ಪ್ರಮುಖ

#DeveGowda | ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ಲೋಕ, ಪ್ರಾರ್ಥನೆಗಳನ್ನು ಓದಿದ ಮಾಜಿ ಪ್ರಧಾನಿ ಎಚ್‌ ಡಿ ದೇವೇ ಗೌಡ | ದೇವೇ ಗೌಡರ ಜೀವನೋತ್ಸಾಹದ ಮಾದರಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಪ್ರಧಾನಿ ಎಚ್‌ ಡಿ ದೇವೇ ಗೌಡ ಭೇಟಿ ನೀಡಿ ದೇವರ ದರ್ಶನ ಪಡೆದರು. ಕುಕ್ಕೆ ಕ್ಷೇತ್ರಕ್ಕೆ ಪ್ರತೀ ವರ್ಷ ಭೇಟಿ ನೀಡುವ ದೇವೇ ಗೌಡರು ಈ ಬಾರಿಯೂ ಕ್ಷೇತ್ರ ದರ್ಶನ ಮಾಡಿದ್ದಾರೆ. ಈ ಬಾರಿ ಬಿಡುವಿನ ನಡುವೆ ಸುಬ್ರಹ್ಮಣ್ಯ ಶ್ಲೋಕ, ಪ್ರಾರ್ಥನೆಗಳ ಪುಸ್ತಕವನ್ನು ಓದುತ್ತಾ ಕುಳಿತಿದ್ದರು.

Advertisement

ಭಾನುವಾರ ಸಂಜೆ‌ ಹೆಲಿಕ್ಟಾಪರ್ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಬೇಕಿದ್ದ ದೇವೇ ಗೌಡರು ಪ್ರತಿಕೂಲ ಹವಾಮಾನದ  ಕಾರಣದಿಂದ ಹೆಲಿಕಾಪ್ಟರ್‌ ಬಾರದೆ ವಿಮಾನ ಮೂಲಕ ಮಂಗಳೂರು ಬಂದು ಅಲ್ಲಿಂದ ವಾಹನದಲ್ಲಿ  ಕುಕ್ಕೆಗೆ ತಡರಾತ್ರಿ ತಲಪಿದರು.

ದೇವೇ ಗೌಡರಿಗೆ ಆಶ್ಲೇಷ ನಕ್ಷತ್ರದಂದು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಆಗಬೇಕಿತ್ತು, ಪೂಜೆ ಸಲ್ಲಿಸಬೇಕಿತ್ತು. ಸುಬ್ರಹ್ಮಣ್ಯ ದೇವರಿಗೆ ಆಶ್ಲೇಷ ನಕ್ಷತ್ರ ವಿಶೇಷವಾದ ದಿನವಾಗಿದೆ. ದೇವೇ ಗೌಡರು ಪ್ರತೀ ಬಾರಿ ವಿಶೇಷ ಪೂಜೆ, ಸೇವೆ ಸಲ್ಲಿಸಲು ಬಂದಿರುವುದು ಕೂಡಾ ಆಶ್ಲೇಷ ನಕ್ಷತ್ರದಂದೇ. ಈ ಬಾರಿ ಪತ್ನಿ ಚೆನ್ನಮ್ಮ ಸಹಿತ ಆಗಮಿಸಿದ ದೇವೇ ಗೌಡರು ಸಹಾಯಕರ ಮೂಲಕ ಕ್ಷೇತ್ರಕ್ಕೆ ಸುತ್ತು ಹಾಕಿ ಪೂಜೆ ಸಲ್ಲಿಸಿದರು.

ದೇವೇ ಗೌಡರ ಜೀವನೋತ್ಸಾಹ ಎಲ್ಲರಿಗೂ ಮೆಚ್ಚುಗೆಯಾಗುವಂತಹದ್ದು.90 ವರ್ಷದ ದೇವೇ ಗೌಡರು ಈಗಲೂ ಧ್ಯಾನದಂತಹ ಕೆಲಸಕ್ಕೂ ಸಮಯ ಮೀಸಲಿಡುತ್ತಾರೆ. ಭಾನುವಾರ ರಾತ್ರಿ 10 ಘಂಟೆ ರಾತ್ರಿ ಮಂಗಳೂರು ತಲುಪಿ ಅಲ್ಲಿಂದ 1.30 ಕ್ಕೆ ಕುಕ್ಕೆ ಗೆ ಬಂದರು.6 ಘಂಟೆಗೆ ಮತ್ತೆ ಸ್ನಾನ ಮುಗಿಸಿ ದೇವಸ್ಥಾನಕ್ಕೆ ಪೂಜೆಗೆ ಹೊರಟು ಕಾರಿನಲ್ಲಿ ಕುಳಿತು ಚೆನ್ನಮ್ಮ ಅವರನ್ನು ಕಾಯುತ್ತಿದ್ದರು. ಈ 10 ನಿಮಿಷದ ಕಾಲವನ್ನು ವ್ಯರ್ಥ ಮಾಡದೆ ತನ್ನ ಬಳಿಯೇ ಇದ್ದ ಸುಬ್ರಹ್ಮಣ್ಯ ಶ್ಲೋಕ, ಪ್ರಾರ್ಥನೆಗಳ ಪುಸ್ತಕವನ್ನು ವಾಚಿಸಿದರು. ಈ ಬಗ್ಗೆ ಜೆಡಿಎಸ್‌ ಮುಖಂಡ ಎಂ ಬಿ ಸದಾಶಿವ ಅವರು ತಮ್ಮ ಪೇಸ್‌ಬುಕ್‌ ವಾಲಲ್ಲಿ ಬರೆದುಕೊಂಡಿದ್ದಾರೆ.

Advertisement

ಮಾಜಿ ಪ್ರಧಾನಿ ಎಚ್‌ ಡಿ ದೇವೇ ಗೌಡರು ಏಕಾಏಕಿ ಈ ಪುಸ್ತಕವನ್ನು ತೆರೆದು ಓದಲು ಸಾಧ್ಯವಿಲ್ಲ, ಈ ಹಿಂದೆಯೂ ಅವರು ಶ್ಲೋಕ, ಪ್ರಾರ್ಥನೆಯ ಪುಸ್ತಕಗಳನ್ನು ಓದಿರುತ್ತಾರೆ. ವ್ಯಕ್ತಿಯ ಬದುಕಿನ ಯಶಸ್ಸಿನ ಹಿಂದೆ, ಜೀವನೋತ್ಸಾಹದ ಹಿಂದೆ ಇಂತಹ ಸಂಗತಿಗಳೂ ಕಾರಣವಾಗುತ್ತದೆ.

ಜೆಡಿಎಸ್‌ ಮುಖಂಡ ಎಂ ಬಿ ಸದಾಶಿವ ಅವರು ಈ ಬಗ್ಗೆ ಪೇಸ್‌ಬುಕ್‌ ವಾಲಲ್ಲಿ  ಬರೆದುಕೊಂಡಿದ್ದಾರೆ. ಅನೇಕರು ದೇವೇ ಗೌಡರ ಜೀವನೋತ್ಸಾಹದ ಬಗ್ಗೆ, ಅವರ ಧಾರ್ಮಿಕ ನಂಬಿಕೆಗಳ ಬಗ್ಗೆ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement
/**/
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗ್ರಾಮೀಣ ಭಾಗಕ್ಕೂ ತಲುಪಿದ ಆಧುನಿಕ ಸಂಸ್ಕೃತಿ | ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿಗಳ ವಿಡಿಯೋ ವೈರಲ್ | ಸೋಶಿಯಲ್‌ ಮೀಡಿಯಾದಲ್ಲಿ ಹಲವರಿಂದ ಅಸಮಾಧಾನ |

ನಗರದಲ್ಲಿ ಮಾತ್ರಾ ಕಂಡುಬರುತ್ತಿದ್ದ ಸಂಸ್ಕೃತಿಯೊಂದು ಈಗ ಗ್ರಾಮೀಣ ಭಾಗಕ್ಕೂ ತಲಪಿದೆ. ಅದರಲ್ಲೂ ಕುಕ್ಕೆ…

3 minutes ago

ಹವಾಮಾನ ವರದಿ | 04.07.2025| ರಾಜ್ಯದ ಕರಾವಳಿ ಭಾಗದಲ್ಲಿ ಏಕೆ ಉತ್ತಮ‌ ಮಳೆಯಾಗುತ್ತಿದೆ..? | ಇಂದೂ‌ ಸಾಮಾನ್ಯ ಮಳೆ

05.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಧ್ರುವದ…

8 hours ago

ಪುತ್ತೂರು ಪ್ರಕರಣ | ಶಾಸಕ ಅಶೋಕ್‌ ಕುಮಾರ್‌ ರೈ ಅವರ ಬರಹ ಇದು… | ನಾವೀಗ ಆಕೆಗೆ ನೀಡಬೇಕಾಗಿರುವುದು ಧೈರ್ಯ ಮತ್ತು ಸ್ಥೈರ್ಯ

ಪುತ್ತೂರಿನ ಪ್ರಕರಣವೊಂದು ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ನಡುವೆ ರಾಜಕೀಯವಾಗಿಯೂ ಇದೊಂದು ಚರ್ಚೆ, ಆರೋಪಗಳಿಗೂ…

11 hours ago

ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ

ಭಾರತದ ರಾಸಾಯನಿಕ ವಲಯವು  ಒಟ್ಟು ದೇಶೀಯ ಉತ್ಪನ್ನ ಕೊಡುಗೆಯಲ್ಲಿ ಗಮನಾರ್ಹ ಪಾತ್ರ ವಹಿಸುತ್ತಿದೆ.…

13 hours ago

ಬುಧ ಮತ್ತು ಶನಿ ಕಾಟದಿಂದ ಈ ರಾಶಿಯವರು ಸ್ವಲ್ಪ ಜೋಪಾನವಾಗಿರಬೇಕು

ರಾಯರ ಪರಮಭಕ್ತರದ ಜ್ಯೋತಿಷಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ 9535156490

13 hours ago

ಅಮರನಾಥ ಯಾತ್ರೆಗೆ ಚಾಲನೆ | ಮೊದಲ ಗುಂಪಿನ 5,880 ಯಾತ್ರಿಗಳು ಪ್ರಯಾಣ

ಹಿಂದೂಗಳ ಪವಿತ್ರ ಅಮರನಾಥ ಯಾತ್ರೆಗೆ, ಜಮ್ಮುವಿನ ಭಗವತಿ ನಗರದಲ್ಲಿ  ಜಮ್ಮು ಮತ್ತು ಕಾಶ್ಮೀರದ…

21 hours ago