ತುಪ್ಪ ತಿಂದ ಬಾಯಲ್ಲಿ ತಪ್ಪು ಬಂದೀತೇ?

September 23, 2024
12:49 PM
ಭಾರತದಂತಹ ಗೋವನ್ನು ಪೂಜನೀಯವಾಗಿ ಕಾಣುವ ದೇಶದಲ್ಲಿ ಇಂತಹ ತೈಲ/ತುಪ್ಪಗಳ ದಾರಿದ್ರ್ಯ ಏಕಾಯಿತು? ತರ್ಕಿಸಬೇಡವೇ?

ತಿರುಪತಿ ಲಾಡುಪ್ರಸಾದ ಪ್ರಾಣಿಜನ್ಯ ಕೊಬ್ಬಿನಿಂದ ತಯಾರಿಸುತ್ತಾರೆ ಎಂಬ ಸುದ್ದಿ ಬಹಳ ಪ್ರಸಾರವಾಗ್ತಿದೆ.
ಇದು ಹೊಸತಲ್ಲ. ಗೋವನ್ನು ಪೂಜನೀಯವಾಗಿ ಕಾಣುವವರ ಹೊಟ್ಟೆಗೆ ಗೋವಿನ ಕೊಬ್ಬು ಸೇರಿಸಬೇಕೆಂಬ ಹುನ್ನಾರ ಬಹಳ ಹಿಂದಿನದು. ಆದ್ರೆ ಸರಕಾರಗಳು ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಸರಕಾರೀ ಆದಾಯಕ್ಕಾಗಿ ವಶಪಡಿಸಿಕೊಂಡಿರುವ ದುರಾಡಳಿತದ ಫಲ ಇದು. ಅನ್ಯಮತೀಯರ ಧಾರ್ಮಿಕ ವ್ಯವಸ್ಥೆಗಳಿಗೆ ಅವರದೇ ಆಡಳಿತ ಆದರೆ ಹಿಂದೂ ಧಾರ್ಮಿಕ ಆದಾಯ ಮಾತ್ರ ಸರಕಾರದ್ದೆಂಬ ಧೋರಣೆಯನ್ನು ಹಿಂದುಗಳೇ ತಿರಸ್ಕರಿಸದಿರುವುದೂ ಕೂಡ ಪ್ರಮುಖ ಕಾರಣ. ಪ್ರಸಾದಕ್ಕೆ ಬಳಸುವ ತುಪ್ಪ ಮಾತ್ರ ಅಲ್ಲ ಇತರ ಕಡೆ ಬಳಸುವ ತುಪ್ಪದ ಮೂಲ ಯಾವುದು ಎಂಬುದೇ ಅನುಮಾನಾಸ್ಪದ ಸಂಗತಿ.ಯಾಕೆಂದರೆ ಪ್ರಾಣಿವಧೆಯ ನಂತರದ ವಿವಿಧ ಹಂತಗಳಲ್ಲಿ ಅದರ ಉಪಉತ್ಪನ್ನವಾಗಿ ಮೂಳೆ ಚರ್ಮ ಹಾಗೂ ವಿವಿಧ ತ್ಯಾಜ್ಯಗಳಿಂದ ಕೊಬ್ಬನ್ನು ಪ್ರತ್ಯೇಕಿಸಲಾಗ್ತದೆ ಎಂಬ ವಿಷಯ ಇಂದು ನಿನ್ನೆಯದಲ್ಲ. ಮಾಂಸೋದ್ಯಮ ಮಾತ್ರ ಅಲ್ಲ ಯಾವುದೇ ಉದ್ಯಮ ಯಶಸ್ವಿಯಾಗಬೇಕಾದರೆ ಅದರ ತ್ಯಾಜ್ಯವೂ ಉಪಯೋಗಿ ಅನ್ನಿಸಿ ಮಾರಾಟ ಮಾಡಿದರೆ ಆ ಉದ್ಯಮಕ್ಕೆ ಅದೊಂದು ಆದಾಯ ತಾನೆ. ಹಾಗೆ ಮಾಂಸೋದ್ಯಮದಲ್ಲಿ ತ್ಯಾಜ್ಯಗಳಿಂದ ಕೊಬ್ಬು ಬೇರ್ಪಡಿಸಿ ವಿವಿಧ ಎಣ್ಣೆ ತುಪ್ಪಗಳಿಗೆ ಬೆರಕೆ ಮಾಡಿ ಅಥವಾ ಅದರಿಂದಲೇ ಸಿದ್ಧತಿನುಸುಗಳನ್ನು ತಯಾರಿಸಿ ಜನರ ಹೊಟ್ಟೆ ಎಂಬ ತೊಟ್ಟಿಗೆ ಸೇರಿಸಿದರೆ ಹಲವು ಪ್ರಯೋಜನ ಆ ಉದ್ಯಮಕ್ಕೆ ಇದೆ. ಜನರಿಗೂ ಕಡಿಮೆಬೆಲೆಗೆ ಸಿಕ್ಕರೇ ಖುಷಿ.…..ಮುಂದೆ ಓದಿ….

Advertisement

ಆದ್ದರಿಂದ ಹೀಗೆ ಮಾಡುವುದು ಅಸಂಭವ ಅಂತ ಯಾರೂ ಅಂದುಕೊಳ್ಳಬೇಕಿಲ್ಲ.  ತಿರುಪತಿ ಲಾಡಿನ ವಿಚಾರ ಅಲ್ಲದೆ ಇಂದು ಯಾವುದೇ ಸಸ್ಯಾಹಾರಿಗಳೂ ಕೂಡ ಎಣ್ಣೆ, ಎಣ್ಣೆತಿಂಡಿ ಹಾಗೂ ತುಪ್ಪ ಬೆಣ್ಣೆ ಗಳನ್ನು ಮಾರುಕಟ್ಟೆಗಳಿಂದಲೇ ಖರೀದಿಸಿ ತರುವವರಾದರೆ ತಾವು ಧೈರ್ಯವಾಗಿ ಸಸ್ಯಾಹಾರಿ ಎಂದು ಘೋಷಿಸುವಂತೆಯೇ ಇಲ್ಲ. ಡಾಲ್ಡಾ ಎಂಬ ವನಸ್ಪತಿ ಹೆಸರಿನ ಕೊಬ್ಬು ಬಹಳ ಹಿಂದೆಯೇ ದೇವರ ದೀಪದಿಂದ ಹಿಡಿದು ಸಕಲ ತಿಂಡಿಗಳಲ್ಲೂ ವ್ಯಾಪಿಸಿ ಎಲ್ಲರ ಹೊಟ್ಟೆ ಸೇರಿಯಾಗಿದೆ.
ಯಾಕೆ ಹೀಗಾಯಿತು? ಭಾರತದಂತಹ ಗೋವನ್ನು ಪೂಜನೀಯವಾಗಿ ಕಾಣುವ ದೇಶದಲ್ಲಿ ಇಂತಹ ತೈಲ/ತುಪ್ಪಗಳ ದಾರಿದ್ರ್ಯ ಏಕಾಯಿತು? ತರ್ಕಿಸಬೇಡವೇ?

ಸ್ವಾತಂತ್ರ್ಯ ಪೂರ್ವದ ಆಕ್ರಮಣಕಾರರ ಗೋವಧೆಯ ಸಂಗತಿ ಪಕ್ಕಕ್ಕಿರಲಿ,ಸ್ವಾತಂತ್ರ್ಯಾನಂತರದ ಭಾರತದಲ್ಲಿ ಯಾವಾಗಿನಿಂದ ಅಲ್ಪಸಂಖ್ಯಾತ ಗೋ ಹಂತಕರ ಸಮುದಾಯವನ್ನು ಇನ್ನಿಲ್ಲದ ಸವಲತ್ತುಗಳಿಂದ ಸಾಕಲಾಯಿತೋ ಅಂದಿನಿಂದ ನಿರಂತರ ಗೋವಧೆ ನಡೆಯುತ್ತಾ ಬಂತು. ಗೋವು ಮಾತ್ರವಲ್ಲ ಹಾಲು ಮೊಸರು ಬೆಣ್ಣೆ ತುಪ್ಪಗಳನ್ನು ಯಥೇಚ್ಛ ಪೂರೈಸ್ತಿದ್ದ ಎಮ್ಮೆಗಳೂ  ಕೂಡ ಅವರ ಹೊಟ್ಟೆ ಸೇರಿದವು.ಅಲ್ಪಸಂಖ್ಯಾತ ಮುಸ್ಲಿಮರ ಸಂಖ್ಯಾಬಲ ವೃದ್ಧಿಯಾದಂತೆ ಹೊಟ್ಟೆಗಳೂ ಹೆಚ್ಚಾದವಲ್ಲಾ  ಅದೇ ಸಮಯಕ್ಕೆ ರೈತಾಪಿ ವರ್ಗಕ್ಕೆ ಯಾವುದೇ ಸವಲತ್ತು ಅನುದಾನ ಸಿಗದೆ ವಸ್ತುಗಳ ಬೆಲೆ ಏರಿಕೆಯ ಬೇಗೆಗೆ ಹೈನುಗಾರಿಕೆ, ಗೌಳಿಗತನಗಳು ಕುಸಿಯಲಾರಂಬಿಸಿತು. ಇನ್ನೊಂದೆಡೆ ಕ್ಷೀರಕ್ರಾಂತಿಯ ಎಂಬ ಹೆಸರಿನಲ್ಲಿ ದೇಶೀ ಗೋ,ಮಹಿಷಿ ಗಳು ವಿಕ್ರಯಿಸಲ್ಪಟ್ಟು ಹಾಲಿನ ಯಂತ್ರಗಳಂತಹ, ಮುದಿಯಾದಾಗ ಹೊರೆಯಾಗಬಲ್ಲ,ಹೋರಿಕರುಗಳು ಮಾಂಸಕ್ಕೇ ಸೈ ಅನಿಸಿದ, ಹಿಂಡಿ ಹುಲ್ಲು ಬೂಸಾಗಳ ಬೆಟ್ಟವನ್ನೇ ಕರಗಿಸಬಲ್ಲ ವಿದೇಶೀ ತಳಿಗಳೂ ಬಂದು ಹೈನುಗಾರಿಕೆ ಎಂಬ ಉದ್ಯಮವಾಯಿತು.
ಇದರಿಂದಲಾದರೂ ದೇವಾಲಯ,ಭೋಜನಾಲಯ,ಆಹಾರೋದ್ಯಮಗಳ ಬೇಡಿಕೆಗೆ ಬೇಕಾದ ತುಪ್ಪ ಸಿಕ್ಕಿತೇ?
ತುಪ್ಪವೇನೋ ಸಿಗ್ತಿತ್ತು ಆದ್ರೆ ಚೌಕಸಿಗೆ, ಕಡಿಮೆ ಬೆಲೆಗೆ ಸಿಗಬೇಕಲ್ವಾ? ಮಾತ್ರವಲ್ಲ ತಿಂಡಿ ಕೆಡದೆ ಉಳಿಯುವಂತಹ ತುಪ್ಪ ಎಣ್ಣೆಗಳೇ ಆಗಬೇಕು ತಾನೆ.

ಆಗ ವ್ಯಾಪಾರವೇ ಜೀವಾಳವಾಗಿರುವ ಕೆಲವು ಮಂದಿಗೆ ಸಿಕ್ಕ ತುಪ್ಪದ ಪರ್ಯಾಯ  ಪ್ರಾಣಿಜನ್ಯ ಕೊಬ್ಬಿನ ಮೂಲವೇ ಈ ಮಾಂಸೋದ್ಯಮ. ಇದರಿಂದ ಸಿಗಬಲ್ಲ ಕೊಬ್ಬಿನ ಬಣ್ಣ ರುಚಿಯನ್ನು ತೆಗೆದು ಯಾವುದಕ್ಕೂ ಕಲಬೆರಕೆ ಮಾಡಬಲ್ಲ ಕೊಬ್ಬು ಕಡಿಮೆಬೆಲೆಗೆ ವ್ಯಾಪಿಸಿತು.

ಇಂದು ಶುದ್ಧ ತುಪ್ಪ ಎಂಬ ಹೆಸರಿನಲ್ಲಿ ಸಿಗುವ ಯಾವುದೇ ತುಪ್ಪವನ್ನೂ ಅನುಮಾನದಿಂದಲೇ ನೋಡಬೇಕಾಗಿದೆ. ಇಷ್ಟಕ್ಕೂ ಈ ತುಪ್ಪದ ದಂಧೆಗೆ ಮೂಲವೇ ಎಗ್ಗಿಲ್ಲದ ಗೋವಧೆ ಹಾಗೂ ಗೋವು ಎಮ್ಮೆಗಳ ಮಾಂಸೋದ್ಯಮ.ತುಪ್ಪದ ಹೆಸರಿನಲ್ಲಿ ಪ್ರಾಣಿಜನ್ಯ ಕೊಬ್ಬು ಪೂರೈಸುವ ದಂಧೆ ಕೊನೆಯಾಗಿ ಜನರ ಆರೋಗ್ಯ ಸುದಾರಿಸಬೇಕಾದರೆ ದೇಶೀ ಜಾನುವಾರುಗಳ ಹಾಲಿನಿಂದ ತಯಾರಾಗುವ ತುಪ್ಪಕ್ಕೆ ಯೋಗ್ಯಬೆಲೆ ಸಿಗಬೇಕು. ಆದರೆ ಕಡಿಮೆ ಬೆಲೆಗೆ ಕೊಡುವ ವ್ಯಾಪಾರಿ ಸ್ಪರ್ಧೆಯಲ್ಲಿ ತಾಜಾ ತುಪ್ಪಕ್ಕೆ ಹಿನ್ನೆಡೆಯೇ ನಿಶ್ಚಿತ.

ಮಾತ್ರವಲ್ಲ ತಾಜಾ ತುಪ್ಪ ಸಿಗಬೇಕಿದ್ರೆ ಜಾನುವಾರು ಸಾಕಣೆ ಸುಲಭವಾಗಬೇಕು.ಅವುಗಳ ನಿರ್ವಹಣಾ ವೆಚ್ಚ ಕಡಿಮೆಯಾಗಬೇಕು.ಅದಕ್ಕಾಗಿ ಸರಕಾರಗಳು ರೈತಪರವಾಗಿ  ಏನು ಕ್ರಮ ಕೈಗೊಂಡಿವೆ?   ದೇಶೀ ಜಾನುವಾರುಗಳ ಸಾಕಣೆಗೆ  ಸರಕಾರವು ರೈತರಿಗೆ ಅನುದಾನ ಗಳನ್ನು ಹೆಚ್ಚಿಸಬೇಕು. ಗೋ ಹಂತಕರಿಗೆ ಮನೆ,ಆಹಾರ ಇತ್ಯಾದಿ ಉಚಿತ ನೀಡುವ ಬದಲು ದೇಶದ ಜನರ ಹೊಟ್ಟೆ ತುಂಬಿಸಲು ಶ್ರಮಿಸುವ ರೈತಾಪಿ ವರ್ಗಕ್ಕೆ  ಜಾನುವಾರು ಸಾಕಣೆಗೆ ಉಚಿತ ಮೇವು ಹಿಂಡಿ ಮತ್ತು ಸ್ಥಳ,ಹಟ್ಟಿ ನೀಡಬೇಕು.  ಆಗ ಮಾತ್ರ ಪರಿಶುದ್ಧ ಹಾಲು ತುಪ್ಪಗಳು ಲಭ್ಯವಾದೀತು. ಇಂದು ಗೋ ಸಂರಕ್ಷಣಾ ನೀತಿಗಳು ರೈತರು ಸುಲಭವಾಗಿ ಸಾಕುವುದಕ್ಕೆ ಪೂರಕವಾಗಿಲ್ಲ.ಹಿಂದೂ ಧಾರ್ಮಿಕ ಮನೋಭಾವಕ್ಕೂ ಪೂರಕವಾಗಿ ಗೋಪಾಲನೆ ಆಗಬೇಕಿದ್ರೆ ಕೊಂಚ ಪ್ರಾಚೀನ ಭಾರತದ ಪರಂಪರೆಯನ್ನು ಅವಲೋಕಿಸಬೇಕು.

ಮನುಸ್ಮೃತಿ ಅಂದರೇ ಉರಿದುಬೀಳುವ ಆಧುನಿಕ ಮಂದಿಗೆ ಮನುಸ್ಮೃತಿಯಲ್ಲಿ ಗೋ ಜಾತಿಯ ಪಶುಪಾಲನೆಗೆ ಆಡಳಿತವ್ಯವಸ್ಥೆ ಯಾವ್ಯಾವ ನೀತಿ ಅನುಸರಿಸಬೇಕು ಎಂಬ ಅಂಶಗಳನ್ನು ಮನು ವಿವರಿಸಿರುವ ಬಗ್ಗೆ ಒಮ್ಮೆ ಕಣ್ಣುಹಾಯಿಸಿದರೆ ಸಾಕು ಗೋಸಂಪತ್ತಿಗೆ ಪ್ರಾಚೀನ ಭಾರತ ಯಾವ ಮಹತ್ವ ಕೊಟ್ಟಿದೆ ಎಂಬ ಅರಿವಾದೀತು.

ಗೋವುಗಳ ಪಾಲನೆ ಹಾಗೂ ಸಂರಕ್ಷಣೆಯ ಕುರಿತು ಮನುಮಹರ್ಷಿಯು ತನ್ನ ಮನುಸ್ಮೃತಿಯಲ್ಲಿ ಏನು ಹೇಳಿದ್ದಾನೆ ಎಂಬ ತಾತ್ಪರ್ಯದ ಆಧಾರದಲ್ಲಿ ಅಂದು ಗೋಪಾಲನೆ ದೇಶದ ಸಮೃದ್ಧಿಯ ಮೂಲವಾಗಿತ್ತು ಎಂಬುದು ಗಮನಾರ್ಹ.ಕೆಲವು ಅಂಶಗಳನ್ನು ಗಮನಿಸೋಣ.

ಮನುಸ್ಮೃತಿಯ ಪ್ರಕಾರ:

  • ಹಗಲಿನಲ್ಲಿ ಪಶುಪಾಲನೆಯ ಜವಾಬ್ದಾರಿ ಆಳಿನದು ಹಾಗೂ ರಾತ್ರಿಯಲ್ಲಿ ಪಶುಗಳ ಒಡೆಯನದು. ಆದ್ದರಿಂದ ಆ ಸಮಯದಲ್ಲಿ ಸಂಭವಿಸುವ ತೊಂದರೆಗಳಿಗೆ ಆ ಹೊತ್ತಿನ ಜವಾಬ್ದಾರಿಯವರೇ ಹೊಣೆಗಾರರು.
  • ದನಕಾಯುವ ಗೌಳಿಗನಿಗೆ ವೇತನ ಇಲ್ಲದಿದ್ದರೆ ತಾನು ಕಾಯುವ ಹತ್ತರಲ್ಲಿ ಒಂದರ ಹಾಲನ್ನು ಒಡೆಯನ ಅಪ್ಪಣೆಪೂರ್ವಕ ಕರೆದುಕೊಳ್ಳಬಹುದು.
  • ಗೋ ಕಾಯುವ ವೃತ್ತಿಯವನು ತನ್ನ ನಿರ್ಲಕ್ಷ್ಯದಿಂದ ನಷ್ಟ ಉಂಟಾದರೆ ಅದನ್ನು ಒಡೆಯನಿಗೆ ತುಂಬಿಕೊಡಬೇಕು.
    ಕಳ್ಳರ ಪಾಲಾದರೆ ಕಾಯುವವನ ತಪ್ಪಿಲ್ಲ. ಆದರೆ  ಒಡೆಯನಿಗೆ ತಿಳಿಸತಕ್ಕದ್ದು.
  • ಪಶುಗಳು ಸಹಜ ಮರಣ ಹೊಂದಿದರೆ ಯಜಮಾನನಿಗೆ ತಿಳಿಸತಕ್ಕದ್ದು.
  • ಕಾಡುಪ್ರಾಣಿಗಳ ದಾಳಿಯಿಂದ ರಕ್ಷಿಸುವುದು ಗೋ ಕಾಯುವಾತನ ಕರ್ತವ್ಯ. ಆಗ ನಷ್ಟವಾದರೆ ಆತನೇ ಹೊಣೆ.
  • ಒಂದು ಗ್ರಾಮದ ಸುತ್ತಲೂ ನಾಲ್ಕುನೂರು ಮೊಳದಷ್ಟು ವಿಸ್ತೀರ್ಣದ ಜಾಗವನ್ನು ಗೋಮಾಳವಾಗಿ ಕಾದಿರಿಸಬೇಕು.
  • ನಗರದಲ್ಲಿ ಇದರ ಮೂರರಷ್ಟು ಜಾಗವನ್ನು ಮೀಸಲಿಡಬೇಕು.
  • ಬೇಲಿ ಹಾಕದ ರೈತನ ಬೆಳೆಯನ್ನು ಪಶುಗಳು ತಿಂದರೆ ರೈತನೇ ಹೊಣೆ.
  • ಬೇಲಿ ಹಾಕಿದ್ದಾಗಲೂ ಪಶುಗಳು ನುಗ್ಗಿ ಹಾಳು ಮಾಡಿದರೆ ಪಶುಪಾಲಕನಿಗೆ ದಂಡ ವಿಧಿಸಬೇಕು.
  • ಶುಗಳು ಬೆಳೆಯನ್ನು ತಿಂದು ಹಾಳು ಮಾಡಿದಾಗ ಆ ರೈತನ ತೆರಿಗೆ ವಿನಾಯಿತಿ ಕೊಡಬೇಕು.

ಇಂತಹ ನೀತಿಗಳು ಪಶುಪಾಲನೆಯ ಕುರಿತು ವಹಿಸಿದ್ದ ಆಸ್ಥೆಯ ದ್ಯೋತಕ. ಈ ನೀತಿಗಳು ಇಂದಿನಕಾಲಕ್ಕೆ ಎಷ್ಟು ಸಮಂಜಸ ಅಥವಾ ಎಷ್ಟು ಅನ್ವಯ ಎಂಬ ಕುತರ್ಕ ಮಾಡದೆ ಅಥವಾ ಮನು ಜಾತಿವಾದಿ ಎಂಬ ಹಳದಿ ದೃಷ್ಟಿಯಿಂದಲೂ ನೋಡದೆ ದೇಶದ ಪ್ರಜೆಗಳ ಒಳಿತಿನ ಹಿಂದೆ ಪಶುಪಾಲನೆಯ ಪ್ರಾಮುಖ್ಯತೆ ಏನು ಎಂಬ ವಿಶಾಲ ಮನೋಭಾವದಿಂದ ಅಧ್ಯಯನ ಮಾಡಿದರೂ ಸಾಕು.ಇಂದಿನ ಆಡಳಿತ ವ್ಯವಸ್ಥೆ ಕೃಷಿ ಮತ್ತು ಗೋ ಸಾಕಾಣಿಕೆಗೆ ಉತ್ತೇಜನ ಕೊಟ್ಟದ್ದೆಷ್ಟು ಎಂಬ ಕೊರತೆಯ ಅರಿವಾದೀತು. ಗೋಮಾಂಸವನ್ನು ಆಹಾರವೆಂದು ಪರಿಗಣಿಸಿ ಗೋವಧೆಗೆ ಅವಕಾಶ ಕೊಟ್ಟಿದ್ದು ದೇಶಕ್ಷೋಭೆಗೆ ಕಾರಣ,ಗೋಪಾಲನೆಯಲ್ಲಿ ಉತ್ತೇಜನ ಮೂಡಲು ಗೋಪಾಲನೆ ಹಾಗೂ ಕೃಷಿಗಾಗಿ ಸಹಾಯಧನ ಸೌಲಭ್ಯಗಳನ್ನು  ಕೊಟ್ಟರೆ ದೇಶದ ಸುಭಿಕ್ಷೆಗೆ ಅನುಕೂಲ. ಅದರ ಹೊರತು ದೇಶಾಭಿಮಾನವಿಲ್ಲ,ಈ ನೆಲದ ಕಾನೂನನ್ನು ಗೌರವಿಸದ ಕೇವಲ ಮತಾಂಧ ಪ್ರವೃತ್ತಿಯ ಗೋ ಹಂತಕರನ್ನು ಪೋಷಿಸುವ ಸರಕಾರಗಳನ್ನು ಹಿಂದುಗಳೇ ಎಚ್ಚೆತ್ತು ತಿರಸ್ಕರಿಸದಿದ್ದರೆ ಹಿಂದುಗಳ ಆಹಾರ ಕಲುಷಿತವಾಗುವುದು ಬದುಕು ದುರ್ಭರವಾಗುವುದು. ಧಾರ್ಮಿಕ ಸ್ಥಳಗಳು ಅಪವಿತ್ರವಾಗುವುದು.

ತುಪ್ಪ ಅಂದ್ರೆ ಅದು ದೇವರ ಆಹಾರ. ಅದನ್ನು ನೀಡುವ ಗೋವಿಗೆ ಈ ನೆಲದಲ್ಲಿ ಭದ್ರತೆ ಕಲ್ಪಿಸುವುದು ಪ್ರಜೆಗಳ ಮತ್ತು ಸರಕಾರದ ಕರ್ತವ್ಯ.

ಬರಹ :
ಮುರಲೀಕೃಷ್ಣ.ಕೆ.ಜಿ.

 

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮುರಲೀಕೃಷ್ಣ ಕೆ ಜಿ

ಕಡಬ ತಾಲೂಕಿನ ಆಲಂತಾಯ ಗ್ರಾಮದ ಮುರಲೀಕೃಷ್ಣ ಕೆ ಜಿ ಅವರು ಕೃಷಿ ಮತ್ತು ಪೌರೋಹಿತ್ಯದ ವೃತ್ತಿಯನ್ನು ಮಾಡುತ್ತಾರೆ. ಹವ್ಯಾಸವಾಗಿ ಉಪನ್ಯಾಸ ಮತ್ತು ಲೇಖನ ಬರೆಯುತ್ತಾರೆ. ವೇದ ಮತ್ತು ಸಂಸ್ಕೃತ ಅಧ್ಯಯನ ಮಾಡಿ ಸಂಸ್ಕೃತದಲ್ಲಿ ಎಂ ಎ ಮಾಡಿದ್ದಾರೆ. ಭಾರತೀಯ ಗೋವಿನ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡುತ್ತಾರೆ.

ಇದನ್ನೂ ಓದಿ

ಬೃಹತ್‌ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಕೆ ಬಯಲು | 2.25 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ |
April 21, 2025
7:37 AM
by: The Rural Mirror ಸುದ್ದಿಜಾಲ
ಪ್ರೀತಿಯಲ್ಲಿ ನಿಪುಣರು ಈ ರಾಶಿಯವರು…!
April 21, 2025
7:13 AM
by: ದ ರೂರಲ್ ಮಿರರ್.ಕಾಂ
ಧರ್ಮವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ – ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್
April 20, 2025
8:55 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-04-2025 | ಕೆಲವು ಕಡೆ ಸಾಮಾನ್ಯ ಮಳೆ ಸಾಧ್ಯತೆ | ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೂ ಮಳೆ ನಿರೀಕ್ಷೆ
April 20, 2025
5:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group