ಅಂತರ್ಜಲ ಹೆಚ್ಚಳಕ್ಕೆ ಜಿಲ್ಲಾಧಿಕಾರಿಯ ದಿಟ್ಟ ಕ್ರಮ | ಮೂರು ವರ್ಷದಲ್ಲಿ ಆರು ಮೀಟರ್ ಅಂತರ್ಜಲ ಹೆಚ್ಚಳ

March 25, 2024
10:35 PM

ತೆಲಂಗಾಣದ(Telangana) ರಾಜನ್ನ- ಸಿರಿಸಿಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ(DC) 2012 ನೇ ಸಾಲಿನ ಐಎಎಸ್ ಅಧಿಕಾರಿ(IAS officer) ಜಿಲ್ಲೆಯಾದ್ಯಂತ ಅಂತರ್ಜಲ(found water) ವೃದ್ಧಿಯಾಗಿ ಕೈಗೊಂಡ ವಿವಿಧ ಕ್ರಮಗಳ ಪರಿಣಾಮ, ಅಲ್ಲಿನ ಅಂತರ್ಜಲ ಮಟ್ಟ ಕೇವಲ ಮೂರು ವರ್ಷಗಳಲ್ಲಿ ಆರು ಮೀಟರ್‌ಗಳಷ್ಟು ಹೆಚ್ಚಾಗಿದೆ.

Advertisement
Advertisement

ಭಾರತದ ಹೆಚ್ಚಿನ ರಾಜ್ಯಗಳಲ್ಲಿ ನೀರಿನ ಸಮಸ್ಯೆ ಇದೆ. ಕ್ಷೀಣಿಸುತ್ತಿರುವ ಅಂತರ್ಜಲವು ಜಮೀನುಗಳು, ಕೈಗಾರಿಕೆಗಳು ಮತ್ತು ಕುಡಿಯುವ ನೀರಿನಂತಹ ಮೂಲಭೂತ ಅಗತ್ಯಗಳಿಗೆ ದೊಡ್ಡ ಅಪಾಯ ಎನಿಸಿದೆ. ತೆಲಂಗಾಣದ ಒಂದು ಜಿಲ್ಲೆಯಲ್ಲಿ ಅಂತರ್ಜಲ ಕೊರತೆಯನ್ನು ನಿವಾರಿಸಿ, ಅದನ್ನು ವೃದ್ಧಿಸುವ ಸವಾಲು ಕೈಗೆತ್ತಿಕೊಂಡು ಅದರಲ್ಲಿ ಅಧ್ಬುತ ಯಶಸ್ಸು ಸಾಧಿಸಿರುವ ಐಎಎಸ್ ಅಧಿಕಾರಿ ದೇವರಕೊಂಡ ಕೃಷ್ಣ ಭಾಸ್ಕರ್.

Advertisement

ಅವರು ಈ ಕುರಿತು ಮಾತನಾಡಿ, “ಜಿಲ್ಲೆಯ ನೀರಿನ ಕೊರತೆ ಎಂದಿಗೂ ಮುಗಿಯದ ಸಮಸ್ಯೆಯಾಗಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ‌ ಮೊದಲಿಗೆ ಜಿಲ್ಲೆಯ ಎಲ್ಲಾ ತಾಲೂಕುಗಳು ಅಥವಾ ಮಂಡಲಗಳನ್ನು ಬರಪೀಡಿತ ಅಥವಾ ಅರೆ ಬರಪೀಡಿತ ವರ್ಗದಲ್ಲಿ ಲೇಬಲ್ ಮಾಡಲಾಯಿತು” ಎಂದು ತಮ್ಮ ಯೋಜನೆಯ ಪ್ರಾರಂಭಿಕ ಹಂತವನ್ನು ವಿವರಿಸುತ್ತಾರೆ.

ನೀರಿನ ಕೊರತೆಯನ್ನು ನಿಭಾಯಿಸಲು, ಜಿಲ್ಲೆಯು ಹಳೆಯ ಕೆರೆ-ಕಟ್ಟೆಗಳನ್ನು ಪುನಶ್ಚೇತನಗೊಳಿಸುವುದು, ನೀರಿನ ಕೊರತೆ ಇರುವ ಕಡೆಗಳಲ್ಲಿ ಆಧುನಿಕ ಕೊಳವೆ ಬಾವಿ ಸ್ಥಾಪಿಸುವ ಕಾರ್ಯ ಪ್ರಾರಂಭಿಸಲಾಯಿತು. ಜಲಾಶಯಗಳಿಗಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸಲಾಯಿತು. ಅಸ್ತಿತ್ವದಲ್ಲಿದ್ದ ಜಲಮೂಲಗಳನ್ನು ಪುನಶ್ಚೇತನಗೊಳಿಸಲಾಯಿತು. ಹೊಸ ಇಂಗುಗುಂಡಿಗಳು, ಚೆಕ್ ಡ್ಯಾಂಗಳನ್ನು ಸಮರೋಪಾಧಿಯಲ್ಲಿ ತೋಡಿಸಲಾಯಿತು‌. ಆ ಮೂಲಕ ನೀರಿನ ಸಂಗ್ರಹ ಸಾಮರ್ಥ್ಯ ಮತ್ತು ಇಂಗುವಿಕೆಯ ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲಾಯಿತು.

Advertisement

ಹೀಗೆ ಅಂತರ್ಜಲ ಸಂರಕ್ಷಣೆ, ಅಭಿವೃದ್ಧಿಯ ಸಂಯೋಜಿತ ಪ್ರಯತ್ನಗಳನ್ನು ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಧಾನದೊಂದಿಗೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಯಿತು. ಈ ಮೂಲಕ ಅಲ್ಲಿ ಅಂತರ್ಜಲ ಮಟ್ಟದಲ್ಲಿ ಗಮನಾರ್ಹ ಹೆಚ್ಚಳ ಸಾಧ್ಯವಾಯಿತು‌ ಎನ್ನುತ್ತಾರೆ.

Source: The Better India

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |
April 27, 2024
2:15 PM
by: ದ ರೂರಲ್ ಮಿರರ್.ಕಾಂ
ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror