ಮೂಲವ್ಯಾಧಿಯಲ್ಲಿ ಆಹಾರ ಕ್ರಮ ಹೇಗಿರ ಬೇಕು, ಯಾವೆಲ್ಲಾ ಆಹಾರ ತೆಗೆದುಕೊಳ್ಳಬಹುದು, ಏನನ್ನು ತಿನ್ನಬಾರದು.ಈ ಬಗ್ಗೆ ಡಾ.ಜ್ಯೋತಿ ಅವರು ವಿವರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆ ಎಂದರೆ ಅದು ಮೂಲವ್ಯಾಧಿ
ಲಕ್ಷಣಗಳು:
* ಮಲ ವಿಸರ್ಜನೆ ವೇಳೆ ಅತೀವ ನೋವು
* ಮಲಬದ್ಧತೆ
* ಗುದದ್ವಾರದಲ್ಲಿ ನೋವು, ಕಡಿತ
* ಮಲ ವಿಸರ್ಜನೆ ವೇಳೆ ರಕ್ತಸ್ರಾವ
* ಗುದದ್ವಾರದಲ್ಲಿ ಕಾಣಿಸಿಕೊಳ್ಳುವ ಮೊಳಕೆ ಅಥವಾ ಗುಳ್ಳೆ
ಸಾಮಾನ್ಯವಾಗಿ ಇಡೀ ದಿನ ಕುಳಿತು ಕೆಲಸ ಮಾಡುವವರಲ್ಲಿ, ಹೆಚ್ಚು ಮಸಾಲಾ ಪದಾರ್ಥ, ಆಲ್ಕೋಹಾಲ್ ಸೇವನೆ ಮಾಡುವವರಲ್ಲಿ ಕಾಣಿಸಿಕೊಳ್ಳುತ್ತದೆ
ಮೊದಲನೇ ಹಂತದಲ್ಲಿ ಮೂಲವ್ಯಾಧಿಯನ್ನು ಪತ್ತೆ ಹಚ್ಚಿ ಆಹಾರದಿಂದಲೇ ನಿಯಂತ್ರಣ ಮಾಡಬಹುದು
* ರಾಗಿ ಮತ್ತು ಗೋಧಿಯ ಬಳಕೆ
* ಬಾಳೆಹಣ್ಣು ಸೇವನೆ — ಫೈಬರ್ ಅಂಶ ಜಾಸ್ತಿ ಇರುವ ಕಾರಣ ಜೀರ್ಣಶಕ್ತಿಯನ್ನು ಉತ್ತೇಜಿಸಿ ಕರುಳನ್ನು ತಂಪಾಗಿರುತ್ತದೆ
* ನಾರಿನ ಅಂಶ ಅಧಿಕವಾಗಿರುವ ತರಕಾರಿಗಳು ಹಾಗೂ ಸೊಪ್ಪುಗಳ ಬಳಕೆ
* ಹೆಚ್ಚು ನೀರು ಕುಡಿಯುವುದರಿಂದ ದೇಹದ ಎಲ್ಲಾ ಕಲ್ಮಶಗಳನ್ನು ಹೊರ ಹಾಕುವುದು ಹಾಗೂ ಮಲಬದ್ಧತೆಯ ನಿವಾರಣೆ ಮಾಡವುದು
* ಒಂದೇ ಕಡೆ ಕುಳಿತುಕೊಳ್ಳಬೇಡಿ ಹಾಗೂ ಅತಿ ಗಟ್ಟಿಯಾದ ಆಸನಗಳ ಮೇಲೆ ಬಹಳ ಸಮಯದವರೆಗೆ ಕುಳಿತುಕೊಳ್ಳುವುದರಿಂದ ಮೂಲವ್ಯಾಧಿ ಸಮಸ್ಯೆ ಹೆಚ್ಚಾಗುತ್ತದೆ
ಆಲೂಗಡ್ಡೆ, ಕೋಳಿ ಮಾಂಸ,ಅತಿ ಮಸಾಲಾ ಪದಾರ್ಥ ಸೇವನೆ ಮಾಡಬೇಡಿ . ಲಘು ಆಹಾರ ಸೇವನೆ ಉತ್ತಮ. ಆಯುರ್ವೇದವು ಮೂಲವ್ಯಾಧಿಗೆ ಒಂದು ಅತ್ಯುತ್ತಮ ಚಿಕಿತ್ಸಾ ವಿಧಾನವಾಗಿದೆ ಮೂಲವ್ಯಾಧಿಯೊಂದಿಗೆ ಬರುವ ರೋಗ ಲಕ್ಷಣವನ್ನು ಕಡಿಮೆ ಮಾಡಲು ಉತ್ತಮ ಆಹಾರ ಸೇವನೆ ಅಗತ್ಯ ವಾತ ಪಿತ್ತ ಕಫ ದೋಷಗಳನ್ನು ಅರ್ಥ ಮಾಡಿಕೊಂಡು ಅವುಗಳಿಗೆ ಅನುಸಾರವಾಗಿ ಔಷಧಗಳನ್ನು ನೀಡುವುದು ಉತ್ತಮ. ಅನೇಕ ಆಯುರ್ವೇದ ಗಿಡಮೂಲಿಕೆಗಳ ಬಳಕೆ ಉದಾಹರಣೆಗೆ ಹರಿತಕಿ ತ್ರಿಫಲ ತ್ರಿಕಟು ಖದಿರ ಮೂಲವ್ಯಾಧಿ ಗಳ ವಿರುದ್ಧ ಹೋರಾಡಲು ಉತ್ತಮ ಅಭ್ಯಾಸಗಳ ಅಗತ್ಯ. ಹೆಚ್ಚು ನೀರನ್ನು ಸೇವಿಸುವುದರ ಮುಖಾಂತರ ಮಲಬದ್ಧತೆ ನಿವಾರಣೆ ಮಾಡಿ ರಕ್ತಸ್ರಾವವನ್ನು ತಡೆಗಟ್ಟಬಹುದು. ಉತ್ತಮ ಆಹಾರ ಪದ್ಧತಿ ಹಾಗೂ ಆಯುರ್ವೇದ ಗಿಡಮೂಲಿಗಳಿಂದ ತಯಾರಿಸಲಾದ ಔಷಧಿಗಳ ಪ್ರಯೋಗದಿಂದ ಮೂಲವ್ಯಾಧಿ ನಿವಾರಣೆ ಆಗದೆ ಇರುವ ಸಂದರ್ಭದಲ್ಲಿ ಆಯುರ್ವೇದದಲ್ಲಿ ಹೇಳಿರುವಂತಹ ಕ್ಷಾರಸೂತ್ರ ಅಗ್ನಿಕರ್ಮ ಚಿಕಿತ್ಸೆಗಳನ್ನು ಅಳವಡಿಸಲಾಗುತ್ತದೆ . ಕ್ಷಾರಸೂತ್ರ ಚಿಕಿತ್ಸೆ ಇದು ಆಯುರ್ವೇದ ಪದ್ಧತಿ ಯಲ್ಲಿ ಹೇಳಲಾದ ಒಂದು ಶಸ್ತ್ರಚಿಕಿತ್ಸೆ… ಪ್ರತಿ ಮೂಲವ್ಯಾದಿಯ ಸುತ್ತಲೂ ಕ್ಷಾರೀಯ ಧಾರವನ್ನು ಕಟ್ಟಲಾಗುವುದು. ಇದು ಸಮಯದ ಅವಧಿಯಲ್ಲಿ ಕುಗ್ಗುವಂತೆ ಮಾಡುತ್ತದೆ ಅಗ್ನಿ ಕರ್ಮ… ಕ್ವಾಟ್ರಾಯಿಸೇಷನ್ನ ಒಂದು ರೂಪವಾಗಿದೆ ಗುದದ್ವಾರದ ಹೊರಗಡೆ ಬಂದಿರುವ ಮೂಲವ್ಯಾಧಿಯನ್ನು ಸುಡುವಂತ ಕ್ರಿಯೆ ಮೂಲವ್ಯಾಧಿಯನ್ನು ನಿರ್ಲಕ್ಷಿಸದೆ ಆಯುರ್ವೇದ ವೈದ್ಯರ ಸಲಹೆಮೇರೆಗೆ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ.
ಡಾ. ಜ್ಯೋತಿ ಕೆ, ಮಂಗಳೂರು
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…