ಎನ್‌ಆರ್‌ಎಲ್‌ಎಂ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ರಕ್ಷಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಅಜ್ಜಾವರದ ಕೃಷಿ ಸಖಿ ಮುಖಾಂತರ ರಿಯಾಯಿತಿ ದರದಲ್ಲಿ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ (ನಿ.) ಕೇಂದ್ರ ವಿಟ್ಲ ವತಿಯಿಂದ ರೈತರ ಬೇಡಿಕೆಯ ಮೇರೆಗೆ ಏಣಿಗಳ ವಿತರಣೆ ಕಾರ್ಯಕ್ರಮವು ಗ್ರಾಮ ಪಂಚಾಯತ್ ಅಜ್ಜಾವರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ದೇವಕಿ, ಉಪಾಧ್ಯಕ್ಷ ಅಬ್ದುಲ್ಲಾ ಎ, ಪಿಡಿಓ ಜಯಮಾಲ, ಪಂಚಾಯತ್ ಸಿಬ್ಬಂದಿಗಳಾದ ಕಾರ್ತಿಕ್, ಲೋಕೇಶ್, ಸಂಜೀವಿನಿ ಒಕ್ಕೂಟದ ಎಂ ಬಿ ಕೆ ಜಯಶ್ರೀ, ಎಲ್ ಸಿ ಆರ್ ಪಿ ವಾಣಿ, ಹರಿಣಾಕ್ಷಿ, ಪಶುಸಖಿ ಪುಷ್ಪಲತಾ, ಕೃಷಿ ಸಖಿ ಪೂರ್ಣಿಮಾ ಬಿ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ಸಿಬ್ಬಂದಿಯವರು ಹಾಗೂ 16 ಮಂದಿ ಫಲಾನುಭವಿ ರೈತರು ಹಾಜರಿದ್ದರು.
ರೈತರಿಗೆ ಕೃಷಿ ಕ್ಷೇತ್ರದಲ್ಲಿ ಅವರ ಬೇಡಿಕೆಯಂತೆ ಅಗತ್ಯವಾಗಿರುವ ಸಾಧನಗಳನ್ನು ಒದಗಿಸುವ ಮೂಲಕ ಅವರ ಕಾರ್ಯಕ್ಷಮತೆಯನ್ನು ವೃದ್ಧಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

