರಾಶಿಯಲ್ಲಿ ಶುಕ್ರನ ಸಂಚಾರ ಒಂದು ಶುಭಕರವಾದ ಮತ್ತು ಧನವೃದ್ಧಿಯ ತತ್ವವನ್ನು ಸಾರುವ…
ಅನೇಕ ವರ್ಷಗಳ ಬೇಡಿಕೆ-ಹೋರಟದ ಬಳಿಕ ಬೃಹತ್ ಸೇತುವೆಯೊಂದು ನಿರ್ಮಾಣವಾಗಿದೆ. ಅಂಬಾರಗೂಡ್ಲು-ಕಳಸವಳ್ಳಿ ಸೇತುವೆಯ ಹೋರಾಟದ…
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ…
ಈ ವರ್ಷ ವಿಶೇಷವಾಗಿ ಗಮನ ಸೆಳೆದ ಕ್ಷೇತ್ರ ಕೊಟ್ಟಿಯೂರ್ ಅಥವಾ ತೃಚ್ಚೇರುಮನ ಕ್ಷೇತ್ರ…
ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನಲ್ಲಿ ಗಣನೀಯ ಏರಿಕೆಯಾಗಿದ್ದು, ಪ್ರಸಕ್ತ ಜಲಾಶಯದಲ್ಲಿ 77.144…