ಸುದ್ದಿಗಳು

#Tomato | ಮಾರುಕಟ್ಟೆಗೆ ಬಂದಿದೆ ಬಣ್ಣ ಬಣ್ಣದ ತರಹೇವಾರಿ ಟೊಮೆಟೊ ಹಣ್ಣು…! | ಕೆಂಪು ಟೊಮೆಟೋಗಿಂತ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಇದಕ್ಕೆ…! |

Share

ಟೊಮೆಟೋ ಬೆಲೆ ಗಗನಕ್ಕೇರಿ ಕುಳಿತಿದೆ. ದಿನದ ಸಾಂಬಾರಿಗೂ ಒಂದು ಟೊಮೆಟೋ #Tomato ಹಾಕಲು ಹಿಂದೆ ಮುಂದೆ ನೋಡುವಂತಾಗಿದೆ. ಅಂತದ್ದರಲ್ಲಿ ಮಾರುಕಟ್ಟೆಗೆ ಕಪ್ಪು ಟೊಮೆಟೋ, ಚಾಕಲೇಟ್ ಟೊಮೆಟೋ, ಹೀಗೆ ತರತರದ ಟೊಮೆಟೋ ಬಂದ್ರೆ ಅದನ್ನು ಕೊಳ್ಳುವವರಾರೋ..?. ಆದರೆ ಕೆಂಪು ಟೊಮೆಟೊ ಕೃಷಿ ಕೆಲವೊಮ್ಮೆ ಲಾಭ ನೀಡಿದ್ರೆ, ಇನ್ನೂ ಕೆಲವೊಮ್ಮೆ ಭೀಕರ ನಷ್ಟ ತರುತ್ತದೆ. ರೇಟ್‌ ಕಡಿಮೆಯಾದ್ರೆ ರೈತರು ಟೊಮೆಟೊಗಳನ್ನು ರಸ್ತೆಗೆ ಎಸೆದು ಬಿಡ್ತಾರೆ. ದಿನಬಳಕೆಯ ಕೆಂಪು ಟೊಮೆಟೋ ಪರಿಸ್ಥಿತಿ ಹೀಗಿರುವಾಗ ಈ ಕಪ್ಪು ಟೊಮೆಟೊ, ಚಾಕಲೇಟ್ ಟೊಮೆಟೋ ಕೊಳ್ಳುವವರಾರು ಅನ್ನೋದೆ ಪ್ರಶ್ನೆ. ಆದರೆ ಇದಕ್ಕೆ ಭಾರಿ ಬೇಡಿಕೆ ಇದೆಯಂತೆ, ಬೆಳೆದರೆ ಯಾವಾಗಲೂ ಲಾಭವನ್ನೇ ತಂದುಕೊಡುತ್ತೆ ಅಂತೆ…!

 ಈ ಚಾಕೊಲೇಟ್ ಟೊಮ್ಯಾಟೊಗಳು ಕಾಯಿ ಇದ್ದಾಗ ಹಸಿರು ಬಣ್ಣದಲ್ಲಿ ಕಾಣುತ್ತವೆ. ಆದರೆ ಮಾಗಿದಾಗ ಚಾಕೊಲೇಟ್ ಬಣ್ಣಕ್ಕೆ ತಿರುಗುತ್ತವೆ. ಪಶ್ಷಿಮ ಬಂಗಾಳದ ಮುಸ್ತಫಾನಗರದ ದಂಪತಿ ಪ್ರಥಮ ಬಾರಿಗೆ ಈ ಚಾಕಲೇಟ್ ಟೊಮ್ಯಾಟೊ ಕೃಷಿ ಮಾಡಿ ಮಾರಾಟಕ್ಕೆ ಇಟ್ಟಿದ್ದಾರೆ.  ಚಾಕೋಲೇಟ್ ಟೊಮ್ಯಾಟೊ ಬೀಜವನ್ನು ಒಮ್ಮೆ ಬಿತ್ತಿದರೆ 4-5 ತಿಂಗಳಿಗೆ ಉತ್ತಮ ಬೆಳೆಯನ್ನು ಪಡೆಯಬಹುದು. ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಈ ಟೊಮ್ಯಾಟೊ ಬೀಜಗಳನ್ನು ಬಿತ್ತಿದರೆ, ಜೂನ್-ಜುಲೈನಲ್ಲಿ ಟೊಮ್ಯಾಟೊಗಳು ಕಟಾವಿಗೆ ಬರುತ್ತವೆ.

ಈ ಟೊಮ್ಯಾಟೊದಿಂದ ಚಟ್ನಿಯನ್ನು ತಯಾರಿಸಲಾಗುತ್ತದೆ. ಇವು ಇತರ ಟೊಮ್ಯಾಟೊಗಳಂತೆ ಹುಳಿಯಾಗಿರುವುದಿಲ್ಲ, ಆದರೆ ಸಿಹಿಯಾಗಿರುತ್ತವೆ. ಹಾಗಾಗಿ ತಿನ್ನಲು ತುಂಬಾ ರುಚಿಕರವಾಗಿವಾಹಿರುತ್ತದೆ.ಈ ಟೊಮ್ಯಾಟೊಗಳನ್ನು ಮಾರುಕಟ್ಟೆಯಲ್ಲಿ ಕೆಜಿಗೆ 80 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ. ಈ ಟೊಮ್ಯಾಟೊಗಳು ಮೂಲತಃ ಸೋಲಾನಮ್ ಲೈಕೋಪರ್ಸಿಕಮ್ ಜಾತಿಯಿಂದ ಬಂದವು. ಇವು ಕಾಯಿಯಾಗಿದ್ದಾಗ ಹಸಿರು ಮತ್ತು ಮಾಗಿದಾಗ ಚಾಕೊಲೇಟ್ ಬಣ್ಣವನ್ನು ಹೊಂದಿರುತ್ತವೆ. ಈ ಟೊಮೆಟೊ ಪ್ರಭೇದವು ಪಶ್ಚಿಮ ದಕ್ಷಿಣ ಅಮೆರಿಕಾ ಮತ್ತು ಮಧ್ಯ ಅಮೆರಿಕಕ್ಕೆ ಸ್ಥಳೀಯವಾಗಿದೆ. ಇದರ ಬಣ್ಣ ಚಾಕೊಲೇಟ್‌ನಂತೆ ಮತ್ತು ಅದರ ರುಚಿ ಚಾಕೊಲೇಟ್‌ನಂತೆಯೇ ಇರುತ್ತದೆ.

(ಕೃಪೆ: ಅಂತರ್ಜಾಲ)

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | ಕರಾವಳಿ, ಮಲೆನಾಡು ಭಾಗಗಳಲ್ಲಿ ಬೇಸಿಗೆ ಮಳೆಯು ಮುಂದುವರಿಯುವ ಲಕ್ಷಣ |

ರಾಜ್ಯದ ದಕ್ಷಿಣ ಕರಾವಳಿ, ಮಲೆನಾಡು ಭಾಗಗಳಲ್ಲಿ ಬೇಸಿಗೆ ಮಳೆಯು ಮುಂದುವರಿಯುವ ಲಕ್ಷಣಗಳಿವೆ. ಉತ್ತರ…

17 hours ago

ಅಂತರಂಗ | ಸ್ವಾರ್ಥರಹಿತ ಬೇಡಿಕೆಗಳಿಗೆ ರಾಜಕೀಯದಲ್ಲಿ ಮಾನ್ಯತೆಯಿಲ್ಲ…!

ರಾಜಕೀಯ ಎನ್ನುವುದು ಕೃಷಿ ಹಾಗೂ ಅಡಿಕೆ ಬೆಳೆಗಾರರ ವಿಚಾರದಲ್ಲಿ ಕೂಡಾ ಹೇಗೆ ಇರುತ್ತದೆ,…

20 hours ago

ಬದುಕು ಪುರಾಣ | ಎಲ್ಲರೊಳಗೂ ‘ಕುಂಭಕರ್ಣ’ನಿದ್ದಾನೆ!

ಮನುಷ್ಯನಿಗೆ ಆಹಾರ, ನಿದ್ರೆಗಳು ಸಹಜ. ವಯೋವೃದ್ಧರಿಗೆ ಬೋಜನದ ನಂತರದ ನಿದ್ರೆಯಿಂದ ಮೈಮನಗಳಿಗೆ ಸ್ಫೂರ್ತಿ.…

20 hours ago

ದಾವಣಗೆರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ | ಬಾಡಿಗೆ ಆಧಾರದಲ್ಲಿ ಖಾಸಗಿ ಕೊಳವೆಬಾವಿ

ದಾವಣಗೆರೆ ಜಿಲ್ಲೆಯ 6 ತಾಲೂಕುಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ 197…

20 hours ago

ಯಾದಗಿರಿ ಜಿಲ್ಲೆಗೆ ತಾಪಮಾನ ಎಚ್ಚರಿಕೆ | ಮುಂದಿನ ಮೂರು ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ತಾಪಮಾನ ದಾಖಲಾಗುವ ಸಾಧ್ಯತೆ

ಯಾದಗಿರಿ ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ತಾಪಮಾನ…

20 hours ago

ಏಪ್ರಿಲ್ 30 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ

ವಿಶ್ವವಿಖ್ಯಾತ ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ…

20 hours ago