Advertisement
Opinion

ದೀಪಾವಳಿ – ಬೆಳಕಿನ ಹಬ್ಬ, ಬದುಕಿನ ತತ್ವ

Share

ದೀಪಾವಳಿ ಕೇವಲ ಹಬ್ಬವಲ್ಲ – ಅದು ಅಂಧಕಾರದಿಂದ ಬೆಳಕಿನತ್ತದ ಮಾನವಯಾತ್ರೆ. ವೇದಗಳಲ್ಲಿ “ತಮಸೋ ಮಾಯ್ ಜ್ಯೋತಿರ್ಗಮಯ” ಎಂದು ಪ್ರಾರ್ಥಿಸಲಾಗುತ್ತದೆ – ಅಜ್ಞಾನದ ಕತ್ತಲೆಯಿಂದ ಜ್ಞಾನಪ್ರಕಾಶದತ್ತ ಸಾಗುವುದು. ಯಜುರ್ವೇದದ ಜ್ಯೋತಿಷ್ಮತಿ ಉಪಾಸನೆಯಲ್ಲಿ ಬೆಳಕನ್ನು ಪರಬ್ರಹ್ಮದ ಚಿಹ್ನೆಯೆಂದು ವರ್ಣಿಸಲಾಗಿದೆ. ಬೆಳಕಿನ ಅರ್ಥ ಶಾರೀರಿಕ ಪ್ರಕಾಶವಲ್ಲ, ಅದು ಆಂತರಿಕ ಬೋಧನೆ, ಆತ್ಮಜ್ಞಾನ, ದಯಾ ಮತ್ತು ಧರ್ಮದ ಪ್ರಜ್ವಲನೆ.

ದೀಪಾವಳಿಯ ಆಚರಣೆಗೆ ಅನೇಕ ಪುರಾಣೋಕ್ತ ಕಾರಣಗಳಿವೆ:

ರಾಮಾಯಣದಲ್ಲಿ: ಶ್ರೀರಾಮನವರು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಹಿಂದಿರುಗಿದ ದಿನವನ್ನು ಜನರು ದೀಪಗಳಿಂದ ಸನ್ಮಾನಿಸಿದರು . ಇದು ಧರ್ಮದ ಜಯದ ಸಂಕೇತ.
ಶ್ರೀಮದ್ಭಾಗವತದಲ್ಲಿ: ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದ ದಿನ ಅಹಂಕಾರ, ಕಾಮ, ಕ್ರೋಧ ಇವುಗಳ ನಾಶದ ಪ್ರತೀಕ.
ಲಕ್ಷ್ಮೀ ಪೂಜೆಯ ದಿನ: ವಿಷ್ಣುಪತ್ನಿ ಲಕ್ಷ್ಮೀದೇವಿಯು ಸಮುದ್ರಮಂಥನದಲ್ಲಿ ಪ್ರತ್ಯಕ್ಷಳಾದ ದಿನ. ಅದರಿಂದ ಸಂಪತ್ತು, ಶುದ್ಧತೆ, ಶ್ರದ್ಧೆ ಮತ್ತು ಶ್ರೇಯಸ್ಸಿನ ಉಪಾಸನೆಯ ದಿನವೂ ಆಗಿದೆ.
ವೈಷ್ಣವ ಸಂಪ್ರದಾಯದಲ್ಲಿ: ಬಲಿಚಕ್ರವರ್ತಿಗೆ ವಿಷ್ಣು ವಾಮನ ರೂಪದಲ್ಲಿ ವರ ನೀಡಿದ ದಿನ – ಅಹಂಕಾರದ ಶಮನ ಮತ್ತು ಸಮರ್ಪಣೆಯ ಮಹತ್ವ.
ಹಬ್ಬದ ತಾತ್ವಿಕ ಅರ್ಥ

ದೀಪಾವಳಿಯ ದೀಪ ದಲ್ಲಿ ಒಂದು ತಾತ್ವಿಕ ಅರ್ಥವಿದೆ. ಅಂಧಕಾರದಿಂದ ಬೆಳಕಿಂಗೆ ಬಂದು ಜಗತ್ತೆಲ್ಲಾ ಬೆಳಕನ್ನು ಹರಡೋಣ ಎಂಬುದಾಗಿ.
ದೀಪದ ತೈಲ ನಮ್ಮ ಶ್ರದ್ಧೆಯ ಪ್ರತೀಕ , ದೀಪದ ಬತ್ತಿ ನಮ್ಮ ಆಂತರಿಕ ಚಿಂತನೆ, ದೀಪದ ಜ್ವಾಲೆ ನಮ್ಮ ಸತ್ಪ್ರಜ್ಞೆ ಮತ್ತು ಧರ್ಮಚಿಂತನೆಯ ಪ್ರತೀಕ.
ದೀಪವು ತಾನೇ ಕರಗುತ್ತಾ ಇತರರಿಗೆ ಬೆಳಕು ನೀಡುತ್ತದೆ . ಇದೇ ನಿಷ್ಕಾಮ ಸೇವೆಯ ತತ್ವ. ಹೀಗಾಗಿ ದೀಪಾವಳಿ ನಮ್ಮಲ್ಲಿ “ನಮ್ಮಲ್ಲಿ ಬೆಳಕು ಮೂದಲಿ ಮತ್ತು ಬೆಳಗಲಿ, ಇತರರ ಜೀವನವೂ ಬೆಳಗಲಿ” ಎಂಬ ಭಾವವನ್ನು ಹುಟ್ಟಿಸುತ್ತದೆ.

ಕಾಲಧರ್ಮಕ್ಕೆ ಪ್ರಸ್ತುತತೆ : ಇಂದಿನ ಕಾಲದಲ್ಲಿ ಕತ್ತಲೆ ವಿದ್ಯುತ್‌ ಇಲ್ಲದ ಕತ್ತಲೆಯಲ್ಲ, ಮನಸ್ಸಿನ ಕತ್ತಲೆಯಾಗಿದೆ ಅಸಹನೆ, ಅಹಂಕಾರ, ಅಜ್ಞಾನ, ಅಸೂಯೆ ಇವುಗಳಲ್ಲಿ ನಾವು ಸಿಕ್ಕಿದ್ದೇವೆ.

Advertisement

ದೀಪಾವಳಿ ನಮ್ಮ ಅಂತರಾತ್ಮದಲ್ಲಿ “ನಿನ್ನೊಳಗೆ ದೀಪ ಬೆಳಗುತ್ತಿದೆಯೇ ? ನಿನ್ನ ಮನಸ್ಸಿನಲ್ಲಿ ಜ್ಯೋತಿ ಉರಿಯುತ್ತಿದೆಯೆ?” ಎಂಬ ಪ್ರಶ್ನೆ ಕೇಳುತ್ತದೆ. ಇದರ ತಾತ್ಪರ್ಯ ದೀಪಾವಳಿ ಇಂದು ಆಂತರಿಕ ಶುದ್ಧೀಕರಣದ ಹಬ್ಬ. ಮನೆಗಳನ್ನು ಶುದ್ಧಮಾಡುವಂತೆಯೇ ಮನಸ್ಸನ್ನೂ ಶುದ್ಧಮಾಡುವ ಹಬ್ಬ.
ಆರ್ಥಿಕ, ಸಾಮಾಜಿಕ, ಆತ್ಮೀಯ ಎಲ್ಲ ಕ್ಷೇತ್ರಗಳಲ್ಲಿ ಸಮತೋಲನವನ್ನು ತರಬಲ್ಲ “ಅಂತಃಕರಣದ ಆಳವಾದ ಆಲೋಚನೆಗೆ” ದಾರಿಮಾಡಿಕೊಡುವ ಹಬ್ಬ
ಆಚರಣೆಯ ನಿಜವಾದ ಅರ್ಥ.

ದೀಪಾವಳಿ ಎಂದರೆ ಕೇವಲ ಪಟಾಕಿ ಅಥವಾ ಖರೀದಿ ಹಬ್ಬವಲ್ಲ. ಅದು ಕೃತಜ್ಞತೆ ಮತ್ತು ಕರುಣೆಯ ಹಬ್ಬ. ಸತ್ಯ, ಧರ್ಮ, ಪ್ರೇಮ ಮತ್ತು ಶಾಂತಿಯ ಪುನರ್ ಜಾಗೃತಿಯ ಹಬ್ಬ. ಕುಟುಂಬ, ಸಮಾಜ, ರಾಷ್ಟ್ರ ಹೀಗೆ ಎಲ್ಲರ ಮನದಲ್ಲಿ ಒಗ್ಗಟ್ಟಿನ ಜ್ಯೋತಿ ಬೆಳಗಿಸುವ ಸುಂದರ ಹಬ್ಬ .

ಉಪನಿಷತ್‌ಗಳು ಹೇಳುವಂತೆ: “ಜ್ಯೋತಿರ್ಹ್ಮೇಯಮಾತ್ಮಾ” – ನಿನ್ನ ಆತ್ಮವೇ ಬೆಳಕು.ಆ ಬೆಳಕನ್ನು ಅರಿತು, ಬೆಳಗಿಸುವಾಗಲೇ ನಿಜವಾಗಿ ದೀಪಾವಳಿ ಸಾರ್ಥಕತೆಯನ್ನು ಪಡೆಯುತ್ತದೆ.

ದೀಪಾವಳಿಯ ಸಂದೇಶ

“ಬೆಳಕು ಹೊರಗೆ ಹುಡುಕಬೇಡ, ನಿನ್ನೊಳಗೆ ಬೆಳಗಿಸು.”  ದೀಪಾವಳಿ ಕೇವಲ ಹಬ್ಬವಲ್ಲ, ಆಧ್ಯಾತ್ಮಿಕ ಪುನರ್ ಜಾಗೃತಿ , ಸಂಸ್ಕಾರ ಪುನರುತ್ಥಾನ, ಮತ್ತು ಮಾನವೀಯ ಬೆಳವಣಿಗೆಗೆ ಮಾರ್ಗದರ್ಶನ.

Advertisement

ಜಿ. ಯಸ್ .ಶಿವರುದ್ರಪ್ಪ ನವರ ಕವನದಂತೆ,

“ಆ ದಿವ್ಯಶಕ್ತಿಯೇ ಈ ಮಣ್ಣ ಹಣತೆಯಲಿ
ಹರಿಯುತಿರೆ, ಕಿರಿಹಣತೆ ಕಿರಿದಾದರೇನು ?
ಬೆಳಕ ಬೀರುವ ಶಕ್ತಿ ಹಿರಿದಲ್ಲವೇನು ?”

ನಮ್ಮ ಶರೀರದ ಆತ್ಮದಲ್ಲಿರುವ ಶಕ್ತಿ ಅನಂತ.ಮನುಷ್ಯನು ಸಣ್ಣವನಾದರೂ, ಅವನಲ್ಲಿ ಹರಿಯುವ ದೈವಶಕ್ತಿ ಅಸೀಮ. ಆದ್ದರಿಂದ ಕಿರಿಹಣತೆ (ಸಣ್ಣ ದೀಪ) ಯಂತೆ ಕಾಣುವ ನಾವು,ದೈವಿಕ ಬೆಳಕನ್ನು ಹರಿಸುವ ಸಾಧನವಾಗಬೇಕು.  ಆದರಿಂದ ದೀಪಾವಳಿಯಿಂದ ತೊಡಗಿ ನಿತ್ಯ ನಿರಂತರ ಶಾಂತಿ, ಪ್ರೇಮ ಮತ್ತು ಧರ್ಮದ ದೀಪಗಳು ನಿಮ್ಮ ಮನೆಯಲ್ಲಿ ಸದಾ ಹೊಳೆಯಲಿ. ಬೆಳಕಿನ ಹಬ್ಬ ದೀಪಾವಳಿಯು ಎಲ್ಲರ ಜೀವನದಲ್ಲಿ ಆಂತರಿಕ ಜ್ಯೋತಿಯ ಹಣತೆಯನ್ನು ಶಾಶ್ವತವಾಗಿ ಬೆಳಗಲಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?

 ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ…

8 hours ago

‌ ಭೂಮಿಗೆ ಬಿದ್ದ ಪ್ಲಾಸ್ಟಿಕ್ ಕರಗುವಂತೆ ಮಾಡಬಹುದು…!, ಇದು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರವೇ?

ಪ್ರಕೃತಿಯಲ್ಲಿ ಇರುವ ಡಿಎನ್‌ಎ, ಪ್ರೋಟೀನ್‌ಗಳಂತೆ ಪ್ಲಾಸ್ಟಿಕ್‌ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ…

9 hours ago

2026 ರಲ್ಲಿ ಕೃಷಿ ಕ್ಷೇತ್ರ ಸ್ಥಿರತೆ , ಆದರೆ ಅಸಮಾನತೆ ಮುಂದುವರಿಕೆ

2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು…

9 hours ago

ಶಾಖದ ಅಲೆಗಳ ಮುನ್ಸೂಚನೆಗೆ ವಿಜ್ಞಾನಿಗಳಿಂದ ಹೊಸ ಅಧ್ಯಯನ

ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)…

9 hours ago

ಕೃಷಿ ಭೂಮಿಯಲ್ಲಿರುವ ವಿದ್ಯುತ್ ಕಂಬಕ್ಕೆ ಹೊಸ ನಿಯಮ

ಗ್ರಾಮೀಣ ವಿದ್ಯುದ್ದೀಕರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಉಪಯುಕ್ತತೆ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಬಳಸಿದ ರೈತರಿಗೆ…

9 hours ago

ಬಿಪಿ ಕಾಯಿಲೆ ಇರುವವರಿಗೆ ಇಲ್ಲಿದೆ ಕೆಲವು ಆರೋಗ್ಯಕರ ಟಿಪ್ಸ್

ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಬಿಟ್ಟರೆ ಅಂದರೆ ನಿಯಂತ್ರಣ ತಪ್ಪಿದರೆ ವಿವಿಧ ಸಮಸ್ಯೆ ಉಂಟಾಗುತ್ತದೆ. ಮನುಷ್ಯನ…

10 hours ago