#NASA ಅಮೇರಿಕಾದ ವಿಜ್ಞಾನ ಸಂಸ್ಥೆ. ಇದು ಒಂದಿಲ್ಲ ಒಂದು ಅನ್ವೇಷಣೆ, ಸಂಶೋಧನೆ ಮಾಡುತ್ತಲೇ ಇರುತ್ತದೆ. ಈ ಬಾರಿ ಜಗತ್ಪ್ರಸಿದ್ಧ ವೈಜ್ಞಾನಿಕ ಸಂಸ್ಥೆ NASA ಹಲವು ಸಂಶೋಧನೆಗಳ ನಂತರ ಸೂರ್ಯನಿಂದ ಪ್ರತಿಕ್ಷಣವೂ ಹೊರಹೊಮ್ಮುವ ಧ್ವನಿಯನ್ನು ರೆಕಾರ್ಡ್ ಮಾಡಿತ್ತು. ಆ ಧ್ವನಿಯನ್ನು ಕೇಳಿದ ವಿಜ್ಞಾನಿಗಳಿಗೆ ಅಚ್ಚರಿಯಾಗಿದೆ. ಆ ಧ್ವನಿ ಯಾವುದು ಅಂತೀರಾ..? ವೇದಗಳಲ್ಲಿ ಗುಣಗಾನ ಮಾಡಲಾಗಿರುವ, ಸನಾತನ ಧರ್ಮದ ಪವಿತ್ರ ಮಂತ್ರ ಓಂಕಾರ…!!
ಇನ್ನೂ ಅಚ್ಚರಿಯೆಂದರೆ , ಸಾಮಾನ್ಯ ಮನುಷ್ಯ ೨೦ ಮೆಗಾ ಹರ್ಟ್ಸಿನಿಂದ ೨೦೦೦೦ ಮೆಗಾಹರ್ಟ್ಸ್ ಧ್ವನಿಯನ್ನಷ್ಟೇ ಕೇಳಬಲ್ಲ. ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಶಬ್ದವನ್ನು ಮನುಷ್ಯ ಗ್ರಹಿಸಲಾರ ಎಂದು ವಿಜ್ಞಾನ ತಿಳಿಸುತ್ತದೆ.ಆದರೆ ಸೂರ್ಯನಿಂದ ಬರುವ ಈ ಓಂಕಾರನಾದವನ್ನು ನಮ್ಮ ಋಷಿಮುನಿಗಳು ಅರಿತಿದ್ದಾದರೂ ಹೇಗೆ..?ವೇದಗಳಲ್ಲಿ ಕೊಂಡಾಡಿದ್ದು ಹೇಗೆ..? ಓಂಕಾರವನ್ನು ಮಹಾಮಂತ್ರವೆಂದು ಸ್ವೀಕರಿಸಿದ್ದು ಹೇಗೆ..? ಮುಂತಾದ ಪ್ರಶ್ನೆಗಳು ವಿಜ್ಞಾನಿಗಳನ್ನೂ ಕಾಡುತ್ತಿದೆ..!!
ನಮ್ಮ ಋಷಿಗಳ ಪ್ರಕಾರ , ಪರಮಾತ್ಮನನ್ನು ಸೇರಲು ಸುಲಭ ಸಾಧನವೆಂದರೆ ಓಂಕಾರ. ಓಂಕಾರವೇ ಪರಮಾತ್ಮನ ನಿಜವಾದ ಹೆಸರು.”ಓಮಿತ್ಯೇಕಾಕ್ಷರಂ ಬ್ರಹ್ಮ”. ಮಹರ್ಷಿ ಪತಂಜಲಿ ತಿಳಿಸುವಂತೇ “ತಸ್ಯ ವಾಚಕಃ ಪ್ರಣವಃ” ಪ್ರಣವವೆಂದರೆ “ಓಂಕಾರ”ಸೂರ್ಯನಿಂದ ಓಂಕಾರನಾದ ಬರಲು ಕಾರಣವಾದರೂ ಏನು..? ಇದಕ್ಕೆ ಉತ್ತರ ಗೀತೆಯಲ್ಲಿದೆ..
ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ: “ಅರ್ಜುನ , ನಿನಗಿಂದು ಯಾವ ವಿದ್ಯೆಯನ್ನು ನಾನು ಉಪದೇಶಿಸಿದೆನೋ ಈ ವಿದ್ಯೆಯನ್ನು ನಿನಗಿಂತಲೂ ಮೊದಲು ಸೂರ್ಯನಿಗೆ ಉಪದೇಶಿಸಿದ್ದೆ. ಅಂದಿನಿಂದ ಸೂರ್ಯ ನಿರಂತರವಾಗಿ ಓಂಕಾರವನ್ನು ಜಪಿಸುತ್ತ ಲೋಕವನ್ನು ಬೆಳಗುತ್ತಿದ್ದಾನೆ .ಕೇವಲ ಸೂರ್ಯನಷ್ಟೇ ಅಲ್ಲ. ಸಮಸ್ತ ಬ್ರಹ್ಮಾಂಡವೂ ಓಂಕಾರದಲ್ಲೇ ಅಧೀನವಾಗಿದೆ” ಅಂದರೆ ವಿಜ್ಞಾನಿಗಳು ಕಂಡುಹಿಡಿದ ಸತ್ಯ ಋಷಿ-ಮುನಿಗಳಿಗೆ , ಕೃಷ್ಣನಿಗೆ ತಿಳಿದಿತ್ತು..!! ಋಷಿಗಳು ಕೇವಲ ಕಿವಿಯಿಂದ ಕೇಳಲು ಸಾಧ್ಯವಿಲ್ಲವೆಂದಿದ್ದರು , ಧ್ಯಾನದಿಂದ ಸಾಧ್ಯವೆಂದಿದ್ದರು. ವಿಜ್ಞಾನಿಗಳು ಆಧುನಿಕ ಯಂತ್ರಗಳನ್ನು ಉಪಯೋಗಿಸಿ ಕಂಡುಹಿಡಿದಿದ್ದಾರಷ್ಟೇ…!!
ಯಾವಾಗ ನಾವು ಓಂ…ಎಂದು ಜೋರಾಗಿ ಉಚ್ಚರಿಸುತ್ತೇವೋ ಆಗ ನಮ್ಮ ಮನಸ್ಸಿನಲ್ಲಿರುವ ದುಗುಡ-ದುಮ್ಮಾನಗಳು ಖಾಲಿಯಾಗುತ್ತವೆ. ಓಂಕಾರದ ಜಪ ತೀವ್ರವಾಗುತ್ತಿದ್ದಂತೇ , ಬ್ರಹ್ಮಾಂಡದಲ್ಲಿರುವ ಓಂಕಾರ ಹಾಗೂ ಸಾಧಕನ ಓಂಕಾರನಾದಗಳ ಸಮ್ಮಿಲನವಾಗುತ್ತದೆ. ಆ ಸಮಯದಲ್ಲಿ ಸಾಧಕನ ಮನಸ್ಸು ಧ್ಯಾನದಲ್ಲಿ ಕಳೆದುಹೋಗುತ್ತದೆ. ಈ ಅವಸ್ಥೆಯಲ್ಲಿ ಮನಸ್ಸು ಚೇತನದೊಂದಿಗೆ ಸೇರಿಕೊಳ್ಳುತ್ತದೆ.
Source: Digital Media
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…