Advertisement
MIRROR FOCUS

ಭಾರತೀಯ ಕೃಷಿಯಲ್ಲಿ “ಡ್ರೋನ್ ಮೂಮೆಂಟ್” | ಕಿಸಾನ್ ಡ್ರೋನ್‌ಗಳ ಅಭಿವೃದ್ಧಿಯ ಹೆಜ್ಜೆ |

Share

ಭಾರತದ ಕೃಷಿ ಕ್ಷೇತ್ರವು ಬೆಳವಣಿಗೆಯಾಗುತ್ತಿದೆ. ಆಧುನಿಕ ತಂತ್ರಜ್ಞಾನಗಳು ಗಮನ ಸೆಳೆಯುತ್ತಿದೆ. ಯುವಕರು ಕೃಷಿಯತ್ತ ಆಸಕ್ತರಾಗಬೇಕಾದರೆ ನೂತನ ತಂತ್ರಜ್ಞಾನಗಳೂ ಅಗತ್ಯ ಇದೆ. ಈ ಹಂತದಲ್ಲಿ ಪರಿಸರದ ಮೇಲೂ ಹಾನಿಯಾಗದಂತೆ ಆಧುನಿಕ ಕೃಷಿ ಉಪಕರಣಗಳ ಬಳಕೆಯ ಕಡೆಗೆ ಹೆಚ್ಚು ಚರ್ಚೆ ಆಗಬೇಕಿದೆ. ಅಂತಹ ಚರ್ಚೆಯಲ್ಲಿ ಈಗ ಡ್ರೋನ್‌ ತಂತ್ರಜ್ಞಾನ ಇದೆ. ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಉಪಯೋಗವಾಗಬಲ್ಲ ಡ್ರೋನ್‌ ಬಳಕೆ ಈಗ ವೇಗವಾಗಿ ಬೆಳೆಯುತ್ತಿದೆ. ಮುಂದೆ ಓದಿ

Advertisement

ಭಾರತದ ಯುವ ಮತ್ತು ಡೈನಾಮಿಕ್ ಸ್ಟಾರ್ಟ್‌ಅಪ್‌ಗಳಿಂದ ಕಿಸಾನ್ ಡ್ರೋನ್‌ಗಳ ಅಭಿವೃದ್ಧಿಯು ದ್ರವ ರಸಗೊಬ್ಬರಗಳ ಬಳಕೆ ಹಾಗೂ ಪರಿಣಾಮಕಾರಿಯಾದ ಬಳಕೆಯ ತಂತ್ರವನ್ನು ನೀಡುತ್ತಿದ್ದಾರೆ. ಈಗಾಗಲೇ ಪಂಜಾಬ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಡ್ರೋನ್‌ ಬಳಕೆ ವಿಶೇಷ ಗಮನ ಸೆಳೆದಿದೆ. ಮುಂದೆ ಓದಿ

ಪಂಜಾಬಿನ ಹಚ್ಚ ಹಸಿರಿನ ಗದ್ದೆಗಳ ನಡುವೆ ಡ್ರೋನ್‌ ಹಾರಾಟದ ಸದ್ದು ಈಗ ಹೆಚ್ಚಾಗುತ್ತಿದೆ.ಅಲ್ಲಿ ದ್ರವರೂಪದ ನ್ಯಾನೋ ಯೂರಿಯಾವನ್ನು ಸಿಂಪಡಿಸಲು ಡ್ರೋನ್ ಬಳಕೆ ಹೆಚ್ಚಾಗುತ್ತಿದೆ. ಅತ್ಯಂತ ಗ್ರಾಮೀಣ ಭಾಗದಲ್ಲೂ ಕೂಡಾ ಡ್ರೋನ್‌ ಬಳಕೆ ಈಗ ಅನಿವಾರ್ಯ ಎಂಬ ಸ್ಥಿತಿಯಲ್ಲಿದೆ. ಕಾರ್ಮಿಕರ ಸಮಸ್ಯೆ ನಡುವೆ ಕೃಷಿ ಬೆಳೆವಣಿಗೆಗೆ ಡ್ರೋನ್‌ ಕೂಡಾ ಅಗತ್ಯವಾಗಿದೆ. ನ್ಯಾನೋ ಯೂರಿಯಾದಂತಹ ಹೊಸ ತಂತ್ರಜ್ಞಾನಗಳು ಬಂದಾಗ ಅವುಗಳ ಸಿಂಪಡಣೆಗೂ ಅದೇ ಮಾದರಿಯ ಇನ್ನೊಂದು ತಂತ್ರಜ್ಞಾನವನ್ನೂ ಯುವ ಕೃಷಿಕರು ಅಪೇಕ್ಷೆ ಪಡುತ್ತಾರೆ. ಅಂತಹ ಸಂದರ್ಭದಲ್ಲಿ ಡ್ರೋನ್‌ ಬಳಕೆಯ ಪರಿಣಾಮಕಾರಿ ಅಂಶಗಳ ಬಗ್ಗೆ ಚರ್ಚೆಯಾಗಿ ಅನುಷ್ಟಾನಕ್ಕೆ ಬರಬೇಕಿದೆ. ಮುಂದೆ ಓದಿ

ಭಾರತೀಯ ಕೃಷಿಯು ಸಾಂಪ್ರದಾಯಿಕವಾಗಿ ಎತ್ತಿನ ಗಾಡಿಯಿಂದ ಟ್ರಾಕ್ಟರ್ ಆಧಾರಿತ ಕೃಷಿಯತ್ತ ಈ ಹಿಂದೆ ಸಾಗಿತ್ತು. ಈಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಬಂದು ಡ್ರೋನ್‌ ತಂತ್ರಜ್ಞಾನವನ್ನೂ ಕೃಷಿ ವಲಯ ಒಪ್ಪಿಕೊಳ್ಳುತ್ತಿದೆ.  ಕೃಷಿ ಕೆಲಸಗಳಲ್ಲಿ ಡ್ರೋನ್‌ಗಳ ಬಳಕೆಯು ಕೃಷಿ ಕ್ರಾಂತಿಯ ಮೂರನೇ ಅಲೆಯಾಗಿ ಹೊರಹೊಮ್ಮುತ್ತಿದೆ. ಕೃಷಿ-ಡ್ರೋನ್ ತಂತ್ರಜ್ಞಾನವು ನಮ್ಮ ಕೃಷಿ ಪದ್ಧತಿಗಳನ್ನು ಆಧುನೀಕರಿಸುವಲ್ಲಿ ಮತ್ತು ಪರಿವರ್ತಿಸುವಲ್ಲಿ ಪ್ರಗತಿಯಾಗಿದೆ ಎನ್ನುವುದು ಸತ್ಯ. ಇದನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ಬಗ್ಗೆ ಚಿಂತನೆಗಳು ಅಗತ್ಯವಿದೆ.ಮುಂದೆ ಓದಿ

1960 ರ ಹಸಿರು ಕ್ರಾಂತಿಯು ಹೊಸ ಕೃಷಿ ಉಪಕರಣಗಳಿಗೆ, ಹೊಸ ಬೀಜಗಳಿಗೆ, ಕೀಟನಾಶಕಗಳಿಗೆ, ರಾಸಾಯನಿಕಗಳಿಗೆ ಕಾರಣವಾಗಿದೆ. ಈಗ ರಾಸಾಯನಿಕ ಮುಕ್ತ ಎನ್ನುವ ಮಾತುಗಳು ಕೇಳಿಬರುತ್ತಿದ್ದರೂ ಪರಿಣಾಮಕಾರಿ ವಿಧಾನಗಳ ಕಡೆಗೇ ಯುವ ಕೃಷಿ ವಲಯ ಹುಡುಕುತ್ತಿದೆ. ಈಗ ಬಯೋ, ನ್ಯಾನೋ ಮತ್ತು ಸಾವಯವ ಗೊಬ್ಬರಗಳಂತಹ ಪರ್ಯಾಯ ರಸಗೊಬ್ಬರಗಳನ್ನು ಉತ್ತೇಜಿಸಲು ಸರ್ಕಾರವು  ಜಾಗೃತಿಯನ್ನುಮೂಡಿಸುತ್ತಿದೆ. ಇಂತಹ ಸಂದರ್ಭದಲ್ಲಿ ಡ್ರೋನ್‌ ಬಳಕೆಯ ಪರಿಣಾಮಕಾರಿಯಾದ ಅಂಶಗಳು ಅಗತ್ಯ ಇದೆ. ಕೆಲವು ಕಡೆ ರಸಗೊಬ್ಬರ ಅನಿವಾರ್ಯದಂತಹ ಸಂದರ್ಭದಲ್ಲಿ ಒಂದು ಚೀಲ ಯೂರಿಯಾವು ಒಂದು ಲೀಟರ್‌ಗೆ ಇಳಿಕೆ ಮಾಡುತ್ತಾ, ಪೋಷಕಾಂಶಗಳನ್ನು ಗಿಡಗಳಿಗೆ ಹೆಚ್ಚು ನೀಡಲು ಸಾಧ್ಯ. ಈ ಸಮಯದಲ್ಲಿ ಡ್ರೋನ್‌ಗಳಂತಹ ಹೊಸ ತಂತ್ರಜ್ಞಾನವನ್ನು ಎಷ್ಟು ಶೀಘ್ರವೋ ಅಷ್ಟು ಶೀಘ್ರದಲ್ಲಿ ಪರಿಣಾಮಕಾರಿ ಬಳಕೆಯ ಬಗ್ಗೆ ಮಾಹಿತಿಯೂ ಅಗತ್ಯ ಇದೆ.ಈ ಮೂಲಕ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಬೆಳೆ ಇಳುವರಿಯನ್ನು ಸುಧಾರಿಸಲು ಕೃಷಿ ಸಮುದಾಯಕ್ಕೆ  ಸಂವಹನ ಮಾಡುವುದು ಅಗತ್ಯ ಇದೆ.ಮುಂದೆ ಓದಿ

ಒಂದು ಎಕರೆ ಕೃಷಿ ಭೂಮಿಯನ್ನು ನಿಮಿಷಗಳಲ್ಲಿ ಸುತ್ತುವ ಸಾಮರ್ಥ್ಯವನ್ನು ಡ್ರೋನ್‌ ಹೊಂದಿದ್ದು, ತಮ್ಮ ಹೊಲಗಳಲ್ಲಿ ಗಂಟೆಗಟ್ಟಲೆ  ಶ್ರಮಿಸುವ ರೈತರಿಗೆ ಇದು ವರವಾಗಿ ಪರಿಣಮಿಸುತ್ತದೆ. ಸಮಯ ಉಳಿತಾಯ, ಉತ್ಪಾದಕತೆ ಹೆಚ್ಚು ಹಾಗೂ ಶ್ರಮ ಉಳಿತಾಯದ ವ್ಯವಸ್ಥೆ ಇಲ್ಲಿದೆ. ಈ ಮೂಲಕ ಗ್ರಾಮೀಣ ಆರ್ಥಿಕತೆ ಹೆಚ್ಚಳ, ಉದ್ಯೋಗ ಸೃಷ್ಟಿಯೂ ಸಾಧ್ಯವಿದೆ. ಹೀಗಾಗಿ ಡ್ರೋನ್‌ ಮೂಮೆಂಟ್‌ ಭಾರತದಲ್ಲಿ ಅಗತ್ಯವಾಗಿ ಚರ್ಚೆಯಾಗಬೇಕಾದ ವಿಷಯವಾಗಿದೆ. ಮುಂದೆ ಓದಿ

ಯಾವುದೇ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ಬಂದಾಗ ಋಣಾತ್ಮಕ ಅಂಶಗಳೇ ಹೆಚ್ಚಾಗಿರುತ್ತದೆ. ಡ್ರೋನ್‌ ಕೂಡಾ ಅದನ್ನು ಹೊರತುಪಡಿಸಿಲ್ಲ. ಆದರೆ ಮುಕ್ತವಾದ ಚರ್ಚೆಗಳು ಆದಷ್ಟು ಬೇಗ ನಡೆದಷ್ಟು ಕೃಷಿ ಬೆಳವಣಿಗೆಗೆ ಪೂರಕವಾಗಿದೆ. ಕೃಷಿ ಆರ್ಥಿಕತೆ ಸುಧಾರಣೆಗೂ ಕಾರಣವಾಗಲಿದೆ.

The “drone movement” is gaining a lot of attention in Indian agriculture. At this stage, farmers need information about the use of drones and their effective use.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಸಮರ್ಥ ಸಮನ್ಯು

ಸಮರ್ಥ ಸಮನ್ಯು , - ಬರಹಗಾರರು, ವಿಮರ್ಶಕರು.

Published by
ಸಮರ್ಥ ಸಮನ್ಯು

Recent Posts

ಕರಾವಳಿಯಲ್ಲಿ ಅಕಾಲಿಕ ಮಳೆ ಅಬ್ಬರ | ಸುಬ್ರಹ್ಮಣ್ಯದ ಬಳಿ 42 ಮಿಮೀ, ಅಡಿಕೆ ಬೆಳೆಗಾರರಿಗೆ ಸಂಕಷ್ಟ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಅಕಾಲಿಕ ಮಳೆಯಾಗಿದ್ದು,…

6 hours ago

ಹವಾಮಾನ ವರದಿ | 21-02-2026 | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ | ಎಲ್ಲೆಲ್ಲಾ ಮಳೆ ಇದೆ…? ಎಷ್ಟು ದಿನ ಮಳೆ ಸಾಧ್ಯತೆ…?

ಕರ್ನಾಟಕದಲ್ಲಿ ಫೆಬ್ರುವರಿ 27ರವರೆಗೆ ಬಿಸಿಲಿನ ಜೊತೆಗೆ ತುಂತುರು ಮತ್ತು ಗುಡುಗು ಮಳೆಯ ಮುನ್ಸೂಚನೆ.…

12 hours ago

ಮಿಶ್ರ ಕೃಷಿಯತ್ತ ಮಲೆನಾಡಿನ ರೈತನ ಹೆಜ್ಜೆ ಅನಿವಾರ್ಯ

ಮಲೆನಾಡಿನಲ್ಲಿ ಅಡಿಕೆ ರೈತರು ಮಿಶ್ರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಹವಾಮಾನ ಬದಲಾವಣೆ, ಬೆಲೆ…

16 hours ago

ನಂದಿನಿ ಉತ್ಪನ್ನಗಳ ವಿರುದ್ಧದ ವದಂತಿ ನಂಬಬೇಡಿ : ಗ್ರಾಹಕರಿಗೆ ಕೆಎಂಎಫ್ ಮನವಿ

ನಂದಿನಿ ಹಾಲು ಮತ್ತು ಉತ್ಪನ್ನಗಳು ಸೇವನೆಗೆ ಸಂಪೂರ್ಣ ಸುರಕ್ಷಿತವೆಂದು ಕೆಎಂಎಫ್ ಸ್ಪಷ್ಟನೆ ನೀಡಿದೆ.…

16 hours ago

ರೈತರಿಗೆ ಗನ್ ಪರವಾನಗಿ : ಶೀಘ್ರದಲ್ಲೇ ಆನ್ಲೈನ್ ವ್ಯವಸ್ಥೆ ಜಾರಿ – ಜಿಲ್ಲಾಧಿಕಾರಿ ದರ್ಶನ್ ಎಚ್.ವಿ

ರೈತರಿಗೆ ಗನ್ ಪರವಾನಗಿ ಹಾಗೂ ನವೀಕರಣ ಪ್ರಕ್ರಿಯೆಯನ್ನು ಸುಲಭಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ…

16 hours ago

ಮಂಗಳೂರು ಅಡಿಕೆ ಮಾರುಕಟ್ಟೆ ‘ಸೈಕಲಾಜಿಕಲ್ ಬಫರ್’ ಹಂತಕ್ಕೆ…!

ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…

1 day ago