ಒಂದಷ್ಟು ಎಡರು ತೊಡರುಗಳ ಮೂಲಕ ಕಾಂಗ್ರೆಸ್ ಸರ್ಕಾರದ ಎರಡನೇ ಗ್ಯಾರಂಟಿ ಯೋಜನೆ ಅನ್ನಭಾಗ್ಯಕ್ಕೆ#AnnaBhagya ಯೋಜನೆಗೆ ಇಂದು ಚಾಲನೆ ಸಿಗಲಿದೆ. ಬಿಪಿಎಲ್ ಕಾರ್ಡ್ದಾರರ ಖಾತೆಗೆ ಹಣ ಹಾಕುವ ಮೂಲಕ ಚಾಲನೆ ಸಿಗಲಿದೆ. ಹಂತಹಂತವಾಗಿ ಖಾತೆಗೆ ಹಣ ಹಾಕುವ ಯೋಜನೆಯನ್ನು ಆಹಾರ ಇಲಾಖೆ ಮಾಡಿಕೊಂಡಿದೆ.
ಸೋಮವಾರ ಕೋಲಾರ ಮತ್ತು ಮೈಸೂರು ಜಿಲ್ಲೆಯ ಬಿಪಿಎಲ್ ಕಾರ್ಡ್‍ದಾರರ ಅಕೌಂಟ್‍ಗೆ ಅಮೌಂಟ್ ಹಾಕಿ ಜಾರಿ ಮಾಡಲಿದ್ದಾರೆ. ನಂತರ ಮಂಗಳವಾರ ಉಳಿದ ಜಿಲ್ಲೆಯ ಬಿಪಿಎಲ್ ಕಾರ್ಡ್‍ದಾರರಿಗೆ ಹಣ ಹಾಕಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನಿರ್ಧರಿಸಿದೆ.
ರಾಜ್ಯದಲ್ಲಿ ಒಟ್ಟು 1.28 ಕೋಟಿ ಬಿಪಿಎಲ್ ಕಾರ್ಡ್‍ದಾರರಿದ್ದಾರೆ. 1.28 ಕೋಟಿ ಪೈಕಿ 99.9% ಆಧಾರ್ ಲಿಂಕ್ ಆಗಿದ್ದು ಬ್ಯಾಂಕ್ ಅಕೌಂಟ್ ಲಿಂಕ್ ಕೂಡ ಆಗಿದೆ. ಬಾಕಿ ಉಳಿದಿರುವ 6 ಲಕ್ಷ ಕಾರ್ಡ್‍ಗಳು ಆಧಾರ್ ಲಿಂಕ್ ಆಗಬೇಕಿದೆ. ಪ್ರತಿ ಕೆಜಿಗೆ 34 ರೂಪಾಯಿ ಲೆಕ್ಕದಲ್ಲಿ ತಲಾ ಒಬ್ಬರಿಗೆ 5 ಕೆಜಿಗೆ 170 ರೂಪಾಯಿ ಅಕೌಂಟ್‍ಗೆ ಬೀಳಲಿದೆ.
ಹಣ ಭಾಗ್ಯ ಹೇಗೆ? ನೀವು ಬಿಪಿಎಲ್ ಪಡಿತರ ಕಾರ್ಡ್‍ದಾರರಾಗಿರಬೇಕು. ರೇಷನ್ ಕಾರ್ಡ್‍ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಆಧಾರ್ – ಬ್ಯಾಂಕ್ ಖಾತೆ ಲಿಂಕ್ ಆಗದೇ ಇದ್ದರೆ ದುಡ್ಡು ಬರುವುದಿಲ್ಲ. ಕಾರ್ಡ್‌ನಲ್ಲಿ ಯಜಮಾನರಾಗಿರುವವರ ಖಾತೆಗೆ ಡಿಬಿಟಿ ಮೂಲಕ ಹಣ. ಅನ್ನಭಾಗ್ಯದ ಯೋಜನೆಗೆ ಯಾವುದೇ ಅರ್ಜಿ ಸಲ್ಲಿಕೆ ಅಗತ್ಯವಿಲ್ಲ.
ಕೃಷಿ ಸವಾಲು, ಕೃಷಿ ಕಷ್ಟ, ಕೃಷಿ ಇನ್ನು ಸಾಧ್ಯವೇ ಇಲ್ಲ ಎನ್ನುವ ನೆಗೆಟಿವ್…
7.5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಆಧಾರ್ ದೃಢೀಕರಣವನ್ನು ಬಳಸಿಕೊಂಡು ಚಾರ್ ಧಾಮ್ ಮತ್ತು…
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿ ಹೇಮಾವತಿ ನದಿ ನೀರಿಗೆ…
ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಗಮನದಲ್ಲಿಟ್ಟುಕೊಂಡು ಮಧ್ಯ ರೈಲ್ವೆಯು ಛತ್ರಪತಿ ಶಿವಾಜಿ…
ಬೇಸಿಗೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ಪ್ರಮುಖ ಜಲಾಶಯಗಳ ನಿರ್ವಹಣೆ ಹಾಗೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490