ಬಿಸಿಲ ಬೇಗೆಗೆ ವನ್ಯ ಜೀವಿಗಳು ಪರಿತಪಿಸುತ್ತಿವೆ. ಬಿಸಿಲ ನಾಡು ಬೀದರ್, ಗುಲ್ಬಾರ್ಗಾ, ಯಾದಗಿರಿ, ಬಿಜಾಪುರ ಜಿಲ್ಲೆಗಳಲ್ಲಿ ಈವರೆಗೆ ಮಳೆಯಾಗಿಲ್ಲ. ಜನತೆ ಹೇಗೂ ಮಾಡಿ ಅಲ್ಲಿ ಇಲ್ಲಿ ಹುಡುಕಿ ನೀರು ತಂದು ಜೀವಿಸುತ್ತಾರೆ. ಆದರೆ ಕಾಡು ಪ್ರಾಣಿಗಳ ಕಥೆ ಹೇಳತೀರದು. ಪ್ರಾಣಿಗಳ ವಾಸ ಸ್ಥಾನಕ್ಕೆ ಸಂಚಕಾರ ತಂದ ಮನುಜನೇ ಇದಕ್ಕೆ ಪರಿಹಾರ ಒದಗಿಸಬೇಕು. ಬೀದರ್ ನ ಕೆಲ ಯುವಕರ ತಂಡ ಇಂತಹ ಒಳ್ಳೆ ಕೆಲಸಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಬಿಸಿಲ ಆರ್ಭಟ ಜಾಸ್ತಿ ಏರುತ್ತಲೇ ಇದೆ. ಈ ಬಿಸಿಲಿನ ಬೇಗೆಗೆ ಕೇವಲ ಜನ ಮಾತ್ರವಲ್ಲ ಪ್ರಾಣೀ-ಪಕ್ಷಿಗಳು ಸಹ ಇದರಿಂದ ಸಮಸ್ಯೆ ಅನುಭವಿಸುತ್ತಿವೆ. ಅದರಲ್ಲೂ ಗಡಿ ನಾಡಿನ ಜಿಲ್ಲೆಗಳಲ್ಲಿ ಜನ ಹಾಗೂ ಜಾನುವಾರುಗಳು ಪರದಾಡುತ್ತಿವೆ.
ಗಡಿಜಿಲ್ಲೆ ಬೀದರ್‌ನಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಜನರಂತೂ ಯಾವಾಗ ಈ ಬೇಸಿಗೆ ಮುಗಿಯುತ್ತದೆ ಎಂದು ಕಾದು ಕುಳಿತಿದ್ದಾರೆ. ಹಾಗೆಯೇ, ಅವರು ತಮ್ಮ ಕೈಲಾದಷ್ಟು ಬೇಸಿಗೆಯ ಬೇಗಿಯಿಂದ ತಪ್ಪಿಸಿಕೊಳ್ಳಲು ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ ಪ್ರಾಣಿ-ಪಕ್ಷಿಗಳೇನು ಮಾಡಲು ಸಾಧ್ಯ?.
ಈ ತಂಡದ ಯುವಕರ ಪ್ರಕಾರ ಈ ಕಾಡಿನಲ್ಲಿ ಕೋತಿ, ಜಿಂಕೆ, ನವಿಲು, ಹಾವು, ಮುಂಗುಸಿ ಸೇರಿದಂತೆ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳು ಇರುತ್ತವೆ. ಬೇಸಿಗೆಯಲ್ಲಿ ಅವುಗಳು ನೀರಿನ ಸಮಸ್ಯೆಯನ್ನು ಅನುಭವಿಸುತ್ತವೆ. ಅವುಗಳ ಈ ಸಮಸ್ಯೆ ಹೋಗಲಾಡಿಸುವುದು ನಮ್ಮ ಕರ್ತವ್ಯ. ಹಾಗಾಗಿ ಪ್ರತಿನಿತ್ಯ ತೊಟ್ಟಿಗೆ ನೀರು ಹಾಕುತ್ತಾರೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…