Advertisement
MIRROR FOCUS

ಕರ್ನಾಟಕದಾದ್ಯಂತ ಗೋಕೃಪಾಮೃತ ವಿತರಣೆ | ಗೋಕೃಪಾಮೃತ ಇರುವಾಗ ಕ್ರಿಮಿನಾಶಕಗಳ ಹಂಗೇಕೆ?

Share

ಎರಡು ವರ್ಷಗಳ ಹಿಂದೆ  ಗೋಕೃಪಾಮೃತ ವಿತರಣೆ ಕಾರ್ಯಕ್ರಮ ಕೃಷಿಕ ವೀರೇಶ ಮನಗೂಳಿ ಇವರಿಂದ ಜರುಗಿತ್ತು. ಈಗ ಮತ್ತೊಮ್ಮೆ ಈ ಕಾರ್ಯಕ್ರಮವನ್ನು ಸಾವಯವ ಕೃಷಿಕ ವೀರೇಶ ಮನಗೂಳಿ ಹಮ್ಮಿಕೊಂಡಿದ್ದಾರೆ. “ರಾಸಾಯನಿಕ ಮುಕ್ತ ಕೃಷಿ” ಎನ್ನುವ ನೆಪದಲ್ಲಿ ನೂರಾರು ಜೈವಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಮಾರುವ ಈ ಕಾಲದಲ್ಲಿ ಮತ್ತೆ ನಮ್ಮ ರೈತರು ನಷ್ಟಕ್ಕೆ ಒಳಗಾಗುತ್ತಾರೆ. ಜೈವಿಕ ದ್ರವ ಗೊಬ್ಬರಕ್ಕಿಂತಲೂ ಪರಿಣಾಮಕಾರಿಯಾಗಿರುವ ಗೋಕೃಪಾಮೃತ ಬಳಸಿ ಯಶಸ್ಸು ಗಳಿಸಿದ ಸಾವಿರಾರು ರೈತರು ನಮ್ಮ ಜೊತೆಗಿದ್ದಾರೆ .

Advertisement
Advertisement
Advertisement

ಗೋ ಕೃಪಾಮೃತದ ಬಳಕೆಯಿಂದ ಹಲವಾರು ರೈತರಿಗೆ ಬೆಳೆಗಳಲ್ಲಿ ನಿರೀಕ್ಷಿತ ರೀತಿಯ ಫಲಿತಾಂಶ ಕಂಡು ಬರುತ್ತಿಲ್ಲ ಎನ್ನುವ ಅನುಭವವನ್ನು ಹಂಚಿಕೊಳ್ಳುವುದನ್ನು ನಾವು ಗಮನಿಸಿದ್ದೇವೆ. ಇದಕ್ಕೆ ಮುಖ್ಯ ಕಾರಣ ಗೋ ಕೃಪಾಮೃತ  ತಯಾರಿಸುವಾಗ ಮಾಡುವ ಅನೇಕ ತಪ್ಪುಗಳು.

Advertisement

ಸಾಮಾನ್ಯ ತಪ್ಪುಗಳು ಇವು :

  • ಗೋಕ್ರಪಾಮೃತವನ್ನು ತಯಾರಿಸುವಾಗ ಸಾವಯವ ಬೆಲ್ಲವನ್ನ ಉಪಯೋಗಿಸದೆ ಇರುವುದು
  • ತಾಜಾ ಮಜ್ಜಿಗೆಯನ್ನು ಉಪಯೋಗಿಸದೆ ಹುಳಿ ಮಜ್ಜಿಗೆಯನ್ನು / ಜರ್ಸಿ ಹಸುವಿನ ಮಜ್ಜಿಗೆಯನ್ನು ಉಪಯೋಗಿಸುವುದು
  • ತಂಪಾದ ಪ್ರದೇಶದಲ್ಲಿ ಮಾಡಿದ ಗೋ ಕೃಪಾಮೃತವನ್ನು ಇಡದಿರುವುದು
  • ಗೋ ಕೃಪಾಮೃತವನ್ನು ಮಾಡಲು ಮತ್ತು ನಿರ್ವಹಿಸಲು ಆಳುಗಳ ಮೇಲೆ ಬೆಂಬಲಿತವಾಗುವುದು.
  • ಬೇರೆಡೆಯಿಂದ ಪಡೆದುಕೊಂಡ ಗೋ ಕೃಪಾಮೃತವನ್ನ ತಡ ಮಾಡದೆ ಅದನ್ನು ವೃದ್ಧಿಸುವ ಕೆಲಸ ಮಾಡದೆ ಇರುವುದು ಅಥವಾ ಬಾಟಲಿಯಲ್ಲಿರುವ ಗೋಕೃಪಾಮೃತವನ್ನು ಗಾಳಿ ಆಡದೆ ಹಾಗೆ ಮುಚ್ಚಿಟ್ಟಿರುವುದು.
  • ಸಿದ್ಧಪಡಿಸಿದ ಗೋ ಕೃಪಾಮೃತವನ್ನ ಆಗಾಗ ಕಲಕದೆ ಹೆಪ್ಪುಗಟ್ಟಲು ಬಿಡುವುದು

ಈ ಎಲ್ಲಾ ತಪ್ಪುಗಳಿಂದ ಮಾಡಿದ ಗೋಕೃಪಾಮೃತ ನಿರೀಕ್ಷಿತ ಮಟ್ಟದ ಫಲವನ್ನು ನೀಡದೇ ಇರಬಹುದು. ಕೆಲವೊಮ್ಮೆ ಉತ್ತಮ ರೀತಿಯಲ್ಲಿ ನಾವು ಮಾಡಿದರೂ ಸಹ , ನಾವು ತಂದ ಗೋಕೃಪಾಮೃತವು ಶುದ್ಧವಾಗಿಲ್ಲದಿದ್ದರೆ ಸಹ ಫಲಿತಾಂಶ ಕಡಿಮೆ ಇರುವ ಸಂಭವ ಉಂಟು. ಹಾಗಾಗಿ,ಕರ್ನಾಟಕದ ರೈತ ಬಾಂಧವರಿಗೆ ಗುಜರಾತಿನಿಂದ ತೆಗೆದುಕೊಂಡು ಬಂದಂತಹ ಶುದ್ಧವಾದ ಗೋ ಕೃಪಾಮೃತ ಮದರ್ ಕಲ್ಚರ್ ಅನ್ನು ನೀಡಲು ಸತಃ ವಿರೇಶ್ ಮನಗೂಳಿ ಬರುತ್ತಿದ್ದಾರೆ.

Advertisement

ಮೇ 11, ರಂದು ಈ ಅಭಿಯಾನ ಆರಂಭವಾಗಿದ್ದು ಮೇ 19 ರಂದು ಕೊನೆಗೊಳ್ಳುತ್ತದೆ. ವಿಷಮುಕ್ತ ಭಾರತದ ಕಡೆ ನಮ್ಮ ನಡೆ. ಆದ್ದರಿಂದ ನಾವು ಆರೋಗ್ಯವಾಗಿರಲು, ದಯವಿಟ್ಟು ಸೂಚಿಸಿರುವ ಸ್ಥಳಗಳಲ್ಲಿ ಮೊದಲೇ ಬಂದು ತಾವು ಈ ಮದರ್ ಕಲ್ಚರ್ ಅನ್ನು ಪಡೆದುಕೊಳ್ಳಬೇಕಾಗಿ ತಮ್ಮಲ್ಲಿ ವಿನಂತಿ.  ನಿಮಗೆ ಒಂದು ವೇಳೆ ನಿಮ್ಮ ಸುತ್ತಮುತ್ತ ಸಾವಯವ ಬೆಲ್ಲ ಸಿಗದೇ ಇದ್ದಲ್ಲಿ ನಿಮಗೆ ಕಲ್ಚರ್ ನೀಡುವಾಗ ಮೊದಲ ಬಾರಿಗೆ 20 ಲೀಟರ್ ಕಲ್ಚರ್ ತಯಾರಿಸಿಕೊಳ್ಳ ಲು ಸಾವಯವ ಬೆಲ್ಲವನ್ನು (250 g) ವಿರೇಶ್ ಅವರಿಂದ ಪಡೆದುಕೊಳ್ಳಬಹುದು .

ಏನಿದು ಗೋಕೃಪಾಮೃತ ಜಲ? ಇದರಲ್ಲಿ ಯಾವ ಯಾವ ಅಂಶಗಳಿವೆ? ಹೇಗೆ ಸಿದ್ದಪಡಿಸೋದು?: ಗೋಪಾಲಭಾಯಿ ಸುತರಿಯಾ ಅವರು ವಜ್ರದ ವ್ಯಾಪಾರಿ, ಗುಜಾರಾತಿನವರು, ಅವರಿಗೆ ಅವರದೇ…. ಆದ ವ್ಯವಹಾರವಿತ್ತು ಮತ್ತು ಲಾಭವೂ…… ಇತ್ತು …. ಇದೆಲ್ಲದರ ಹೊರತಾಗಿ ಅವರಿಗೆ ಗೋಮಾತೆಯ ಸೆಳೆತ ಪ್ರಾರಂಭವಾಯಿತು ಅವರು ನಾಲ್ಕಾರು ವರ್ಷಗಳ ನಿರಂತರ ಸಂಶೋಧನೆಯಿಂದ ಗೋಮಯದಿಂದ ಒಂದು ಅದ್ಭುತಕ್ಕೆ ಸಮಾನವಾದ ದ್ರಾವಣವೊಂದನ್ನ ಕಂಡುಹಿಡಿದರು …. !ಅದೇ ಗೋಕೃಪಾಮೃತ.

Advertisement

ತಾವೇ ತಯಾರಿಸಿದ ಈ ಗೋಕೃಪಾಮೃತ ಕೃಷಿ ಮತ್ತು ರೈತರ ಏಳಿಗೆಗೆ ಉಚಿತವಾಗಿ ಇದನ್ನ ಹಂಚಲು ಪ್ರಾರಂಭಿಸಿದವರು ಗೋಪಾಲ್ ಬಾಯ್ ಸಯತಾರಿಯಾ.! ಮಣ್ಣಿನಲ್ಲಿನ ಜೀವರಾಸಾಯನಿಕ ಕ್ರಿಯೆಗಳನ್ನು ಪುಷ್ಟೀಕರಿಸಲು, ಮಣ್ಣಿನಲ್ಲಿನ ಉತ್ಪಾದನಾ ಮೌಲ್ಯವನ್ನು ಹೆಚ್ಚಿಸಲು ಹಾಗೂ ರೋಗ ಕೀಟ ಮುಕ್ತ ಗುಣಮಟ್ಟದ ಬೆಳೆಯನ್ನು ಪಡೆಯಲು  ಗೋಕೃಪಾಮೃತ ಜಲ ವನ್ನು ಬಳಸವುದು ಸೂಕ್ತ. ಇದರಿಂದ ವೆಚ್ಚವೂ ಕಡಿಮೆ ಮತ್ತು ಲಾಭವೂ ಹೆಚ್ಚು.

ಕೃಪಾಮೃತ ಜಲ ಎಂದರೇನು? : ಮಣ್ಣಿಗೆ ಹಾಗೂ ಬೆಳೆಗಳಿಗೆ ಅಂತ್ಯಂತ ಅವಶ್ಯಕವಾಗಿ ಬೇಕಾಗಿರುವ ಸೂಕ್ಷ್ಮಜೀವಿಗಳ ಸಮುಚ್ಚಯ ಅಥವಾ ಗುಂಪನ್ನು ನಾವು ಗೋಕೃಪಾಮೃತ ಜಲ ಅಂತ ಹೇಳಬಹುದು.ಈ ಗೋಕೃಪಾಮೃತ ಜಲ ಪಂಚಗವ್ಯಗಳಿಂದಾಗಿರುವ ಒಂದು ದ್ರಾವಣ. ಮೂಲವಾಗಿ ದೇಸಿ ಹಸುವಿನ ಸಗಣಿ ಹಾಲು ಗಂಜಲ ತುಪ್ಪˌ ಮತ್ತು ಮೊಸರು ಈ ಐದು ಪದಾರ್ಥಗಳಿಂದ ಸಿದ್ದಪಡಿಸಿದ ಜಲವೇ ಗೋಕೃಪಾಮೃತ ಜಲ. ಸಂಶೋಧನೆಯ ಪ್ರಕಾರ ಈ ಗೋಕೃಪಾಮೃತ ಜಲದಲ್ಲಿ ಸುಮಾರು 60 ಬಗೆಯ ಉಪಯುಕ್ತ ಸೂಕ್ಷ್ಮಾಣು ಜೀವಿಗಳಿವೆ ಎಂದು ಅಂದಾಜಿಸಲಾಗಿದೆ.

Advertisement

ಸಿದ್ದಪಡಿಸುವ ವಿಧಾನ ಹೇಗೆ? :

  • 1 ಲೀ ಗೋಕೃಪಾಮೃತ ಜಲ,  2 ಕೆ.ಜಿ.ಸಾವಯವ ಬೆಲ್ಲ (ಯಾವುದೇ ರಸಾಯನಿಕಯುಕ್ತ ಬೆಲ್ಲವನ್ನು ಬಳಸುವಂತಿಲ್ಲ) , 2 ಲೀ ದೇಶಿ ಹಸುವಿನ ತಾಜಾ ಮಜ್ಜಿಗೆ ಮೊದಲು ಒಂದು 200 ಲೀ ನೀರು ತುಂಬಿದ ಡ್ರಮ್ ಗೆ ಮೇಲ್ಕಂಡ 1 ಲೀ ಗೋಕೃಪಾಮೃತ ಜಲˌ 2 ಕೆ.ಜಿ.ಸಾವಯವ ಬೆಲ್ಲ ˌ 2 ಲೀಟರ್ ತಾಜಾ ದೇಶಿ ಹಸುವಿನ ಮಜ್ಜಿಗೆಯನ್ನು ಬೆರೆಸಿ ಒಂದು ಕೋಲಿನಿಂದ ವೃತ್ತಾಕಾರವಾಗಿ ತಿರುಗಬೇಕು.
  • ಈ ಡ್ರಮ್ ನ ಮೇಲೆ ತೆಳು ಹತ್ತಿಯ ಬಟ್ಟೆಯನ್ನು ಕಟ್ಟಿ ನೆರಳಿನಲ್ಲಿ ಒಂದು ವಾರಗಳ ಕಾಲ ಇಟ್ಟು ದಿನವೂ ವೃತ್ತಾಕಾರವಾಗಿ ತಿರುಗುತ್ತಿರಬೇಕು. ವಾರದ ನಂತರ ಗೋಕೃಪಾಮೃತ ಬಳಸಲು ಸಿದ್ದವಾಗುತ್ತದೆ.
  • ಕನ್ನೇರಿ ಶ್ರೀಗಳ ಪ್ರಕಾರ – ಮೊದಲು ಸಿದ್ಧಪಡಿಸಿದ ಗುರುಕೃಪಾಮೃತವನ್ನ ನಿಮ್ಮ ಸುತ್ತಮುತ್ತಲಿನ ರೈತರಿಗೆ ಉಚಿತವಾಗಿ ಹಂಚಿ. ನಂತರ ನಿಮ್ಮ ಜಮೀನಿಗೆ ಉಪಯೋಗಿಸಿ. ಇದು ಖಾಲಿಯಾದಂತೆಲ್ಲಾ ಅಲ್ಲೇ ನಿಮ್ಮಲಿರುವ ಡ್ರಮ್ ನಲ್ಲೇ 3-4 ಲೀ ಗೋಕೃಪಾಮೃತ ಜಲವನ್ನು ಉಳಿಸಿಕೊಂಡು ಮತ್ತೆ ಅದಕ್ಕೆ 2 ಕೆ.ಜಿ ಸಾವಯವ ಬೆಲ್ಲ ˌ 2 ಲೀ ತಾಜಾ ದೇಶಿ ಹಸುವಿನ ಮಜ್ಜಿಗೆ ˌ ಮತ್ತು 200 ಲೀ ನೀರನ್ನು ಹಾಕಿ ಚೆನ್ನಾಗಿ ವಾರ ಕಾಲ ಬೆರೆಸಿ ಬೆಳೆಗಳಿಗೆ ನಿರಂತರವಾಗಿ ಉಪಯೋಗಿಸಿದಲ್ಲಿ ನಿಮ್ಮ ಭೂಮಿ ಮತ್ತು ಬೆಳೆಗಳಲ್ಲಾಗುವ ಅಗಾಧವಾದ ಬದಲಾವಣೆಯನ್ನು ಕಾಣುವಿರಿ.

ಇದನ್ನು ಯಾವ ಹಂತಗಳಲ್ಲಿ ಹಾಗೂ ಎಷ್ಟು ಪ್ರಮಾಣದಲ್ಲಿ ಬಳಸಬಹುದು?: ಬೆಳೆಗಳ ಬಿತ್ತನೆಯಾದ ನಂತರ ನೀರನ್ನು ಹಾಯಿಸುವಾಗ ನೀರಿನ ಜೊತೆಗೆ ಪ್ರತೀ ಎಕರೆಗೆ 1000 ಲೀ ಗೋಕೃಪಾಮೃತ ಜಲವನ್ನು ನೀಡಬೇಕಾಗುತ್ತದೆ. ಎರಡನೇ ಬಾರಿಗೆ 700-800ಲೀ ಜಲವನ್ನು ನೀಡಬೇಕಾಗುತ್ತದೆ.ಈ ರೀತಿಯಾಗಿ ಬಿತ್ತನೆ ಸಂದರ್ಭದಲ್ಲಿ ನಾವು ಭೂಮಿಗೆ ಈ ಜಲವನ್ನು ನೀಡುವುದರಿಂದ ಬೆಳೆಯು ಭೂಮಿಯಿಂದ ಹೀರಿಕೊಳ್ಳುವ ಪೊಷಕಾಂಶಗಳನ್ನು ಬೆಳೆಗೆ ಲಭ್ಯಗೊಳಿಸುವಲ್ಲಿ ಸೂಕ್ಷ್ಮಜೀವಿಗಳು ಕಾರ್ಯಪ್ರವೃತ್ತವಾಗುತ್ತವೆ. 30 ದಿನಗಳ ನಂತರ ಬೆಳೆಗಳಿಗೆ ಸಿಂಪಡಣೆ ಮೂಲಕ 13 ಲೀ ನೀರಿಗೆ 2 ಲೀ ಗೋಕೃಪಾಮೃತ ಜಲವನ್ನು ಬೆರೆಸಿ ಸಿಂಪಡಿಸಿದ್ದೇ ಆದಲ್ಲಿ ಇದು ಬೆಳೆಗಳ ವರ್ಧಕವಾಗಿರೂ ಹಾಗೂ ಸಸ್ಯಗಳಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತುಕೀಟ ಬಾಧೆಗಳನ್ನು ನಿಯಂತ್ರಿಸುತ್ತದೆ.

Advertisement

ನಂತರ ಹೂ ಮತ್ತು ಕಾಯಿ ಹಂತದಲ್ಲಿ ಈ ಗೋಕೃಪಾಮೃತವನ್ನು ಸಿಂಪರಣೆ ಮಾಡಿದಾಗ ರೋಗ ಮತ್ತು ಕೀಟಗಳನ್ನು ನಿಯಂತ್ರಿಸಿ ಉತ್ತಮವಾದ ಕಾಯಿ ರಚನೆಯಾಗುತ್ತದೆ ಮತ್ತು ಕಾಯಿಯ ಗುಣಮಟ್ಟವೂ ಕೂಡಾ ಉತ್ತಮವಾಗಿರುತ್ತದೆ. ಇದನ್ನು ವಾರಕ್ಕೊಮ್ಮೆ ತಪ್ಪದೇ…. ನೀಡಬಹುದು. ಹೀಗಾಗಿ ನಮ್ಮ ರೈತರೆಲ್ಲರೂ ಕೂಡಾ ತಪ್ಪದೇ ಸ್ಥಳೀಯವಾಗಿ ಸಿಗುವ ಈ ಸಂಪನ್ಮೂಲಗಳನ್ನು ಬಳಸಿಕೊಂಡು ಭೂಮಿಯಲ್ಲಿನ ಮಣ್ಣಿನ ಫಲವತ್ತತೆ ಮತ್ತು ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ವೀರೇಶ್ ಮನಗೂಳಿ ಅವರಿಂದ ಪಡೆದ ಗೋಕೃಪಾಮೃತವನ್ನ ಮತ್ತೆ ವೃದ್ಧಿಸಿ ನಿರಂತರವಾಗಿ ಹಂಚುವವರಿದ್ದರೆ.. ದಯವಿಟ್ಟು ಈ ನಂಬರಿಗೆ ….. ನಿಮ್ಮ ವಿಳಾಸ ಹಾಗೂ ಮೊಬೈಲ್ ನಂಬರ್ ಮೆಸೇಜ್ ಮಾಡಿ. 9916030272 . ಬನ್ನಿ ನೈಸರ್ಗಿಕ ಕೃಷಿಗೆ ನಾವು ಮುಂದಾಗೋಣ ಆ ಮೂಲಕ ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳೋಣ.

Advertisement
ಬರಹ :
ಡಾ ಬಿ ಎಂ ನಾಗಭೂಷಣ ಭೀಮಸಮುದ್ರ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ

25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

4 hours ago

ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |

ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…

8 hours ago

ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?

ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..

9 hours ago

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |

ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.

1 day ago

ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…

1 day ago

ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ

ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…

1 day ago