ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಸರ್ಪಸಂಸ್ಕಾರ, ಆಶ್ಲೇಷ ಬಲಿ ಪೂಜೆ ಮತ್ತೆ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಈ ಬಗ್ಗೆ ಚರ್ಚೆ, ಗದ್ದಲ ನಡೆದರೂ ಸರ್ಕಾರ, ಆಡಳಿತವು ಮೌನವನ್ನೇ ವಹಿಸಿದೆ. ಭಕ್ತಾದಿಗಳಲ್ಲಿ ಗೊಂದಲ ಮೂಡಿಸುವ ಇಂತಹ ಚರ್ಚೆಗಳಿಗೆ ಯಾವಾಗ ಬ್ರೇಕ್ ಬೀಳುತ್ತೆ ಎನ್ನುವುದೇ ಪ್ರಶ್ನೆಯಾಗಿದೆ.
ರಾಜ್ಯದ ಪ್ರತಿಷ್ಟಿತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ. ನಾಗ ದೋಷ ನಿವಾರಣೆಯ ಕ್ಷೇತ್ರವಾಗಿ ಕುಕ್ಕೆ ಸುಬ್ರಹ್ಮಣ್ಯ ಹೆಸರುವಾಸಿಯಾಗಿದೆ. ಅನೇಕರು ಕುಕ್ಕೆಯಲ್ಲಿ ಪೂಜೆ ಸಲ್ಲಿಸಿ ದೋಷ ನಿವಾರಣೆಗಾಗಿ ಪ್ರಾರ್ಥಿಸಿಕೊಂಡು ತೆರಳುತ್ತಾರೆ. ನಾಗ ದೋಷ ಎಂದಾಕ್ಷಣ, ಸರ್ಪಸಂಸ್ಕಾರ, ನಾಗಪ್ರತಿಷ್ಟೆಯನ್ನು ಮಾಡುವಂತೆ ಸಾಮಾನ್ಯವಾಗಿ ಜ್ಯೋತಿಷಿಗಳು ಹೇಳುತ್ತಾರೆ. ಈ ಪ್ರಕಾರ ಭಕ್ತರು ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿಯೇ ಪೂಜೆ ಮಾಡಿಸಲು ಬರುತ್ತಾರೆ.
ಆದರೆ ಕುಕ್ಕೆ ಕ್ಷೇತ್ರದಲ್ಲಿ ಪೂಜೆ ಮಾಡಿಸಬೇಕೋ ಅಥವಾ ಕುಕ್ಕೆಯ ಎಲ್ಲಾದರೂ ಪೂಜೆ ಮಾಡಿಸಬೇಕೋ ಎಂಬುದರ ಬಗ್ಗೆ ಜ್ಯೋತಿಷಿಗಳೂ ಹೇಳುವುದಿಲ್ಲ, ಭಕ್ತರಿಗೂ ಮಾಹಿತಿ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಭಕ್ತರಿಗೆ ಈ ಬಗ್ಗೆ ಮಾಹಿತಿ ಇದೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿಯೇ ಪೂಜೆ ಮಾಡಿಸಬೇಕು ಎಂಬ ಕಾರಣದಿಂದ ಕ್ಷೇತ್ರದಲ್ಲಿಯೇ ಪೂಜೆ ಮಾಡಿಸುತ್ತಾರೆ. ಆದರೆ ಈ ಬಗ್ಗೆ ಮಾಹಿತಿ ಇಲ್ಲದ ಅನೇಕರು ಸುಬ್ರಹ್ಮಣ್ಯದ ಎಲ್ಲಾದರೂ ಪೂಜೆ ಮಾಡಿಸಿ ತೆರಳುತ್ತಾರೆ, ನಂತರ ಪುನ: ಬಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿಯೇ ಪೂಜೆ ಮಾಡಿಸಿದ ಉದಾಹರಣೆಯೂ ಇದೆ.
ಇದೀಗ ಚರ್ಚೆಯ ವಿಷಯ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುವ ವಿಷಯ ಕುಕ್ಕೆ ಸುಬ್ರಹ್ಮಣ್ಯದ ಬಳಿಯಲ್ಲಿಯೇ ಇರುವ ಮಠದ ಸರ್ಪಸಂಸ್ಕಾರ, ಆಶ್ಲೇಷ ಬಲಿಯ ಬಗ್ಗೆ. ಈ ಬಗ್ಗೆ ರಶೀದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಭಕ್ತಾದಿಗಳಿಗೆ ಎಲ್ಲಿ ಬೇಕೋ ಅಲ್ಲಿ ಸೇವೆ ಮಾಡಿಸಲು , ಪೂಜೆ ಮಾಡಿಸಲು ಅವಕಾಶ ಇದೆ. ಆದರೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯೇಶ್ವರ ದೇವರಿಗೆ ಪೂಜೆ ನಡೆದರೆ, ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ನರಸಿಂಹ ದೇವರಿಗೆ ಆರಾಧನೆ ನಡೆಯುತ್ತದೆ. ಹೀಗಿರುವಾಗ ಕುಕ್ಕೆ ಸುಬ್ರಹ್ಮಣ್ಯದ ಎಲ್ಲಿ ಬೇಕಾದರೂ ಯಾವ ಸೇವೆ, ಯಾರು ಬೇಕಾದರೂ ನಡೆಯಬಹುದು, ಭಕ್ತರು ಪೂಜೆ ನಡೆಸಬಹುದಾದರೆ , ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಏಕೆ ಎಂಬುದು ಚರ್ಚೆಯ ಸಾರಾಂಶವಾಗಿದೆ.
ಈ ಬಗ್ಗೆ ದೇವಸ್ಥಾನದ ಆಡಳಿತ ಮೌನ ವಹಿಸಿದೆ, ಸರ್ಕಾರ ಮೌನ ವಹಿಸಿದೆ. ಹಿಂದೂ ಹಿತರಕ್ಷಣೆ ಎನ್ನುವ ವ್ಯಕ್ತಿಗಳೂ ಮೌನವಾಗಿದ್ದಾರೆ. ಹಾಗಿದ್ದರೆ ಕುಕ್ಕೆಯ ಇತರ ಕಡೆಗಳಲ್ಲೂ ಏಕೆ ಇಂತಹ ಸೇವೆಗಳು ಸಾರ್ವಜನಿಕವಾಗಿ ನಡೆಯಬಾರದು ಎಂಬುದು ಗಂಭೀರವಾದ ಪ್ರಶ್ನೆಯಾಗಿದೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…