ಕಳೆದ ಎರಡು ದಿನಗಳಿಂದ ಕುರಿ ಮೇಯಿಸಿ ಲಕ್ಷಾಂತರ ರೂಪಾಯಿ ವಾರ್ಷಿಕವಾಗಿ ದುಡಿಯುವ ಡಿಪ್ಲೊಮಾ ಪದವಿದರನ ಈ ವೀಡಿಯೋ ಭಾರೀ ವೈರಲ್ ಆಗ್ತಿದೆ. ನಿಜಕ್ಕೂ ಆ ಯುವಕನ ದುಡಿಮೆ ಅಮೋಘ. ಆದರೆ ……. ಕುರಿ ಕಾಯೋದು ದನ ಕಾಯೋದು ಅಷ್ಟು ಸುಲಭನಾ…?
ಆರು ತಿಂಗಳ ಕಾಲ ಮೂಲ ಊರಿನಿಂದ ಸುಮಾರು ನಾಲ್ಕುನೂರು ಕಿಲೋಮೀಟರ್ ದೂರ ಸಾವಿರಾರು ಕುರಿಗಳನ್ನು ತರಬಿಕೊಂಡು (ಒಟ್ಟು ಮಾಡಿ ಕೊಂಡು) ಮೇಯಿಸಿಕೊಂಡು ಮತ್ತೆ ಊರಿಗೆ ಮರಳುವುದು ಅತಿ ದೊಡ್ಡ ಸಾಹಸದ ಕೆಲಸವಾಗಿರುತ್ತದೆ. ಸಾವಿರಾರು ಕುರಿಗಳನ್ನು ರಸ್ತೆಯಲ್ಲಿ ವಾಹನಗಳ ಓಡಾಟದ ಮದ್ಯೆ ಹೊಡೆದು ಕೊಂಡು ಹೋಗುವುದೂ, ಅವುಗಳಿಗೆ ಮೇಯಲು ಜಾಗ ಹುಡುಕುವುದೂ, ಅವುಗಳಿಗೆ ಕುಡಿಯಲು ನೀರು ಒದಗಿಸುವುದು (ಎಲ್ಲಾ ಕಡೆಯಲ್ಲೂ ನದಿ ಕೆರೆಗಳು ಸಿಗದು) ಅನಾರೋಗ್ಯ ವಾದರೆ ಚಿಕಿತ್ಸೆ ಕೊಡಿಸುವುದು (ಪರ ಊರಿನಲ್ಲಿ) ಕುರಿಗಳು ಕಳ್ಳತನ ಆಗದಂತೆ ನೋಡಿ ಕೊಳ್ಳುವುದು ಸಾವಿರದ ಲೆಕ್ಕದಲ್ಲಿ ಇರುವಾಗ ಅದು ಬಹಳ ತ್ರಾಸದ ಕೆಲಸ.
ಲಕ್ಷ ಲಕ್ಷ ಆದಾಯವಿದ್ದರು ಕುರಿಗಾಹಿಗೆ ಎಲ್ಲೆಂದರಲ್ಲಿ ಮಲಗಿ ಆಹಾರ ಸ್ವೀಕರಿಸುವ ಯೋಗಿ ಮನಸ್ಥಿತಿ ಇರಬೇಕು. ಅದು ಅಷ್ಟು ಸುಲಭವಲ್ಲ..!! ಮತ್ತು ಇಷ್ಟು ಕುರಿಗಳಿಗೆ ಪ್ರತಿ ಊರಿನಲ್ಲೂ ಮೇವು ಹುಡುಕುವುದು ಬಹಳ ಕಷ್ಟ. ಈ ಒತ್ತುವರಿ ಕಾಲದಲ್ಲಿ ಕಾಲಿಜಾಗ, ಸರ್ಕಾರಿ ಜಾಗ ಬಹಳ ಕಡಿಮೆ. ತೋಟಗಾರಿಕೆ ಹೆಚ್ಚು ಇದ್ದ ಊರಿನಲ್ಲಿ ಎಲ್ಲ ತೋಟಗಾರರೂ ತಮ್ಮ ತೋಟದಲ್ಲಿ ಕುರಿಗಳನ್ನು ಬಿಟ್ಟು ಕೊಳ್ಳೋಲ್ಲ…!! ಕುರಿಗಳಿಗೆ ಅದರಲ್ಲೂ ಸಾವಿರಾರು ಕುರಿಗಳಿಗೆ ಆಹಾರ ಹೊಂದಿಸುವುದು ಬಹಳ ಒತ್ತಡ ಸಾಹಸದ ವಿಚಾರ.. ನಮ್ಮ ವ್ಯವಸ್ಥೆ ಹೇಳುವುದು ನೋಡುವುದು ಈ ಯುವಕನ ವಾರ್ಷಿಕ ಇಪ್ಪತ್ತೈದು ಮೂವತ್ತು ಲಕ್ಷದ ಆದಾಯ ಮಾತ್ರ…
ಈ ಇಪ್ಪತ್ತೈದು ಲಕ್ಷ ಆದಾಯಕ್ಕೆ ಕುರಿಗಾಹಿಯ ಶ್ರಮ ಹೋರಾಟದ ಬಗ್ಗೆ ಗಮನಿಸೋಲ್ಲ…!!! ನಮ್ಮ ಯುವಕರು ಉದ್ಯಮಗಳ ಸ್ಥಾಪನೆಯನ್ನು ಎಷ್ಟು ಲಾಭ ಬರುತ್ತದೆ ಎಂಬ ಆಧಾರದಲ್ಲೇ ಸ್ಥಾಪಿಸಲು ಹೋಗಿ ಆ ಆದಾಯ ಬರಲು ಪಡಬೇಕಾದ ಶ್ರಮದ ಬಗ್ಗೆ ಅಧ್ಯಯನ ಮಾಡದೇ ಒಮ್ಮೆಗೆ ಉದ್ಯಮ ಮಾಡಿ ನಿರೀಕ್ಷಿತ ಆದಾಯ ಗಳಿಸಲಾಗದೇ ಸೋತು ನೆಲಕಚ್ಚುತ್ತಾರೆ. ಯಾರಾದರೂ ಹೀಗೆ ಕುರಿ ಸಾಕಿ ಲಕ್ಷ ಲಕ್ಷ ಸಂಪಾದನೆ ಮಾಡಲಿಚ್ಚಿಸುವವರು ಒಂದು ಆರು ತಿಂಗಳ ಕಾಲ ಈ ಕುರಿಗಾಹಿ ಯುವಕನ ಜೊತೆಯಲ್ಲಿ ಇದ್ದು ಕುರಿ ಕಾದು ತರಬೇತಾಗಿ ನಂತರ ಕುರಿ ಸಾಕಿ ವರ್ಷಕ್ಕೆ ಇಪ್ಪತ್ತೈದು ಲಕ್ಷ ದುಡಿಯುವ ಕನಸು ಕಾಣಲಿ…
ಹೀಗೆ ಕುರಿ ಕೋಳಿ ಡೈರಿ ಫಾರ್ಮ್ ಮಾಡಿ ಲಕ್ಷ ಕೋಟಿ ದುಡಿಯಲು ಹೋಗಿ ಸೋತವರು ಲಕ್ಷ ಲಕ್ಷ ಜನರು. ಡೈರಿ ಫಾರ್ಮ್ ನಲ್ಲಿ ತಿಂಗಳಲ್ಲಿ ಲಕ್ಷ ಸಂಪಾದನೆ… ಎನ್ನುವ ಶೀರ್ಷಿಕೆಯ ಲೇಖನ ಯೂಟ್ಯೂಬ್ ಅವತರಣಿಕೆಯನ್ನು ನೋಡಿ ಪ್ರಭಾವಿತರಾಗಿ ಲಕ್ಷಾಂತರ ಸಾಲ ಮಾಡಿ ಕೊಟ್ಟಿಗೆ ಕಟ್ಟಿ ಲಕ್ಷ ಲಕ್ಷ ಕೊಟ್ಟು ಹಸುಗಳನ್ನು ಎಲ್ಲಿಂದಲೋ ತಂದು ಸಾಕಿ ಕೈ ಸೋತವರು ಸಾವಿರಾರು ಜನ ಇದ್ದಾರೆ.
“ಲಕ್ಷ” ಬಹಳ ದೊಡ್ಡ ಲಕ್ಷ್ಯ ಕೊಡಬೇಕು. ಅದೊಂದು ದೊಡ್ಡ ನಿರಂತರವಾದ ತಪಸ್ಸು… ನಮ್ಮ ಯುವ ಪೀಳಿಗೆ ಯಾವುದಾದರೂ ಉದ್ಯಮ ಸ್ಥಾಪಿಸುವ ಮೊದಲು ಆ ಸಂಬಂಧಿಸಿದ ಉದ್ಯಮ ದಲ್ಲಿ ಚೆನ್ನಾಗಿ ತರಬೇತಾಗಿ ಪ್ರಯೋಗಿಕ ಜ್ಞಾನ ಪಡೆದು ಕೊಳ್ಳಬೇಕು . ಸುಮ್ಮನೆ ವಾಟ್ಸಾಪ್, ಯೂಟ್ಯೂಬ್, ಫೇಸ್ ಬುಕ್ ಪತ್ರಿಕೆ ಟಿವಿ ಮಾದ್ಯಮದ “ಲಕ್ಷ ಲಕ್ಷ ಸಂಪಾದನೆ” ಯ ವರದಿ ನೋಡಿ ಟೋಪಿ ಬೀಳಬಾರದು. ಕುರಿ, ದನ, ಕೋಳಿ, ಹಂದಿ ಯಾವುದೇ ಪ್ರಾಣಿ ಪಕ್ಷಿಗಳ ಸಾಕಣೆ ಖಂಡಿತವಾಗಿಯೂ ನೋಡಿ ಕೇಳಿದಷ್ಟು ಸುಲಭವಲ್ಲ. ಯುವಕರು ಎಚ್ಚರಿಕೆಯಿಂದ ಪ್ರೇರಣೆ ಪಡೆಯಲಿ…
ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಯಡಿ ಅತಿ ಹೆಚ್ಚು ಬೆಳೆ ವಿಮೆ ಪಡೆದ…
ಲಡಾಖ್‌ನ ದ್ರಾಸುದಲ್ಲಿಂದು 26ನೇ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ…
ಧರ್ಮ ಎನ್ನುವ ತಳಹದಿಯಲ್ಲಿ ಬದುಕು ನಿಂತಿದೆ. ಅರ್ಥ ಮತ್ತು ಕಾಮನೆಗಳಿಗೆ ಧರ್ಮವೇ ತಳಹದಿ.…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಜುಲೈ 27 ರಂದು ಮಧ್ಯಪ್ರದೇಶ ದಾಟಿ ರಾಜಸ್ಥಾನ ಗಡಿ…
ಭಾರತದಲ್ಲಿ, ಮೇ ತಿಂಗಳಿನಲ್ಲಿ ಉಂಟಾದ ತೀವ್ರ ಉಷ್ಣತೆಯು ಬೆಳೆ ಇಳುವರಿ ಮತ್ತು ಪೂರೈಕೆ…
ಗಂಡ-ಹೆಂಡತಿ ಸಂಬಂಧವು ಜೀವನದ ಅತ್ಯಂತ ಗಾಢವಾದ ಮತ್ತು ಆಧ್ಯಾತ್ಮಿಕ ಬಂಧವಾಗಿದೆ. ಜ್ಯೋತಿಷ್ಯ ಶಾಸ್ತ್ರದ…