ಅನೇಕರಿಗೆ ದೂರದ ಊರಿಗೆ ಪ್ರವಾಸ ಹೋಗಬೇಕು, ಅಲ್ಲಿನ ಜಾಗಗಳನ್ನು ನೋಡಬೇಕು, ತಿಳಿದುಕೊಳ್ಳಬೇಕೆಂದಿರುತ್ತದೆ. ಆದರೆ ಅದಕ್ಕೆ ಸೂಕ್ತ ರೀತಿಯಲ್ಲಿ ಹೋಗುವ ಸೌಲಭ್ಯ ಇರೋದಿಲ್ಲ. ಆದ್ರೆ ಇದೀಗ ಇಂಥ ಪ್ರವಾಸಿಗರಿಗಾಗಿ ಕೆಎಸ್ಆರ್ಟಿಸಿಯಿಂದ ಪ್ಯಾಕೇಜ್ ಟೂರ್ ಘೋಷಿಸಲಾಗಿದೆ. ಮಳೆಗಾಲದಲ್ಲಿ ಜಲಪಾತಗಳನ್ನು ವೀಕ್ಷಿಸಬೇಕು ಎಂಬ ಆಸೆ ಇದೆಯಾ? ಹೇಗೆ ಹೋಗುವುದು ಎಂದು ಚಿಂತೆ ಮಾಡ್ತಾ ಇದ್ದೀರಾ? ಅಂಥವರಿಗಾಗಿ ಜಲಪಾತಗಳಿಗೆ ಕೆಎಸ್ಆರ್ಟಿಸಿ ಪ್ಯಾಕೇಜ್ ಟೂರ್ ಆರಂಭಿಸಿದೆ.
ವೀಕೆಂಡ್ನಲ್ಲಿ ಅಂದ್ರೆ ಶನಿವಾರ ಮತ್ತು ಭಾನುವಾರ ಈ ಪ್ಯಾಕೇಜ್ ಟೂರ್ ಆರಂಭವಾಗ್ತಿದೆ. ಆ. 12ರಿಂದ ಈ ಪ್ಯಾಕೇಜ್ ಟೂರ್ ಶುರುವಾಗಲಿದೆ. ಆಸಕ್ತಿ ಇರುವವರ ಪ್ರವಾಸ ಕೈಗೊಳ್ಳಬಹುದು. ಬೆಂಗಳೂರಿನಿಂದ ಪ್ಯಾಕೇಜ್ ಟೂರ್ ನ ಕರ್ನಾಟಕ ಸಾರಿಗೆ ಬಸ್ ಕಾರ್ಯಾಚರಣೆಗೊಳ್ಳಲಿದೆ. ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ಸ್ಥಳಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ. ವಯಸ್ಕರಿಗೆ 450 ರೂಪಾಯಿ ಮತ್ತು 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ 300 ರೂಪಾಯಿ ಪ್ರಯಾಣ ದರ ನಿಗದಿ ಮಾಡಲಾಗಿದೆ. ಇದರಲ್ಲಿ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇರಿಲ್ಲ.
ಜೋಗ ಟೂರ್-ಜೋಗಕ್ಕೆ ಶುಕ್ರವಾರ ರಾತ್ರಿ 9.30ಕ್ಕೆ ಬೆಂಗಳೂರಿನಿಂದ ಹೊರಟು ಶನಿವಾರ ಬೆಳಿಗ್ಗೆ 5ಕ್ಕೆ ಸಾಗರಕ್ಕೆ ತಲುಪಲಿದೆ. ಅಲ್ಲಿ ವಿಶ್ರಾಂತಿ, ಉಪಾಹಾರ ಮುಗಿಸಿ ವರದಹಳ್ಳಿಗೆ, ಅಲ್ಲಿಂದ ವರದಮೂಲ, ಇಕ್ಕೇರಿ, ಕೆಳದಿ ಸುತ್ತಾಡಿಕೊಂಡು ಮತ್ತೆ ಮಧ್ಯಾಹ್ನದ ಊಟಕ್ಕೆ ಸಾಗರಕ್ಕೆ ತಲುಪಲಿದೆ. ಅಲ್ಲಿಂದ ಜೋಗಕ್ಕೆ ತೆರಳಿ ಸಂಜೆ 7ಕ್ಕೆ ಮತ್ತೆ ಸಾಗರಕ್ಕೆ ಬಂದು ಶಾಪಿಂಗ್, ಊಟ ಮುಗಿಸಿ ರಾತ್ರಿ 10ಕ್ಕೆ ಬೆಂಗಳೂರಿಗೆ ಹೊರಡಲಿದೆ. ಮರುದಿನ ಬೆಳಿಗ್ಗೆ 5ಕ್ಕೆ ಬೆಂಗಳೂರಿಗೆ ತಲುಪಲಿದೆ. ಮೊದಲ ಪ್ರವಾಸ ಆ.11ರಂದು ಆರಂಭಗೊಳ್ಳಲಿದೆ. ವಯಸ್ಕರಿಗೆ 2,500, ಮಕ್ಕಳಿಗೆ 2,300 ಪ್ರಯಾಣದರ ನಿಗದಿ ಮಾಡಲಾಗಿದೆ. ಇದಕ್ಕೆ ಐರಾವತ ಅಥವಾ ಸ್ಪೀಪರ್ ಬಸ್ ಸೌಲಭ್ಯ ನೀಡಲಾಗವುದು ಎಂದು KSRTC ತಿಳಿಸಿದೆ. ಟೂರ್ ಸಂಬಂಧಿತ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ- 7760990287/7760990988. ಅಥವಾ KSRTC ಅಧಿಕೃತ ವೆಬ್ಸೈಟ್ ಮೂಲಕ ಬುಕ್ಕಿಂಕ್ ಮಾಡಬಹುದು.
ರಾಜ್ಯದಲ್ಲಿ ನಂದಿನಿ ಹಾಲು, ಮೊಸರು ಹಾಗೂ ವಿದ್ಯುತ್ ದರ ದುಬಾರಿಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490.
ಒಂದು ದೇವಸ್ಥಾನದ ಎಂದರೆ ಶ್ರದ್ಧೆಯ ಕೇಂದ್ರ, ಒಂದು ಊರಿನ ದೇವಸ್ಥಾನ ಎಂದರೆ ಸೌಹಾದರ್ತೆಯ…
ಏಪ್ರಿಲ್ 3 ಹಾಗೂ 4 ರಂದು ಕರಾವಳಿ ಹಾಗೂ ಉತ್ತರ ಮತ್ತು ದಕ್ಷಿಣ…
ಮಿಜೋರಾಂನ ಚಂಫೈ ಜಿಲ್ಲೆಯ ಕಾಡಿನಲ್ಲಿ ದಾಸ್ತಾನು ಇರಿಸಿದ್ದ 321 ಚೀಲ ಅಡಿಕೆಯನ್ನು ಅಸ್ಸಾಂ…