Advertisement
Opinion

ಗೋದಾನಕ್ಕೆ ಕಾಟಾಚಾರದ “ಬೆಳ್ಳಿ, ಬಂಗಾರದ ಗೋವಿನ ಮೂರ್ತಿಯ ದಾನ ಮಾಡದಿರಿ : ದೇಸಿ ಹಸು ಸಾಕುವವರಿಗೆ ಹುಲ್ಲು, ಹಿಂಡಿ ತರಲು, ನಿರ್ವಹಣೆಗೆ ಹಣ ನೀಡಿ

Share

ಒಂದು ಕಾಲದಲ್ಲಿ ಬ್ರಾಹ್ಮಣರಿಗೆ(Brahman) ಗೋದಾನ(Godana) ಕೊಡುವುದು ಬಹಳ ಶ್ರೇಷ್ಠವಾಗಿತ್ತು. ‌ಯಾವಾಗ ಬ್ರಾಹ್ಮಣರಲ್ಲಿ ಶಿಕ್ಷಣಕ್ಕೆ(Education) ಹೆಚ್ಚು ಒತ್ತು ಕೊಟ್ಟು ಬ್ರಾಹ್ಮಣರ ಕುಟುಂಬದ ಹೊಸ ಪೀಳಿಗೆ ಹೆಚ್ಚಿನ ವಿಧ್ಯಾಭ್ಯಾಸ ಮಾಡಿಕೊಂಡು ಪಟ್ಟಣ(City) ಸೇರಿದ ಲಗಾಯ್ತಿನಿಂದ ಬ್ರಾಹ್ಮಣರ ಮನೆಯಲ್ಲಿ ಈಗ ಪೂಜೆಗೂ ಹಾಲಿಗೂ ಗೋವಿಲ್ಲದ ಪರಿಸ್ಥಿತಿ ಬಂದಿದೆ‌…!

Advertisement
Advertisement

ನಿಜ … ಇದೀಗ ಬ್ರಾಹ್ಮಣರಲ್ಲಿ ಬೊಜ್ಜ ಇತ್ಯಾದಿ ಸಂಧರ್ಭದಲ್ಲಿ ಗೋದಾನ ಹಿಡಿಯೋರೇ ಇಲ್ಲ..!! ಜೀವಂತ ಗೋವಿನ
ಬದಲಿಗೆ ಬೆಳ್ಳಿ ಗೋದಾನ ಚಾಲ್ತಿಗೆ ಬಂದಿದೆ. ಯಾವುದೋ ಕಾಲದಲ್ಲಿ ಗೋದಾನಕ್ಕೆ ಬಹಳ ಮೌಲ್ಯ ಇತ್ತು. ಈಗಿಲ್ಲ…
ಭೂದಾನ ಕೊಡ್ತಾರೆ…!!! ಅದೂ ಪ್ರಯೋಜನ ಇಲ್ಲದ ಬಂಜರು ಭೂಮಿಯನ್ನು.. ಎಲ್ಲಾ ದಾನಗಳೂ ಕಾಟಾಚಾರ ಆಗಿದೆ.
ಒಂದು ಇಪ್ಪತ್ತೈದು ವರ್ಷಗಳ ಹಿಂದೆ ಗೋದಾನಕ್ಕೆ ಮನೆಯವರು ಒಳ್ಳೆಯ ಒದಕಲು ದನವನ್ನ ಹಿಡಿದು ದಾನ ಕೊಟ್ಟು ಒಂದೇ ಏಟಿಗೆ ಒದೆಯೋ ದನದ ಸಮಸ್ಯೆ ಮತ್ತು ದಾನ ಕೊಡುವ ಸಮಸ್ಯೆಗೆ ಪರಿಹಾರ ಕಂಡು ಕೊಳ್ತಿದ್ದರು. ಈಗ ಗೋ ದಾನಕ್ಕೆ ಮೌಲ್ಯ ಕಳೆದು ಹೋಗಿದೆ.

Advertisement

ಗೋದಾನ ಹಿಡಿಯುವ ಬ್ರಾಹ್ಮಣರು ತಮ್ಮ ಮನೆಯ ಗೋವನ್ನೇ ಕರ್ತೃಗಳ ಮನೆಗೆ ಪಿಕ್ಅಪ್‌ನಲ್ಲಿ ತಂದು ದಾನ ಹಿಡಿದ ಶಾಸ್ತ್ರ ಮಾಡಿ ನಂತರ ಆ ಗೋವಿನ ಮೌಲ್ಯದ ಮೊತ್ತ ಪಡೆದು ಮನೆಗೆ ಗೋವಿನೊಂದಿಗೆ ಮರಳುತ್ತಾರೆ. ಈ “ಸುಧಾರಿತ ದಾನಕ್ಕೆ” ಪಾಪದ ಅರೆ ಸಿಂಧಿ ಗೋವುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವು ಖಾಯಂ ದಾನ ಹಿಡಿಯುವವರ ಮನೆಯ ಗೋದಾನದ ಕರು ದನಕ್ಕೆ ಈ ಪಿಕ್ಅಪ್ ಹತ್ತುವುದು ಇಳಿಯುವುದು, ಪೂಜೆ ಮಾಡಿಸಿಕೊಳ್ಳುವುದು ಅವಕ್ಕೆ ಅಭ್ಯಾಸ ವಾಗಿರುತ್ತದೆ. ಕರ್ತೃಗಳಿಗೂ ಒಳ್ಳೆಯ ಗೋಪೂಜೆ ಮಾಡಿ ದಾನ ಕೊಟ್ಟ ಖುಷಿಯಾಗುತ್ತದೆ.

ಬಂಧುಗಳೇ…, ದಯಮಾಡಿ ಗೋದಾನದ ವಿಚಾರ ಬಂದಾಗ ಹೀಗೆ ಕಾಟಾಚಾರದ ಹೆಚ್ಎಫ್ ಜಾನುವಾರುಗಳೋ, ಒದಕಲು ದನಗಳನ್ನೋ‌ ಅಥವಾ ಬೆಳ್ಳಿ ಬಂಗಾರದ ಗೋದಾನ ಮಾಡದೇ ಸಮೀಪದ ದೇಸಿ ಹಸು ಸಾಕುವವರಿಗೆ ಹುಲ್ಲು ತರಲು, ಹಿಂಡಿ ತರಲು, ನಿರ್ವಹಣೆ ಬಾಬ್ತು ಹಣವನ್ನು ನೀಡಿದರೆ ಅದು ಶ್ರೇಷ್ಠ “ಗೋದಾನ”ವಾಗುತ್ತದೆ. ಗೋದಾನ ಎಂದಾಕ್ಷಣ ಹಾಲುಕೊಡುವ ಹಸು ಕರುವೇ ಆಗಬೇಕು ಎಂಬುದು ಮೌಡ್ಯ. ಹತ್ತಾರು ದೇಸಿ ಹಸುಗಳ ಸಾಕಿ ಕೊಂಡು ಕಷ್ಟ ಬಿಟ್ಟು ಸಾಕುವ ಗೋಪಾಲಕರು ಯಾವುದೇ ಜಾತಿಯವರಾದರೂ ಈ ಬಗೆಯ ಗೋದಾನಕ್ಕೆ ಅರ್ಹರು.

Advertisement

ಈ ಗೋದಾನಕ್ಕೆ ಜಾತಿ ನೋಡದಿರಿ. ದೇಸಿ ತಳಿ ಹಸುಗಳನ್ನು ಸಾಕುವವರೇ ಪುಣ್ಯವಂತ ಗೋಪಾಲಕರು, ಗೋಪಾಲಕೃಷ್ಣ ರೂಪಿಗಳು. ಇಂತಹ ಗೋಪಾಲಕರ “ಗೋಪಾಲನೆ” ಗೆ ಹಣ ಗೋಗ್ರಾಸವನ್ನು ನೀಡಿದರೆ ಅದೇ ಈ ಕಾಲದ ಶ್ರೇಷ್ಠ ಗೋದಾನ ವಾಗುತ್ತದೆ. ಅದು ಭಗವಂತನಿಗೆ ಈ ಮೂಲಕ ತಲುಪುತ್ತದೆ. ದಯಮಾಡಿ ಗೋದಾನದ ಸಂಧರ್ಭದಲ್ಲಿ ಈ ಕಾಟಾಚಾರದ “ಬೆಳ್ಳಿ ಬಂಗಾರದ ಗೋವಿನ ಮೂರ್ತಿ ಯ ಗೋದಾನ ಮಾಡದಿರಿ “. ದೇವರು ಇಂತಹ ಕಾಟಾಚಾರದ ಪುರೇತರ ಅನುಕೂಲದ “ದಾನವನ್ನು” ಒಪ್ಪಿಕೊಳ್ಳೋಲ್ಲ. ಏಕೆಂದರೆ ಈ ನಾಡಿನಲ್ಲಿ ಇನ್ನೂ ಪಾಪದ ದೇಸಿ ಹಸುಗಳು ಇವೆ. ಅವಿದ್ದೂ “ಬೆಳ್ಳಿ ಗೋದಾನ ” ಮಾಡುವುದು ದೇವರಿಗೆ ಮಾಡುವ ವಂಚನೆಯಾಗುತ್ತದೆ. ದಯಮಾಡಿ ಇಂತಹ ಕಾಟಾಚಾರದ ಲೋಹದ ಮೂರ್ತಿಯ ಗೋದಾನ ಬೇಡ ಎಂದು ಸಮಸ್ತ ದೇಸಿ ತಳಿ ಗೋವುಗಳ ಪರವಾಗಿ ಕೋರುತ್ತಿದ್ದೇನೆ

 

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |

ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.

2 hours ago

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…

2 hours ago

ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು

ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…

2 hours ago

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

2 hours ago

ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?

 ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…

2 hours ago

ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |

ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…

3 hours ago