ಮಂಗಳೂರು| ಚಿಣ್ಣರ ಕೈಯಲ್ಲಿ ಡಿಜಿಟಲ್ ಸ್ಲೇಟ್: ಮನೆಮಾತಾದ ಇ-ಸ್ಲೇಟ್ ಅಭಿಯಾನ

March 30, 2022
9:19 PM

ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿರುವ ಸೈಬರ್ ಕ್ರೈಂ ತಜ್ಞ ಡಾ.ಅನಂತ ಪ್ರಭು ಅವರು ನಾಲ್ಕು ತಿಂಗಳುಗಳ ಹಿಂದೆ ಪ್ರಾರಂಭಿಸಿರುವ ಇ- ಸ್ಲೇಟ್‌ ಅಭಿಯಾನದಿಂದ ಪ್ರೇರಿತರಾದ ದಾನಿಗಳು, ತಮ್ಮ ಊರಿನ ಅಂಗನವಾಡಿ ಚಿಣ್ಣರಿಗೆ ಇ-ಸ್ಲೇಟ್ ವಿತರಿಸಿ, ಸಂಭ್ರಮಿಸುತ್ತಿದ್ದಾರೆ. ಈ ಸಂಖ್ಯೆ ಈಗ 5,000 ದಾಟಿದೆ.

ಒಮ್ಮೆ ಆಟಿಕೆ ಖರೀದಿಗೆ ಹೋದಾಗ ಇ-ಸ್ಲೇಟ್ ಕಣ್ಣಿಗೆ ಬಿತ್ತು. ಇದನ್ನು ಖರೀದಿಸಿ ಅಂಗನವಾಡಿ ಮಕ್ಕಳಿಗೆ ವಿತರಿಸಿದೆ. ಇದರಿಂದ ಪ್ರೇರಿತರಾದ ಅನೇಕ ಸ್ನೇಹಿತರು, ಅಭಿಯಾನಕ್ಕೆ ಕೈಜೋಡಿಸಿದರು’ ಎಂದು ಅನಂತ ಪ್ರಭು ತಿಳಿಸಿದ್ದಾರೆ. ಅನಂತ ಪ್ರಭು ಅವರ ಇ-ಸ್ಲೇಟ್‌ ಅಭಿಯಾನವು ವೈರಲ್‌ ಆಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಜತೆಗೆ ಹಾವೇರಿ, ಗದಗ ಜಿಲ್ಲೆಗಳಲ್ಲೂ ಇದು ಆರಂಭವಾಗಿದೆ.

ಟ್ಯಾಬ್ಲೆಟ್ ಅಳತೆಯಲ್ಲಿರುವ ಇ-ಸ್ಲೇಟ್‌ನಲ್ಲಿ ಪೆನ್ ಮಾದರಿಯ ಬಳಪವಿದೆ. ಮಕ್ಕಳು ಎಲ್‌ಸಿಡಿ ಪರದೆಯಲ್ಲಿ ಬರೆದಿದ್ದನ್ನು ಡಿಲೀಟ್ ಬಟನ್ ಮೂಲಕ ಅಳಿಸಬಹುದು. ಅಗತ್ಯ ಇದ್ದಿದ್ದನ್ನು ಲಾಕ್ ಮಾಡಿಯೂ ಇಟ್ಟುಕೊಳ್ಳಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕರಾವಳಿ–ಮಲೆನಾಡಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ; ಉದ್ಯೋಗ ಸೃಷ್ಟಿಗೆ ಸರ್ಕಾರದ ಒತ್ತು
October 7, 2026
6:50 AM
by: ದ ರೂರಲ್ ಮಿರರ್.ಕಾಂ
ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ; ಪರಿಷತ್ ಚುನಾವಣೆ ಬಳಿಕ ಅಂತಿಮ ಘೋಷಣೆ
October 7, 2026
6:45 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್
October 6, 2026
7:03 AM
by: ದ ರೂರಲ್ ಮಿರರ್.ಕಾಂ
ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ
October 4, 2026
6:37 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror