ಕೃಷಿ ಜಮೀನು(Farm Land) ಹೊಸದಾಗಿ ಖರೀದಿಸಿರುವ ಮತ್ತು ಕೃಷಿ ಭೂಮಿ ಹೊಂದಿರುವ ಕೃಷಿಕರಿಗೆ(Agriculturist) ತಮ್ಮ ಜಮೀನುಗಳನ್ನು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕೃಷಿ ಭೂಮಿಯನ್ನು ಆಹಾರ, ಅನಂದ, ಆರೋಗ್ಯ, ಆರ್ಥಿಕತೆ ದೃಷ್ಟಿಯಲ್ಲಿ ವಿನ್ಯಾಸ ಮಾಡಿಕೊಳ್ಳುವುದು ಇಂದಿನ ಮತ್ತು ಮುಂದಿನ ದಿನಗಳಿಗೆ ಅತ್ಯವಶ್ಯಕವಾಗಿರುತ್ತದೆ.
ಫಾರ್ಮ್ ವಿನ್ಯಾಸದ ಉದ್ದೇಶವೇನು?: ಕೃಷಿ ಭೂಮಿ ವಿನ್ಯಾಸದ ಅಂತಿಮ ಉದ್ದೇಶವು ಕೃಷಿಕರ ಜೀವನ ಮಟ್ಟವನ್ನು ಸುಧಾರಿಸುವುದು, ನಿರ್ವಹಣೆ ಸುಲಭವಾಗಿಸುವುದು, ಗರಿಷ್ಠ ಬಳಕೆಯ ಉದ್ದೇಶಗಳಿಗೆ ಕೃಷಿ ಭೂಮಿಯನ್ನು ತೆರೆದಿಡುವುದು,ನಿರ್ವಹಣಾ ವೆಚ್ಚ ಮತ್ತು ಸಂಪನ್ಮೂಲಗಳನ್ನು ಸಮರ್ಥವಾಗಿ ಕ್ರೂಢೀಕರಿಸಿಕೊಳ್ಳಲು ಇರುವ ಅವಕಾಶಗಳನ್ನು ಬಳಸಿಕೊಳ್ಳುವುದು.
ಫಾರ್ಮ್ ಲೇಔಟ್ ವಿನ್ಯಾಸ ಎಂದರೇನು?: ಜಮೀನಿನಲ್ಲಿ ವಿವಿಧ ಉದ್ದೇಶಗಳಿಗೆ, ಅನುಕೂಲತೆ ಮತ್ತು ಆರ್ಥಿಕತೆಗೆ ಅನುಗುಣವಾಗಿ ಎಲ್ಲಿ ಸ್ಥಳ ನಿಗಧಿಪಡಿಸಬೇಕು ಎಂಬುದರ ಕುರಿತು ಕೃಷಿಕರಿಗೆ ಸ್ಪಷ್ಟ ನೋಟವನ್ನು ನೀಡುತ್ತದೆ. ಉದಾಹರಣೆಗೆ : ಬೆಳೆ ಆಯೋಜನೆ ನಕ್ಷೆ, ಫಾರ್ಮ ಹೌಸ್, ನೀರಿನ ಪೈಪ್‌ಗಳು, ರಸ್ತೆಗಳು, ವಿದ್ಯುತ್ ಕಂಬಗಳು, ಕುರಿ/ಮೇಕೆ/ಕೋಳಿ ಶೆಡ್,ಬೋರ್‌ವೆಲ್ ಮತ್ತು ನೀರಿನ ಪಂಪ್, ಕಟ್ಟಡಗಳು ಇತ್ಯಾದಿ. ಬೆಳೆ ಆಯೋಜನೆ ಮುನ್ನ ಜಮೀನಿನ ವಿನ್ಯಾಸ(ಲೇಔಟ್ ಪ್ಲಾನ್) ಕಡ್ಡಾಯವಾಗಿ ಮಾಡಿಕೊಳ್ಳಿ, ವಿನ್ಯಾಸ ಮಾಡದೇ ತೋಟ ಕಟ್ಟುವ ಉತ್ಸಹದಲ್ಲಿ ರಸ್ತೆ, ಟ್ರೆಂಚ್/ಇಂಗುಗುಂಡಿ ಮಾಡದೇ ಬೆಳೆ ಆಯೋಜನೆ, ನೀರಾವರಿ ಪೈಪ್ ಲೈನ್ ಎಲ್ಲಾ ಮಾಡಿದ ನಂತರ ಪುನಃ ಬದಲಾವಣೆ ಮಾಡುವುದರಿಂದ ಅಪಾರವಾದ ಆರ್ಥಿಕ ಮತ್ತು ಸಮಯ ನಷ್ಟವಾಗುತ್ತದೆ.
ನಿಮ್ಮ ಕೃಷಿ ಭೂಮಿಯನ್ನು ವಿನ್ಯಾಸಗೊಳಿಸಲು ಸಲಹೆ ಅಗತ್ಯವಿದೆಯೇ? : ನಮ್ಮ 30 ವರ್ಷಗಳ ಪರಿಣಿತಿಯೊಂದಿಗೆ ನಿಮ್ಮ ಅನುಭವವನ್ನು ಸಂಯೋಜಿಸಿ,ನಿಮ್ಮ ಕೃಷಿ ಭೂಮಿ ಮತ್ತು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ವಿನ್ಯಾಸ ಸಿದ್ದಪಡಿಸಿಕೊಡಲಾಗುವುದು.ಕೃಷಿ ಭೂಮಿ ಮತ್ತು ನೀರಾವರಿ ವಿನ್ಯಾಸ,ಮಣ್ಣಿನ ಸಿದ್ಧತೆ, ಬೆಳೆ ಆಯೋಜನೆ ಮತ್ತು ನಿರ್ವಹಣೆ, ಕೃಷಿ ಮತ್ತು ಕೃಷಿಯೇತರ ಆದಾಯ ಜೋಡಣೆಯ ಅವಕಾಶಗಳು, ಇನ್ನಿತರೇ ಕೃಷಿ ಸಂಬಂಧಿತ ವಿಚಾರಗಳ ಬಗ್ಗೆ ಸಮಾಲೋಚನೆಗಾಗಿ ಸಂಪರ್ಕಿಸಿ. ಪ್ರಶಾಂತ್ ಜಯರಾಮ್ ಕೃಷಿಕರು ಮತ್ತು ಕೃಷಿ ಸಲಹೆಗಾರರು ಮೊಬೈಲ್ : 9342434530
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…