ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ದೀಪಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಂಗಳೂರಿನ ಪಾಟರಿ ಟೌನ್‌ನಲ್ಲಿ ವಿವಿಧ ವಿನ್ಯಾಸದ ಬಣ್ಣಬಣ್ಣದ ಮಣ್ಣಿನ ಹಣತೆ ತಯಾರಾಗುತ್ತಿದ್ದು ಗ್ರಾಹಕರ ಮನಸೆಳೆಯುತ್ತಿವೆ.
ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ದೀಪಾವಳಿಗೆ ದೀಪವೇ ವಿಶೇಷ. ವಿವಿಧ ವಿನ್ಯಾಸದ ಬಣ್ಣದ ದೀಪಗಳನ್ನು ಮನೆಯಲ್ಲಿ ಬೆಳಗಿಸುವ ಮೂಲಕ ಹಬ್ಬದ ಸಂಭ್ರಮವನ್ನು ಆಚರಿಸಲಾಗುತ್ತದೆ. ಬೆಂಗಳೂರಿನ ಪಾಟರಿ ಟೌನ್ ಕುಂಬಾರಿಕೆಗೆ ಹೆಚ್ಚು ಪ್ರಸಿದ್ದಿ, ಇಲ್ಲಿ ಋತುಮಾನಕ್ಕೆ ತಕ್ಕಂತೆ ವಸ್ತುಗಳನ್ನು ತಯಾರಿಸಲಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಕುಂಬಾರಿಕೆ ಮಾಡಲಾಗುತ್ತಿದ್ದು, ದೀಪಾವಳಿ ಹಿನ್ನೆಲೆ ವಿಶೇಷ ಹಣತೆಗಳನ್ನು ತಯಾರಿಸಲಾಗುತ್ತಿದೆ. ಇಲ್ಲಿ ತಯಾರಾಗುವ ದೀಪಗಳಿಗೆ ಹೆಚ್ಚು ಬೇಡಿಕೆ ಇದ್ದು, ಖರೀದಿ ಭರಾಟೆ ಜೋರಾಗಿದೆ. ಆನ್ ಲೈನ್ ಮಾರುಕಟ್ಟೆ ಮೂಲಕವೂ ಇಲ್ಲಿನ ದೀಪಗಳನ್ನು ಪೂರೈಸಲಾಗುತ್ತಿದೆ.
ಮೈಸೂರು ಮಹಾರಾಜರ ಕಾಲದಿಂದಲೂ ಕುಂಬಾರಿಕೆ ವೃತ್ತಿ ಮಾಡಿಕೊಂಡು ಬರುತ್ತಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ದೀಪಗಳನ್ನು ತಯಾರಿಸಲಾಗುತ್ತದೆ ಎಂದು ಹಣತೆ ತಯಾರಕ ರಾಜಶೇಖರ ಹೇಳುತ್ತಾರೆ. ಋತುಮಾನಕ್ಕೆ ತಕ್ಕಂತೆ ವಿವಿಧ ಬಗೆಯ ದೀಪಗಳನ್ನು ತಯಾರಿಸಲಾಗುತ್ತಿದೆ. ಕಳೆದ 6 ತಿಂಗಳಿನಿಂದ ಬೇಡಿಕೆಗನುಗುಣವಾಗಿ ದೀಪ ತಯಾರಿಕೆಯಲ್ಲಿ ನಿರತರಾಗಿದ್ದೇವೆ ಎನ್ನುತ್ತಾರೆ ಸುಮಿತ್ರಾ.
ಇಂದು ಪಟಾಕಿ-ಬೆಳಕು ಇತ್ಯಾದಿ ಚರ್ಚೆಗಳ ನಡುವೆ ಸದ್ದಿಲ್ಲದೆ ಹಣತೆ ಖರೀದಿ ಜೋರಾಗಿ ನಡೆಯುತ್ತಿದೆ. ಈ ಮೂಲಕ ಕುಂಬಾರಿಕೆಗೂ ಬೆಲೆ ನೀಡುವ ಕೆಲಸ ನಡೆಯುತ್ತಿದೆ.
22.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
“ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ…
ಕೃಷಿ ಇಲಾಖೆಯಿಂದ ರಾಜ್ಯ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ…
21.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ ಸೇರಿದಂತೆ…
ಬೆಂಗಳೂರು ತಂತ್ರಜ್ಞಾನ ಮತ್ತು ಕೈಗಾರಿಕಾ ಪ್ರಗತಿಯ ಸಂಕೇತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. …
ನಬಾರ್ಡ್ ನಿಂದ ರಾಜ್ಯಕ್ಕೆ ನೀಡಲಾಗುವ ಸಾಲದ ಮೊತ್ತವನ್ನು 5600 ಕೋಟಿ ರೂಪಾಯಿಗಳಿಂದ, ಈ…