ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ ಡಿಎಂಕೆ ಕೌನ್ಸಿಲರ್ ಜಾನ್ ಅಲಿಯಾಸ್ ಶ್ರೀನಿವಾಸನ್ ಅವರನ್ನು ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ) ವಶಕ್ಕೆ ತೆಗೆದುಕೊಂಡಿದೆ.
ಕಳೆದ ನವೆಂಬರ್ ಕೊನೆಯ ವಾರ ಅಡಿಕೆಯನ್ನು ಗೋಡಂಬಿ ಎಂದು ನಮೂದಿಸಿ ಇಂಡೋನೇಶಿಯಾದಿಂದ ತೂತುಕುಡಿ ಬಂದರಿಗೆ ಆಮದು ಮಾಡಿಕೊಂಡಿದ್ದ ಪ್ರಕರಣದಲ್ಲಿ ಡಿಆರ್‌ಐ ಒಂದು ಕಂಟೇನರ್ ಅನ್ನು ವಶಪಡಿಸಿಕೊಂಡಿತ್ತು. ತನಿಖೆಯ ವೇಳೆ ಅಡಿಕೆಯನ್ನು ಬೇರೆ ಉತ್ಪನ್ನ ಎಂದು ತಪ್ಪಾಗಿ ಘೋಷಿಸುವ ಮೂಲಕ ಆಮದು ಮಾಡಿಕೊಳ್ಳುವ ವ್ಯಕ್ತಿಗಳ ಗುಂಪಿನ ಬಗ್ಗೆ ಸುಳಿವು ಲಭ್ಯವಾಗಿತ್ತು.
ಅಡಿಕೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ವಾಣಿಜ್ಯ ಸಚಿವಾಲಯ ವಿಧಿಸಿದ ನಿರ್ಬಂಧಗಳು ಹಾಗೂ ಆಮದು ಸುಂಕಗಳ ಕಾರಣ, ಡಿ ಆರ್ ಐ ಗೋಡಂಬಿ ಎಂದು ಘೋಷಿಸಲಾದ ಕಂಟೇನರ್ ಪರಿಶೀಲಿಸಿತು. ಅದನ್ನು ತೆರೆದಾಗ 1.25 ಕೋಟಿ ಮೌಲ್ಯದ 22 ಮೆಟ್ರಿಕ್ ಟನ್ ಅಡಿಕೆ ಪತ್ತೆಯಾಗಿತ್ತು. ಬಳಿಕ ತನಿಖೆಯ ವೇಳೆ ಶಿಪ್ಪಿಂಗ್ ಕಂಪನಿಯ ಇಬ್ಬರು ಉದ್ಯೋಗಿಗಳು ಸೇರಿದಂತೆ ನಾಲ್ವರನ್ನು ಬಂಧಿಸಲಾಯಿತು. ಹೆಚ್ಚಿನ ವಿಚಾರಣೆಯಲ್ಲಿ ಜಾನ್ ಅಲಿಯಾಸ್ ಶ್ರೀನಿವಾಸನ್ ಕಳ್ಳಸಾಗಣೆ ಕಾರ್ಯಾಚರಣೆಗೆ ಸಂಬಂಧಿಸಿದ್ದು, ಗುರುವಾರ ಡಿ ಆರ್ ಐ ವಶಕ್ಕೆ ಪಡೆದಿದೆ ತನಿಖೆ ಮುಂದುವರಿದಿದೆ.
ರಾಜ್ಯದಲ್ಲಿ ಈಗಿನಂತೆ ಎಪ್ರಿಲ್ 7 ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿದ್ದು, ಎಪ್ರಿಲ್ 9…
ಏಪ್ರಿಲ್ 7 ರಿಂದ 9 ರವರೆಗೆ ಪೂರ್ವ ಭಾರತದಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ…
ಮ್ಯಾನ್ಮಾರ್ ಭೂಕಂಪದ ಬಳಿಕ ವಿವಿಧ ರೀತಿಯಲ್ಲಿ ಭಾರತವು ನೆರವು ನೀಡುತ್ತಿದೆ. ಇದುವರೆಗೆ ಭಾರತೀಯ ಸೇನಾ…
ರಾಜ್ಯದಲ್ಲಿ 6395 ಆನೆಗಳಿದ್ದು, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೂರಾರು…
ಬದುಕಿನ ದೀವಿಗೆ ಜ್ಞಾನ. ಅದು ಜ್ಞಾನ ದೀವಿಗೆ. ಜ್ಞಾನಕ್ಕೆ ಮುಪ್ಪಿಲ್ಲ, ಸಾವಿಲ್ಲ. ಅದು…
ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಬೇಸಿಗೆಯಲ್ಲಿ 89 ಲಕ್ಷ ಲೀಟರ್‌ಗೆ…