ಜ್ಞಾನದ ದಾರಿಗೆ ಸ್ಥಾನವಿರುವಂತೆ, ಧರ್ಮದ ಮಾರ್ಗಕ್ಕೆ ಸ್ಪಷ್ಟವಾದ ಸೂತ್ರಗಳ ಅಗತ್ಯವಿದೆ. ಸಂಕಷ್ಟಗಳನ್ನು ಆಲಿಸುವುದು, ಉದ್ದಾರಕ್ಕೆ ದಾರಿ ತೋರಿಸುವುದು ಮತ್ತು ಸಮಾಜದಲ್ಲಿ ಶುಭಚಿಂತನೆಗಳನ್ನು ಬೆಳೆಸುವುದೇ ಮಠಗಳ ಮೂಲ ಉದ್ದೇಶವಾಗಿದೆ ಎಂದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.
ಮಾಣಿ ಜನಭವನದಲ್ಲಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಸಪರಿವಾರ ಶ್ರೀರಾಮ ದೇವರ ಪ್ರತಿಷ್ಠಾ ವರ್ಧಂತಿ ಹಾಗೂ ಮಂಗಳೂರು ಹೋಬಳಿಯ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಗುರುಪರಂಪರೆ ಮತ್ತು ಶಿಷ್ಯರ ಸಂಗಮವಾಗಿರುವ ಮಠಗಳಿಗೆ ವಿಶಿಷ್ಟ ಮಹತ್ವವಿದ್ದು, ಮಠದ ಸತ್ವ ಮತ್ತು ಪ್ರೇರಣೆ ಪ್ರತಿಯೊಬ್ಬರ ಒಳಗೆ ಪ್ರವೇಶಿಸಬೇಕು ಎಂದರು.
ವೇದ-ಶಾಸ್ತ್ರಗಳು ನಮ್ಮ ಮೂಲವಾಗಿದ್ದು, ಅವುಗಳ ಬಗ್ಗೆ ಅರಿವು ಇರಬೇಕು. ಸಮಾಜದಲ್ಲಿ ಧಾರ್ಮಿಕ ಪ್ರವೃತ್ತಿ ಜಾಗೃತವಾಗುತ್ತಿರುವ ಈ ಸಂದರ್ಭದಲ್ಲಿ, ಪರಂಪರೆಯಿಂದ ದೂರ ಸರಿಯುವ ಕಾರ್ಯವಾಗಬಾರದು ಎಂದು ಹೇಳಿದರು. ಮಠಕ್ಕೆ ಸಲ್ಲಿಸುವ ಸೇವೆ ಸಮಾಜಕ್ಕೆ ಸಲ್ಲಿಸುವ ಸಮರ್ಪಣೆಯೇ ಆಗಿದ್ದು, ಮಠವು ಯಾರಿಂದಲೂ ಏನನ್ನೂ ಬೇಡದೇ ತನ್ನ ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದು ಅವರು ತಿಳಿಸಿದರು.
ಪರಂಪರೆಯಲ್ಲಿ ಅಡಿಕೆಯನ್ನು ಮಂಗಳಕರವಾಗಿ ಕಂಡಿದ್ದರೂ, ಇತ್ತೀಚಿನ ದಿನಗಳಲ್ಲಿ ಬೇರೆಬೇರೆ ವಸ್ತುಗಳ ಸಹವಾಸದಿಂದ ಅಡಿಕೆಗೆ ಅಪಕೀರ್ತಿ ಬಂದಿದೆ ಎಂಬ ಅಭಿಪ್ರಾಯವನ್ನೂ ಶ್ರೀಗಳು ವ್ಯಕ್ತಪಡಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಕಾರ್ಯಕ್ರಮದ ಅಂಗವಾಗಿ ಶ್ರೀಕರಾರ್ಚಿತ ದೇವರಿಗೆ ಕನಕಾಭಿಷೇಕ, ಪೂಗ ಪೂಜೆ, ಮಹಾ ಗಣಪತಿ ಹವನ, ಪೂರ್ಣ ನವಗ್ರಹ ಶಾಂತಿ, ರಾಮತಾರಕ ಹವನ, ಆಂಜನೇಯ ಹವನಗಳು ನೆರವೇರಿದವು. ಆಂಜನೇಯ ದೇವರಿಗೆ ರಜತ ಕವಚದ ರುದ್ರಾಕ್ಷಿ ಮಾಲೆ ಸಮರ್ಪಿಸಲಾಯಿತು.
ಈ ಸಂದರ್ಭ ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ನೂತನ ಗುರಿಕ್ಕಾರರಿಗೆ ಸಾಟಿ ಸನ್ನದು ಪ್ರಧಾನ ಮಾಡಲಾಗಿದ್ದು, ರಾಮಕೃಷ್ಣ ಭಟ್ ಕುಕ್ಕಿನಡ್ಕ ಅವರು ರಾಮನೈವೇದ್ಯಕ್ಕೆ ಭತ್ತ ಸಮರ್ಪಿಸಿದರು. ರಘುರಾಮ ಭಟ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಯೋಜನೆಗಳಿಗೆ ಸಮರ್ಪಣೆಗಳೂ ನಡೆದವು.
ಕಾರ್ಯಕ್ರಮದಲ್ಲಿ ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಾತೃ ಪ್ರಧಾನ ದೇವಿಕಾ ಶಾಸ್ತ್ರಿ, ಮಂಗಳೂರು ಮಂಡಲ ಅಧ್ಯಕ್ಷ ರಮೇಶ್ ಭಟ್, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅರವಿಂದ ದರ್ಬೆ, ಮುಳ್ಳೇರಿಯ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಸೇವಾ ಸಮಿತಿ ಕೋಶಾಧಿಕಾರಿ ಮೈಕೆ ಗಣೇಶ್ ಭಟ್, ಕಾರ್ಯದರ್ಶಿ ವೇಣುಗೋಪಾಲ ಕೆದ್ಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅವಲೋಕನ ನಡೆಸಿ ವಾರ್ಷಿಕ ವರದಿ ವಾಚಿಸಿದರು. ಪತ್ರಕರ್ತ ಉದಯಶಂಕರ ನೀರ್ಪಾಜೆ ಹಾಗೂ ಸುರೇಶ್ ಎಸ್. ಕಾರ್ಯಕ್ರಮ ನಿರೂಪಿಸಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…
ರಾಜಸ್ಥಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ರೈತರ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು…