ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡಿದ ಸಿನಿಮಾ(Cinema), ನಮ್ಮ ತುಳು ನಾಡಿನ ಸಂಸ್ಖೃತಿಯನ್ನು ಬಿಂಬಿಸುವ ಕಾಂತರ ಚಿತ್ರ(Kantara). ಅಷ್ಟೆಲ್ಲಾ ಸದ್ದು ಮಾಡಿದ್ದ ಚಿತ್ರದ(Movie) ಎರಡನೇ ಭಾಗ ಅದ್ದೂರಿಯಾಗಿ ಮತ್ತೆ ಜನರನ್ನು ರಂಜಿಸಲಿದೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಇದೀಗ ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ 2 ಸಿನಿಮಾ ಮಹೂರ್ತದ (Muhurta) ಕುರಿತಂತೆ ಪಂಜುರ್ಲಿ (Panjurl) ಮತ್ತು ಗುಳಿಗ ದೈವಕ್ಕೆ ಚಿತ್ರತಂಡ ಮೊರೆ ಹೋಗಿದ್ದು, ದೈವಗಳು ಅಸ್ತು ಎಂದಿವೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ಸಿನಿಮಾ ತಂಡ ಮುಹೂರ್ತಕ್ಕೆ ಸರ್ವ ಸಿದ್ಧತೆ ಮಾಡಿಕೊಂಡಿದೆ ಎಂಬ ಸುದ್ದಿ ಹೊರಬಿದ್ದಿದೆ.
ಮತ್ತೊಂದು ಸಮಾಚಾರವೆಂದರೆ, ಈ ಸಿನಿಮಾದಲ್ಲಿ 14ನೇ ಶತಮಾನದಿಂದ ಶುರುವಾಗುವ ಕಥೆ ಕೂಡ ಇರಲಿದೆಯಂತೆ. ಈ ಕುರಿತು ಚಿತ್ರತಂಡ ಮಾಹಿತಿ ನೀಡದೇ ಇದ್ದರೂ, ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲಿ ಕಾಂತರ ಕಥೆ ಹಾಟ್ ಕೇಕ್ ತರಹ ಮಾರಾಟವಾಗುತ್ತಿದೆ. ‘ಕಾಂತಾರ’ ಸಿನಿಮಾ ವರ್ಲ್ಡ್ ವೈಡ್ ರೀಚ್ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ‘ಕಾಂತಾರ’ ಪಾರ್ಟ್ 2 ಯಾವಾಗ ಎಂದು ಕಾದು ಕುಳಿತ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ಇದೇ ನವೆಂಬರ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ 2’ ಚಿತ್ರದ ಮುಹೂರ್ತ ಇದೇ ನವೆಂಬರ್ 27ರಂದು ಸೋಮವಾರ ಸರಳವಾಗಿ ಜರುಗಲಿದೆ.
ಕಾಂತಾರ (Kantara) ಸೂಪರ್ ಡೂಪರ್ ಹಿಟ್ ಆದಂತೆಯೇ ‘ಕಾಂತಾರ 2’ ಅದಕ್ಕಿಂತ ಹೆಚ್ಚಿನ ಯಶಸ್ಸು ಪಡೆದು ಗೆದ್ದು ಬೀಗಲೇಬೇಕೆಂದು ರಿಷಬ್ ಶೆಟ್ಟಿ ಕೂಡ ತೆರೆಮರೆಯಲ್ಲಿ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡೆ ಅಖಾಡಕ್ಕೆ ಕಾಲಿಡುತ್ತಿದ್ದಾರೆ. ಅದಕ್ಕಾಗಿ ತಮ್ಮ ಲುಕ್ ಕೂಡ ಜೇಂಜ್ ಮಾಡಿ, ಸಿನಿಮಾ ಕಥೆಯಲ್ಲಿ ಸಾಕಷ್ಟು ಕೆಲಸ ಮಾಡಿಯೇ ಕಾಂತಾರ 2ಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಕೂಡ ಶುರುವಾಗಲಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿನಿಮಾ ಮುಹೂರ್ತ ಸಮಾರಂಭದ ದಿನ ಸಿಗಲಿದೆ.
The film crew approached Panjurl and Guliga Deiva about the Muhurta of Kantara 2 directed by Rishabh Shetty and got information that the deities are astu. So the news has come out that the film team has made all preparations for Muhurta. Another news is that this movie will also have a story that starts from the 14th century. The movie ‘Kantara’ had a successful worldwide reach.
– ಅಂತರ್ಜಾಲ ಮಾಹಿತಿ
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…