ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದ್ದರೂ ಆಂಧ್ರಪ್ರದೇಶ ಮೂಲದ ಯೂಟ್ಯೂಬರ್ ಹಾಗೂ ವೈದ್ಯ ಡಾ. ಗಿರಿಕುಮಾರ್ ಪಾಟೀಲ್ ಅಲ್ಲೇ ಇದ್ದಾರೆ. ಅವರು ಸಾಕಿರುವ ಚಿರತೆಗಳನ್ನು ಬಿಟ್ಟು ಬರುತ್ತಿಲ್ಲ.ತಾನು ಸತ್ತರೂ, ಬದುಕಿದರೂ ಚಿರತೆಗಳೊಂದಿಗೆ ಎಂದು ಹೇಳಿದ್ದಾರೆ.
ಗಿರಿ ಕುಮಾರ್ ಪಾಟೀಲ್ ಅವರು ಆಂಧ್ರಪ್ರದೇಶದ ತನುಕು ಮೂಲದವರು. ಉಕ್ರೇನ್ ನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಯೂಟ್ಯೂಬ್ ನಲ್ಲಿ ಜಾಗ್ವಾರ್ ಕುಮಾರ್ ಎಂದು ಎಲ್ಲರಿಗೂ ಪರಿಚಿತರಾಗಿದ್ದಾರೆ. ಇದೀಗ ಉಕ್ರೇನ್ ರಷ್ಯಾ ಯುದ್ಧ ನಡೆಯುತ್ತಿದೆ. ಅನೇಕರು ಅವರವರ ದೇಶಗಳಿಗೆ ತೆರಳಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನೂ ಸಾಕಷ್ಟು ಸಂಖ್ಯೆಯಲ್ಲಿ ಕರೆ ತರಲಾಗಿದೆ. ಈ ವೈದ್ಯರು ಮಾತ್ರಾ ಭಾರತಕ್ಕೆ ಬರಲು ಅವಕಾಶ ಇದ್ದರೂ ಬರಲು ಒಪ್ಪಿಲ್ಲ. ಉಕ್ರೇನ್‌ನಿಂದ ಹೊರಟರೆ, ಇಲ್ಲಿ ಚಿರತೆಗಳು ಹಸಿವಿನಿಂದ ಸಾಯುವುದು ಖಾತ್ರಿ. ಅವುಗಳಿಗೆ ಇಲ್ಲಿ ಆಹಾರ ನೀಡುವವರು ಯಾರೂ ಇಲ್ಲ, ಆದ್ದರಿಂದ ಈ ಪರಿಸ್ಥಿತಿಯಲ್ಲಿ ನಾನು ಅವುಗಳನ್ನು ಬಿಟ್ಟು ಹೋಗುವುದಿಲ್ಲ ಎಂದು ಘೋಷಿಸಿದ್ದಾರೆ.
ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಹಾಗೂ ಕಾಡ್ಗಿಚ್ಚು ನಿರ್ವಹಣೆ…
ಭಾರತವು ಕಾಫಿ ಉತ್ಪಾದನೆಯಲ್ಲಿ ಏಳನೇ ಅತಿ ದೊಡ್ಡ ಮತ್ತು ಜಾಗತಿಕವಾಗಿ ಐದನೇ ಅತಿ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ.…
ಕಳೆದ ಕೆಲವು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ.…
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ…
ಸ್ನಾನದ ಮೂಲಕವೂ ನದಿಯನ್ನು ಆರಾಧಿಸಬಹುದೆಂಬ ಭಾರತೀಯ ಕಲ್ಪನೆ ನಿಜಕ್ಕೂ ಅದ್ಭುತವಾದುದು ಎಂಬುದಾಗಿ ಎರಿಕ್…