ಭಿಕ್ಷೆ ಬೇಡಿ ಉಳಿದ ಒಂದು ಲಕ್ಷ ರೂ. ಬಪ್ಪನಾಡು ದೇವಸ್ಥಾನಕ್ಕೆ ದೇಣಿಗೆ ನೀಡಿದ ವೃದ್ಧೆ

October 19, 2022
5:00 PM

ದೇವಸ್ಥಾನದ ಸುತ್ತಮುತ್ತ ಪ್ರದೇಶಗಳಲ್ಲಿ ಭಿಕ್ಷೆ ಬೇಡಿ ಉಳಿದ ಒಂದು ಲಕ್ಷ ರೂಪಾಯಿ ಹಣವನ್ನು ವೃದ್ಧೆಯೊಬ್ಬರು ಬಪ್ಪನಾಡು ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿ ಮಾದರಿಯಾಗಿದ್ದಾರೆ.

Advertisement

80 ಹರೆಯದ ವೃದ್ಧೆ ಇಲ್ಲಿ ತನಕ ಭಿಕ್ಷೆ ಬೇಡಿ ಬಂದಿರುವ ಹಣದಲ್ಲಿ ವಿವಿಧ ದೇವಸ್ಥಾನಗಳಿಗೆ ಸುಮಾರು 9 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ 80ರ ವೃದ್ಧೆ ಅಶ್ವತ್ಥಮ್ಮ ಈ ಮಾದರಿ ಕೆಲಸ ಮಾಡಿದವರು.

ಸೋಮವಾರ ಮಂಗಳೂರಿನ ಹೊರವಲಯದ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಆಗಮಿಸಿ ದೇವಸ್ಥಾನದ ಅನ್ನದಾನಕ್ಕೆ 1 ಲಕ್ಷ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ. ದೇಣಿಗೆ ಸ್ವೀಕರಿಸಿದ ಬಳಿಕ ದೇವಳದ ಅರ್ಚಕ ನರಸಿಂಹ ಭಟ್‌ ಅವರು ಅಶ್ವತ್ಥಮ್ಮ ಅವರಿಗೆ ಪ್ರಸಾದ ನೀಡಿ ಹರಸಿದರು.

ಆಡಳಿತ ಮೊಕ್ತೇಸರರಾದ ಮನೋಹರ್‌ ಶೆಟ್ಟಿ ದೇವಳದ ವತಿಯಿಂದ ಗೌರವಿಸಿದರು. ಅರ್ಚಕ ಪ್ರಸಾದ್‌ ಭಟ್‌, ಅಕೌಂಟೆಂಟ್‌ ಶಿವಶಂಕರ್‌ ವರ್ಮ, ಕಾರ್ತಿಕ್‌ ಕೋಟ್ಯಾನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

“ಬಯೋ” ಔಷಧಿಗಳ ಹೆಸರಿನಲ್ಲಿ ಅಡಿಕೆ ರೈತರ ವಂಚನೆ..? ರೋಗಕ್ಕಿಂತಲೂ ದೊಡ್ಡ ಸವಾಲಾಗಿ ಮೂಡಿದ ಕೆಲವು ಔಷಧಿಗಳು..!, ಆದರೂ ಇಲಾಖೆಗಳು, ಸರ್ಕಾರ ಮೌನ…!
February 23, 2026
9:21 PM
by: ಮಿರರ್‌ ಡೆಸ್ಕ್
ಅಡಿಕೆ ತೋಟದಲ್ಲಿ ಲೆಮನ್ ಗ್ರಾಸ್ ಬೆಳೆ | ‘ಕೃಷ್ಣ’ ಜಾತಿಗೆ ಹೆಚ್ಚು ಉತ್ಪಾದನೆ – ಐಸಿಎಆರ್ ಅಧ್ಯಯನ
February 23, 2026
8:39 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ| 23-02-2026 | ಕರಾವಳಿ–ಮಲೆನಾಡಿನಲ್ಲಿ ತುಂತುರು ಮಳೆ ಸಾಧ್ಯತೆ | ಫೆ.27ರವರೆಗೆ ಉಷ್ಣತೆ ಏರಿಕೆ ಲಕ್ಷಣ
February 23, 2026
7:59 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror