ಒಮ್ಮೊಮ್ಮೆ ನಾವು ಪ್ರಾಣಿ ಪಕ್ಷಿಗಳಿಗೆ(Animal-Birds) ತೋರಿಸುವ ಅತಿಯಾದ ಕಾಳಜಿ, ಪ್ರೀತಿ ಕೆಲವು ತೊಂದರೆಗಳಿಗೆ ಕಾರಣವಾಗುತ್ತದೆ. ಈಗ ಮೈಸೂರಿನಲ್ಲಿ(Mysore) ಆಗುತ್ತಿರುವುದು ಅದೇ.. ಪ್ರವಾಸಿಗರು(Tourists), ಸಾರ್ವಜನಿಕರು(Publics) ಪಾರಿವಾಳಗಳಿಗೆ(Pigeon) ಹಾಕುವ ಅತಿಯಾದ ಆಹಾರ ಧಾನ್ಯಗಳ(Food Grains) ವ್ಯರ್ಥದಿಂದ ಹಾಗೂ ಪಾರಿವಾಳಗಳ ಹಿಕ್ಕೆಯಿಂದ ಇಲ್ಲಿನ ವಿಶ್ವವಿಖ್ಯಾತ ಮೈಸೂರು ಅರಮನೆಯ(Mysore Palace) ಸ್ವಚ್ಛತೆ(Clean) ಹಾಗೂ ಸೌಂದರ್ಯ(Beauty) ಹಾಳಾಗುತ್ತಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ(DC) ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಗತಿ ಪ್ರತಿಷ್ಠಾನದ ಅಧ್ಯಕ್ಷ ಅಜಯ್ ಕುಮಾರ್ ಜೈನ್ ‘ಈಟಿವಿ ಭಾರತ್’ ಜೊತೆ ಮಾತನಾಡಿ, ಅರಮನೆಯ ಸಮೀಪದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದೆದುರು ಜನರು ಪಕ್ಷಿಗಳಿಗೆ ಒಂದು ಮುಷ್ಟಿ ಧಾನ್ಯ ಹಾಕುವ ಪದ್ಧತಿ ಹಿಂದಿನಿಂದಲೂ ಇದೆ. ಆದರೆ ಇತ್ತೀಚೆಗೆ ಜನರು ಹೆಚ್ಚಾಗಿ ಧಾನ್ಯಗಳನ್ನು ತಂದು ಹಾಕುತ್ತಿದ್ಧಾರೆ. ಇದರಿಂದ ಪಾರಿವಾಳಗಳು ಅಲ್ಲೇ ಬೀಡುಬಿಟ್ಟು, ಅರಮನೆ ಮೇಲೆ ಕುಳಿತು ಹಿಕ್ಕೆ ಹಾಕುತ್ತಿವೆ. ಹೀಗಾಗಿ ಅಲ್ಲಿ ಒಂದೇ ಕಡೆ ಧಾನ್ಯಗಳನ್ನು ಹಾಕುವ ಬದಲು ಬೇರೆ ಬೇರೆ ಕಡೆ ಸ್ಪಲ್ವ ಪ್ರಮಾಣದಲ್ಲಿ ಹಾಕಿದರೆ ಪಕ್ಷಗಳು ಬಂದು ತಿಂದುಕೊಂಡು ಹೋಗುತ್ತವೆ. ದಿಢೀರ್ ಎಂದು ಈಗ ಧಾನ್ಯಗಳನ್ನು ಹಾಕುವುದನ್ನು ನಿಲ್ಲಿಸಿದರೆ ಅಲ್ಲೇ ಬೀಡುಬಿಟ್ಟಿರುವ ಪಾರಿವಾಳಗಳಿಗೆ ತೊಂದರೆಯಾಗಲಿದೆ” ಎಂದು ಹೇಳಿದರು.
ವನ್ಯಜೀವಿ ತಜ್ಞ ರಾಜಕುಮಾರ್ ದೇವರಾಜ್ ಅರಸ್ ಮಾತನಾಡಿ, “ಎಲ್ಲಾ ಪ್ರಾಣಿ-ಪಕ್ಷಿಗಳಿಗೂ ಆಹಾರ ಮತ್ತು ಸಂತಾನೋತ್ಪತ್ತಿ ಜೀವನಕ್ರಮವಾಗಿರುತ್ತದೆ. ಮನುಷ್ಯರು ಸೇವಿಸುವ ಆಹಾರದಲ್ಲಿ ಹೆಚ್ಚು ಪ್ರೋಟೀನ್ ಅಂಶ ಇರುತ್ತದೆ. ಇದು ಪಕ್ಷಿಗಳಿಗೆ ಬೇಕಿಲ್ಲ. ನಾವು ಅಲ್ಲಿ ಅವುಗಳಿಗೆ ಆಹಾರ ಹಾಕುವುದನ್ನು ಬಿಟ್ಟರೆ ಅವೇ ತಮ್ಮ ಆಹಾರ ಅರಸಿಕೊಂಡು ಹೋಗುತ್ತವೆ. ಅರಮನೆ ಸುತ್ತಾಮುತ್ತ ಮನುಷ್ಯರೇ ಇರುವುದರಿಂದ ಅವುಗಳಿಗೆ ಬೇರೆ ಪ್ರಾಣಿ – ಪಕ್ಷಿಗಳಿಂದ ಅಪಾಯವಿಲ್ಲ. ಹೀಗಾಗಿ ಅಲ್ಲಿ ಪಾರಿವಾಳ ಸಂತಾನೋತ್ಪತಿ ಹೆಚ್ಚಾಯ್ತು. ಪಾರಿವಾಳ ಹಿಕ್ಕೆಯಲ್ಲಿ ಹೆಚ್ಚು ಕ್ಯಾಲ್ಸಿಯಂ ಇರುತ್ತದೆ. ಹೀಗಾಗಿ ಅವು ಪಾರಂಪರಿಕ ಮತ್ತು ಇತರೆ ಕಟ್ಟಡ ಮೇಲೆ ಹಿಕ್ಕೆ ಹಾಕಿದರೆ ಹಾನಿಯಾಗುತ್ತದೆ. ನಾವು ತಿನ್ನುವ ಆಹಾರವನ್ನು ಪ್ರಾಣಿ – ಪಕ್ಷಿಗಳಿಗೆ ನೀಡುವ ಅವಶ್ಯಕತೆ ಇಲ್ಲ. ಜಿಲ್ಲಾಧಿಕಾರಿಗಳು ಕ್ರಮಕ್ಕೆ ಸೂಚನೆ ನೀಡಿರುವುದು ಒಳ್ಳೆಯದು” ಎಂದು ಅಭಿಪ್ರಾಯಪಟ್ಟರು.