#Arecanut | ಅಡಿಕೆ ಟಿಶ್ಯೂ ಕಲ್ಚರ್‌ | ಅಡಿಕೆ ಹಳದಿ ಎಲೆ ರೋಗ ನಿರೋಧಕ ತಳಿ ಬೆಳವಣಿಗೆಯ ಹಂತದಲ್ಲಿ | ಸಿಪಿಸಿಆರ್‌ಐ ವಿಜ್ಞಾನಿಗಳ ಸತತ ಪ್ರಯತ್ನ ಮುಂದುವರಿಕೆ |

August 11, 2023
8:18 PM
ಅಡಿಕೆಯ ಟಿಶ್ಯೂ ಕಲ್ಚರ್‌ ಗಿಡಗಳ ಅಭಿವೃದ್ಧಿ ಹಾಗೂ ಅಡಿಕೆ ಹಳದಿ ಎಲೆರೋಗ ಪೀಡಿತ ಹಾಟ್‌ಸ್ಫಾಟ್‌ ಪ್ರದೇಶದ ಅಡಿಕೆ ಗಿಡಗಳಿಂದ ರೋಗ ನಿರೋಧಕ ತಳಿ ಅಭಿವೃದ್ಧಿಯ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಸತತ ಪ್ರಯತ್ನ ಮುಂದುವರಿದಿದೆ. ಬಹುತೇಕ ಯಶಸ್ಸಿನ ನಿರೀಕ್ಷೆ ಇದೆ.

ವಿವಿಧ ಬಗೆಯ ಅಡಿಕೆ ಟಿಶ್ಯೂ ಕಲ್ಚರ್‌ ತಳಿ ಅಭಿವೃದ್ಧಿಯಲ್ಲಿ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಯಶಸ್ಸಿನ ಹಾದಿಯಲ್ಲಿದ್ದಾರೆ. ಅಡಿಕೆ ಹಳದಿ ಎಲೆ ರೋಗ ನಿರೋಧಕ ಟಿಶ್ಯೂ ಕಲ್ಚರ್‌ ತಳಿಯು ಅಭಿವೃದ್ಧಿಯ ಹಂತದಲ್ಲಿದ್ದು, ಪ್ರಯೋಗಾಲಯದಲ್ಲಿ ಬೆಳೆಯುತ್ತಿದೆ. ಇನ್ನಷ್ಟು ಅಭಿವೃದ್ಧಿಯ ಕಡೆಗೆ ವಿಜ್ಞಾನಿಗಳು ಸತತ ಪ್ರಯತ್ನ ಮುಂದುವರಿಸಿದ್ದಾರೆ.

Advertisement
Advertisement
Advertisement
ಟಿಶ್ಯೂ ಕಲ್ಚರ್‌ ಗಿಡ
ಗಿಡ ಬೆಳೆಸುವ ಹಂತ

ಅಡಿಕೆ ಹಳದಿ ಎಲೆ ರೋಗ ನಿರೋಧಕ ತಳಿಯ ಅಭಿವೃದ್ಧಿಯ ವಿಧಾನದ ಬಗ್ಗೆ ಕಳೆದ ಎರಡು ವರ್ಷಗಳಿಂದ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಪ್ರಯತ್ನ ಮಾಡಿತ್ತು. ಅದರಲ್ಲಿ ಟಿಶ್ಯೂ ಕಲ್ಚರ್‌ ಮಾದರಿಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಕೃಷಿಕರಿಗೆ ವಿಜ್ಞಾನಿಗಳು ಮಾಹಿತಿ ನೀಡಿದ್ದರು.ಇದಕ್ಕಾಗಿ ಅಡಿಕೆ ಹಳದಿ ಎಲೆ ರೋಗ ಪೀಡಿತ ಪ್ರದೇಶದ ಹಾಟ್‌ಸ್ಫಾಟ್‌ ಪ್ರದೇಶಗಳಾದ ಸಂಪಾಜೆ, ಅರಂತೋಡು, ಚೆಂಬು ಹಾಗೂ ಶೃಂಗೇರಿಗಳಿಂದ ಅಡಿಕೆಯ ಎಳೆ ಹಿಂಗಾರವನ್ನು ಸಂಗ್ರಹಿಸಿದ್ದರು. ಇದನ್ನು ಟಿಶ್ಯೂ ಕಲ್ಚರ್‌ ವಿಧಾನದಲ್ಲಿ ಅಭಿವೃದ್ಧಿಪಡಿಸುತ್ತಿದ್ದರು. ಈ ಬೆಳವಣಿಗೆಗಳನ್ನು ವೀಕ್ಷಿಸಲು ಕೃಷಿಕರ ತಂಡ ಸಿಪಿಸಿಆರ್‌ಐ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ  ವಿಜ್ಞಾನಿಗಳು ಟಿಶ್ಯೂ ಕಲ್ಚರ್‌ ಗಿಡಗಳ ಬೆಳವಣಿಗೆಯ ಹಂತಗಳ ಬಗ್ಗೆ ಮಾಹಿತಿ ನೀಡಿದರು

Advertisement
ಸಿಪಿಸಿಆರ್‌ ಐ ನಿರ್ದೇಶಕರು ಹಾಗೂ ವಿಜ್ಞಾನಿಗಳ ಜೊತೆ ಕೃಷಿಕರ ತಂಡ

ಟಿಶ್ಯೂ ಕಲ್ಚರ್‌ ಮಾದರಿಯಲ್ಲಿ ಈ ಹಿಂದೆ ವಿವಿಧ ಕೃಷಿಯಲ್ಲಿ ಬಳಕೆ ಮಾಡಿದ್ದರೂ ಅಡಿಕೆ ಹಾಗೂ ತೆಂಗು ಗಿಡಗಳಲ್ಲಿ ಪರಿಣಾಮಕಾರಿಯಾಗಿ ಸಾಧ್ಯ ಆಗಿರಲಿಲ್ಲ. ಇದೀಗ ಸಿಪಿಸಿಆರ್‌ಐ ವಿಜ್ಞಾನಿಗಳು ಬಹು ನಿರೀಕ್ಷೆಯಲ್ಲಿದ್ದು, ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ತೀರಾ ವಿಳಂಬವಾದ ಹಾಗೂ ತೀರಾ ಎಚ್ಚರಿಕೆಯ ಕಾರ್ಯ ಇದಾಗಿದೆ. ಈ ಕಾರಣದಿಂದ ಟಿಶ್ಯೂ ಕಲ್ಚರ್‌ ಗಿಡಗಳ ಅಭಿವೃದ್ಧಿಗೆ ಅಡಿಕೆಯಲ್ಲಿ ತೀರಾ ಕಷ್ಟಕರವಾಗಿದೆ. ಹಾಗಿದ್ದರೂ ವಿಜ್ಞಾನಿಗಳ ತಂಡ ಅತೀ ಎಚ್ಚರಿಕೆಯಿಂದ ಈಗ ಕೆಲಸ ಮಾಡುತ್ತಿದೆ.

ಟಿಶ್ಯೂ ಕಲ್ಚರ್‌ ಗಿಡಗಳ ಅಭಿವೃದ್ಧಿಯ ಹಂತ
ಟಿಶ್ಯೂ ಕಲ್ಚರ್‌ ಗಿಡಗಳು ಪ್ರಯೋಗಾಲಯದಲ್ಲಿ

ಕಳೆದ ಎರಡು ವರ್ಷಗಳಿಂದ ಹಳದಿ ಎಲೆ ರೋಗ ಪೀಡಿತ ಪ್ರದೇಶ ಹಾಟ್‌ಸ್ಫಾಟ್‌ ಎಂದು ಗುರುತಿಸಿಕೊಂಡಿರುವ ಪ್ರದೇಶಗಳಲ್ಲಿ ಇನ್ನೂ ಹಳದಿ ಎಲೆ ರೋಗ ಬಾಧಿತವಾಗದ ಅಡಿಕೆ ಮರದಿಂದ ಹಿಂಗಾರ ಸಂಗ್ರಹಿಸಿ ಅದರಿಂದ ಗಿಡ ಮಾಡುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಗಿಡದ ಒಂದು ಹಂತ ಸಿದ್ಧವಾಗುತ್ತಿದೆ. ಇನ್ನಷ್ಟೇ ಬೇರು ಹಾಗೂ ಎಲೆಗಳ ಹಂತಕ್ಕೆ ಬರಬೇಕಿದೆ. ಪ್ರತೀ ಹಂತವೂ ಎಚ್ಚರಿಕೆ ಬೇಕಾಗಿರುವುದರಿಂದ ನಿಧಾನ ಪ್ರಕ್ರಿಯೆ ಇದಾಗಿದೆ. ಎಲ್ಲಾ ಮರದ ಹಿಂಗಾರವೂ ಒಂದೇ ವೇಗದಲ್ಲಿ ಟಿಶ್ಯೂ ಕಲ್ಚರ್‌ ಮಾದರಿಯಲ್ಲಿ ಬೆಳೆಯಲು ಸಾಧ್ಯವಿಲ್ಲದ ಕಾರಣ, ಸ್ಯಾಂಪಲ್‌ಗಳು ಸಾಕಷ್ಟು ಬೇಕಾಗುತ್ತದೆ. ಇನ್ನೂ ಎರಡು ವರ್ಷದಲ್ಲಿ ಟಿಶ್ಯೂ ಕಲ್ಚರ್‌ ಗಿಡ ತಯಾರಾದರೂ ಅದರ ಬೆಳವಣಿಗೆ ಹಾಗೂ ಅಧ್ಯಯನದ ಬಳಿಕವಷ್ಟೇ ಕೃಷಿಕರಿಗೆ ಗಿಡ ಲಭ್ಯವಾಗಲು ಸಾಧ್ಯವಿದೆ. ಆದರೆ ಇದುವರೆಗಿನ ಬೆಳವಣಿಗೆ ಹಾಗೂ ಅಧ್ಯಯನದ ಪ್ರಕಾರ ಧನಾತ್ಮಕ ನಿರೀಕ್ಷೆ ಇದೆ.

Advertisement

ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕ ಡಾ.ಬಾಲಚಂದ್ರ ಹೆಬ್ಬಾರ್‌, ಹಿರಿಯ ವಿಜ್ಞಾನಿಗಳಾದ ಡಾ.ವಿನಾಯಕ ಹೆಗ್ಡೆ, ಡಾ.ರವಿ ಭಟ್‌, ಪ್ರಯೋಗಾಲಯದ ತಾಂತ್ರಿಕ ವಿಜ್ಞಾನಿ ಮುರಳಿಕೃಷ್ಣ ಹಾಗೂ ತಂಡ ಟಿಶ್ಯೂ ಕಲ್ಚರ್‌ ತಳಿಯ ಬಗ್ಗೆ ಕೃಷಿಕರ ತಂಡಕ್ಕೆ ಮಾಹಿತಿ ನೀಡಿದರು.

Advertisement

 

Advertisement

ಕೃಷಿಕರ ತಂಡದಲ್ಲಿ ಸುಳ್ಯ ಸಹಕಾರಿ ಯೂನಿಯನ್‌ ಅಧ್ಯಕ್ಷ ರಮೇಶ್‌ ದೇಲಂಪಾಡಿ, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ  ಸಂತೋಷ್‌ ಕುತ್ತಮೊಟ್ಟೆ, ಅಖಿಲಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ, ಸಂಪಾಜೆ-ಚೆಂಬು ಕೃಷಿಕ ಭವ್ಯಾನಂದ ಕುಯಿಂತೋಡಿ ಇದ್ದರು.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror