Advertisement
ಸುದ್ದಿಗಳು

ದೇಶದಲ್ಲಿ ಬರಗಾಲದ ಸಾಧ್ಯತೆ – ರೈತರನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Share

“ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಈ ವರ್ಷ ಇಡೀ ದೇಶದಲ್ಲಿ ಬರಗಾಲ ಎದುರಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಸೇರಿ ಬರಗಾಲವನ್ನು ಎದುರಿಸಬೇಕು. ರೈತರನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನ ಯಲಹಂಕದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಜಲ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಅಂತರರಾಜ್ಯ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದರು.

ಮುಖ್ಯಮಂತ್ರಿ ಮಾತನಾಡುತ್ತಾ, ತುಂಗಭದ್ರಾ ಅಣೆಕಟ್ಟಿನ ಸುರಕ್ಷತೆ ಹಾಗೂ ನೀರಿನ ಸಮರ್ಪಕ ನಿರ್ವಹಣೆಗಾಗಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಜಲಶಕ್ತಿ ಸಚಿವರ ಸಮ್ಮುಖದಲ್ಲಿ ಮಹತ್ವದ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದರು.

“ಹಿಂದೆ ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ಕಾವೇರಿ ಕುಡಿಯುವ ನೀರಿನ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಅದೇ ಮಾದರಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರ ನೇತೃತ್ವದಲ್ಲಿ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳ ನಡುವೆ ಸಭೆ ನಡೆಸಿ ಒಂದು ಒಪ್ಪಂದಕ್ಕೆ ಬಂದಿದ್ದೇವೆ” ಎಂದು ಅವರು ಹೇಳಿದರು.

“ನೆಲ ಮತ್ತು ನೀರಿನ ವಿಚಾರದಲ್ಲಿ ನಾವು ನಮ್ಮೊಳಗೆ ಸಂಘರ್ಷ ಮಾಡಿಕೊಳ್ಳಬಾರದು. ನಾವೆಲ್ಲರೂ ಭಾರತೀಯರು, ಮಣ್ಣಿನ ಮಕ್ಕಳು. ಪರಸ್ಪರ ಸಹಕಾರದಿಂದಲೇ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು” ಎಂದು ಮುಖ್ಯಮಂತ್ರಿ ಕರೆ ನೀಡಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಬರಗಾಲದ ಸಾಧ್ಯತೆ ಹಿನ್ನೆಲೆಯಲ್ಲಿ ನೀರಿನ ಸಮರ್ಪಕ ಬಳಕೆ, ಜಲ ಸಂರಕ್ಷಣೆ ಹಾಗೂ ರೈತರ ಹಿತಾಸಕ್ತಿಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

Karnataka Chief Minister D.K. Shivakumar has warned that India could face drought conditions this year despite good rainfall over the past three years in Karnataka. He urged collective efforts to protect farmers and stressed interstate cooperation on water management, including agreements concerning the Tungabhadra reservoir.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 19-11-2026 | ಅಕ್ವಾನ್ ಚಂಡಮಾರುತ ಶಿಥಿಲ | ನ.24ರಿಂದ ಕರ್ನಾಟಕದ ಕೆಲವೆಡೆ ಮಳೆಯ ಸಾಧ್ಯತೆ

ನವೆಂಬರ್ 20ರಂದು ಕರ್ನಾಟಕದಾದ್ಯಂತ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಅಕ್ವಾನ್ ಚಂಡಮಾರುತ ಶಿಥಿಲಗೊಂಡ…

18 hours ago

ಯಮುನಾ ನದಿಯಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳ ಜೊತೆಗೆ ವಿಷಕಾರಿ ರಾಸಾಯನಿಕಗಳ ಮಿಶ್ರಣ ಪತ್ತೆ!

ದೆಹಲಿಯ ಯಮುನಾ ನದಿಯಲ್ಲಿ ನಡೆಸಿದ ಅಧ್ಯಯನದಲ್ಲಿ 2,289 ಮೈಕ್ರೋಪ್ಲಾಸ್ಟಿಕ್ ಕಣಗಳು ಮತ್ತು 321…

21 hours ago

ಅಡಿಕೆ ಸಾಗಣೆಗೆ ತಿಂಗಳಿಗೆ 120 ವಾಹನಗಳು – ನಕಲಿ ಬಿಲ್, ಹವಾಲಾ ಜಾಲ ಬಯಲು

ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಭಾರತದ ವಿವಿಧ ರಾಜ್ಯಗಳಿಗೆ ಅಡಿಕೆ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು…

21 hours ago

ಹವಾಮಾನ ವರದಿ | 18-11-2026 | ಅಕ್ವಾನ್ ಚಂಡಮಾರುತ ದುರ್ಬಲ; ನ.23ರಿಂದ ಕರ್ನಾಟಕದಲ್ಲಿ ಗುಡುಗು ಮಳೆಯ ಸಾಧ್ಯತೆ

ಅಕ್ವಾನ್ ಚಂಡಮಾರುತವು ನವೆಂಬರ್ 20ರಂದು ಒಡಿಸ್ಸಾ ಕರಾವಳಿಯಲ್ಲಿ ದುರ್ಬಲವಾಗಿ ಭೂ ಪ್ರವೇಶಿಸುವ ಸಾಧ್ಯತೆಯಿದೆ.…

2 days ago

₹300ರ ಗಡಿ ದಾಟಿದ್ದ ರಬ್ಬರ್ ಧಾರಣೆ ಮತ್ತೆ ₹270ಕ್ಕೆ ಕುಸಿತ

ನವೆಂಬರ್ ಮೊದಲ ವಾರದಲ್ಲಿ ₹300ರ ಗಡಿ ದಾಟಿದ್ದ ನೈಸರ್ಗಿಕ ರಬ್ಬರ್ ಧಾರಣೆ ಇದೀಗ…

2 days ago

ಕಡಿಮೆ ಕೃಷಿ ಪ್ರದೇಶದಲ್ಲೂ ತೋಟಗಾರಿಕೆಯಲ್ಲಿ ದಾಖಲೆ ಉತ್ಪಾದನೆ – 386.91 ಮಿಲಿಯನ್ ಟನ್ ತಲುಪುವ ನಿರೀಕ್ಷೆ!

2025-26ನೇ ಸಾಲಿನಲ್ಲಿ ಭಾರತದ ತೋಟಗಾರಿಕೆ ಉತ್ಪಾದನೆ 3869.15 ಲಕ್ಷ ಟನ್ ತಲುಪುವ ನಿರೀಕ್ಷೆಯಿದ್ದು,…

2 days ago