Advertisement
ಸುದ್ದಿಗಳು

ಕೃಷಿ ಕ್ಷೇತ್ರದಲ್ಲಿ ಡ್ರೋನ್ ಕೇವಲ ಕೀಟನಾಶಕ ಸಿಂಪಡಣೆಗೆ ಮಾತ್ರವಲ್ಲ; ಸಾವಯವ ಮತ್ತು ನೈಸರ್ಗಿಕ ಕೃಷಿಯಲ್ಲಿ ಇದರ ಪಾತ್ರ ಅಗಾಧ – ಸರ್ಕಾರ

Share

ಕೃಷಿ ವಲಯದಲ್ಲಿ ಇತ್ತೀಚೆಗೆ ಡ್ರೋನ್‌ನ ಬಳಕೆ ಕೇವಲ ಕೀಟನಾಶಕ ಸಿಂಪಡಣೆಗೆ ಮಾತ್ರ ಬಳಕೆಯಾಗ್ತಿಲ್ಲ. ಅದನ್ನು ಮೀರಿ ಸಾವಯವ ಮತ್ತು ನೈಸರ್ಗಿಕ ಕೃಷಿಯಲ್ಲಿಯೂ ತನ್ನ ಅಪಾರ ವ್ಯಾಪ್ತಿಯನ್ನು ಹೊಂದಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಹೇಳಿದ್ದಾರೆ.

Advertisement
Advertisement

ಕಳೆದ ಒಂದೂವರೆ ವರ್ಷಗಳಲ್ಲಿ ಭಾರತದಲ್ಲಿ ಡ್ರೋನ್ ಉದ್ಯಮವು 6 ರಿಂದ 8 ಪಟ್ಟು ಬೆಳೆದಿದೆ. ದೇಶದಲ್ಲಿ ಸ್ಥಾಪಿಸಲಾದ ಡ್ರೋನ್ ಮೂಲಸೌಕರ್ಯ “ಅತ್ಯಂತ ದೃಢವಾಗಿದೆ” ಮತ್ತು ಕೃಷಿಯಲ್ಲಿ ಅತ್ಯಮೂಲ್ಯ ಸ್ಥಾನ ಪಡೆದಿರುವ ಡ್ರೋನ್‌ಗಳ ಬಗ್ಗೆ ಭಾರತದಲ್ಲಿ ನಡೆದ ಕೇಸ್ ಸ್ಟಡಿಗಳ ಬಗ್ಗೆ G20 ಸಭೆಯಲ್ಲಿ ಪ್ರದರ್ಶಿಸಲಾಗುತ್ತದೆ.

Advertisement

2030ರ ವೇಳೆಗೆ ಡ್ರೋನ್‌ಗಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಡುವುದು ಭಾರತದ ಗುರಿಯಾಗಿದೆ. ಇದಕ್ಕಾಗಿ ಉತ್ಪಾದನಾ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ (ಪಿಎಲ್‌ಐ) ಸೇರಿದಂತೆ ಉದ್ಯಮ ಸ್ನೇಹಿ ನೀತಿ ಜಾರಿಯಲ್ಲಿದೆ ಎಂದು ಸಚಿವರು  ತಿಳಿಸಿದರು. ಲಕ್ನೋದಲ್ಲಿ ನಡೆದ ಮೊದಲ ಜಿ-20 ಕೃಷಿ ಪ್ರತಿನಿಧಿಗಳ ಸಭೆಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, “ಡ್ರೋನ್‌ಗಳನ್ನು ಕೇವಲ ಒಂದೇ ರೇಖೆಗಳ ಮೂಲಕ ನೋಡಬೇಡಿ. ಡ್ರೋನ್‌ಗಳ ಬಳಕೆಯಲ್ಲಿ ಬಹುಮುಖ ಮತ್ತು ವೈವಿಧ್ಯತೆ  ಅಗಾಧವಾಗಿದೆ.”

ಕೃಷಿಯಲ್ಲಿ ಡ್ರೋನ್ ಬಳಕೆ ಕೇವಲ ಕೀಟನಾಶಕ ಸಿಂಪಡಣೆಗೆ ಸೀಮಿತವಾಗಬಾರದು. ಇದನ್ನು ಕ್ಯಾಡಾಸ್ಟ್ರಲ್ ಮ್ಯಾಪಿಂಗ್ ಮತ್ತು ಕೃಷಿ ಭೂಮಿಯ ಸಮೀಕ್ಷೆಯಲ್ಲಿ ಬಳಸಬಹುದು ಎಂದು ಅವರು ಹೇಳಿದರು. ಸಾವಯವ ಕೃಷಿಯ ಬಳಕೆಯಲ್ಲಿ ಡ್ರೋನ್ ಅಪ್ಲಿಕೇಶನ್‌ನ ಸಹ ಅದ್ಭುತವಾಗಿದೆ. ನೈಸರ್ಗಿಕ ಕೃಷಿಯಲ್ಲಿಯೂ ಸಹ, ಡ್ರೋನ್‌ಗಳ ಅಪ್ಲಿಕೇಶನ್‌ಗೆ ಅಪಾರ ಅವಕಾಶವಿದೆ” ಎಂದು ಸಿಂಧಿಯಾ ಉಲ್ಲೇಖಿಸಿದರು.

Advertisement

ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಲು ಮತ್ತು ಭೂಮಿಯನ್ನು ಉಳಿಸಲು ಸರ್ಕಾರವು ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ದೊಡ್ಡ ರೀತಿಯಲ್ಲಿ ಉತ್ತೇಜಿಸುತ್ತಿದೆ. ಪ್ರಸ್ತುತ ಸಾವಯವ ಕೃಷಿಯಲ್ಲಿ ಮಧ್ಯಪ್ರದೇಶ ಮುಂಚೂಣಿಯಲ್ಲಿದೆ. ಕೃಷಿಯಲ್ಲಿ ಡ್ರೋನ್‌ಗಳನ್ನು ಕೀಟನಾಶಕಗಳನ್ನು ಸಿಂಪಡಿಸಲು ಮಾತ್ರ ಅನುಮತಿಸಲಾಗಿದೆ.ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಅಪ್ಲಿಕೇಶನ್‌ಗಳು ಹೊರಹೊಮ್ಮುತ್ತವೆ ಎಂದು ಪ್ರತಿಪಾದಿಸಿದರು.

ಭಾರತವು ಇನ್ನು ಮುಂದೆ ಇನ್ನೋಬ್ಬರನ್ನು ಅವಲಂಬಿಸಲು ಇಚ್ಚಿಸಲ್ಲ ಮತ್ತು ಪ್ರಪಂಚದಲ್ಲಿ ಅನ್ವೇಷಿಸದ ಕ್ಷೇತ್ರಗಳಲ್ಲಿ ದೇಶವು ಅಗ್ರಸ್ಥಾನದಲ್ಲಿರಬೇಕು ಎಂಬ ದೃಢಸಂಕಲ್ಪದಲ್ಲಿ ಪ್ರಧಾನಿಯವರಿದ್ದಾರೆ.  ಡ್ರೋನ್ ಅಂತಹ ಒಂದು ಕ್ಷೇತ್ರವಾಗಿದೆ ಎಂದು ಅವರು ಹೇಳಿದರು. ಅಗ್ರಿಕಲ್ಚರ್ ವರ್ಕಿಂಗ್ ಗ್ರೂಪ್ (AWG)ನ ಮೊದಲ G20 ಕೃಷಿ ಪ್ರತಿನಿಧಿಗಳ ಸಭೆಯ, ಮೂರು ದಿನಗಳ ಈವೆಂಟ್, ಫೆಬ್ರವರಿ 15ರಂದು ಮುಕ್ತಾಯಗೊಳ್ಳಲಿದೆ.

Advertisement

ಸಭೆಯಲ್ಲಿ ನಾಲ್ಕು ಪ್ರಮುಖ ಆದ್ಯತೆಯ ಕ್ಷೇತ್ರಗಳ ಮೇಲೆ ಚರ್ಚಿಸಲಾಯಿತು. ಆಹಾರ ಭದ್ರತೆ ಮತ್ತು ಪೋಷಣೆ, ಹವಾಮಾನ ಸ್ಮಾರ್ಟ್ ವಿಧಾನದೊಂದಿಗೆ ಸುಸ್ಥಿರ ಕೃಷಿ, ಅಂತರ್ಗತ ಕೃಷಿ ಮೌಲ್ಯ ಸರಪಳಿ ಮತ್ತು ಆಹಾರ ಪೂರೈಕೆ ವ್ಯವಸ್ಥೆ ಮತ್ತು ಕೃಷಿ ಪರಿವರ್ತನೆಯ ಡಿಜಿಟಲೀಕರಣ. ಜಿ20 ಕೃಷಿ ಕಾರ್ಯಕಾರಿ ಗುಂಪಿನ ಮುಂದಿನ ಸಭೆಗಳು ಚಂಡೀಗಢ, ವಾರಣಾಸಿ ಮತ್ತು ಹೈದರಾಬಾದ್‌ನಲ್ಲಿ ನಡೆಯುವ ಸಾಧ್ಯತೆಯಿದೆ.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :

ಬರಗಾಲ(Drought) ಬಂದಾಗ ಬಾಯಿ ಬಡಿಕೊಳ್ಳುವವರೇ ಹೆಚ್ಚು. ನೀರಿಲ್ಲ, ಸೆಕೆ, ಮಳೆ ಇಲ್ಲ, ಬೆಳೆಗಳಿಗೆ…

5 hours ago

ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?

ಪರಿಸರ(Environment) ಸ್ವಾಸ್ಥ್ಯದಿಂದರೇ ಮಾತ್ರ ಅದರ ಭಾಗವಾದ ಮಾನವರಾದ(Human) ನಾವು ಸ್ವಾಸ್ಥ್ಯದಿಂದಿರಬಹುದು. ನಮ್ಮ ಆರೋಗ್ಯಕ್ಕೆ(Health)…

6 hours ago

ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?

ಭಾರತೀಯ(Indian) ಆಹಾರ ಪದ್ಧತಿಯಲ್ಲಿ(Food Style).... ಸಮುದ್ರದ ಉಪ್ಪು(Sea salt), ಅಯೋಡಿಕರಿಸಿದ ಟೇಬಲ್ ಉಪ್ಪು(Iodized…

6 hours ago

ಕೆಲ ಜಿಲ್ಲೆಯ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ : ಬಳ್ಳಾರಿಯ 36,944 ರೈತರ ಖಾತೆಗೆ 41.40 ಕೋಟಿ ರೂ. ಜಮೆ

ಪ್ರಕೃತಿ ವಿಕೋಪಕ್ಕೆ(Natural disaster) ರೈತ(Farmer) ಬೆಳೆದ ಬೆಳೆಗಳು(Crop) ನಾಶವಾಗುವುದು ಸಾಮಾನ್ಯ. ಮಳೆ(Rain) ಜಾಸ್ತಿಯಾಗಿ…

6 hours ago

ವರುಣ ಕೃಪೆ ತೋರದಿದ್ರೆ ಭಾರಿ ಸಂಕಷ್ಟ : ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!

ಬರಗಾಲದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ಕೆಲವೆಡೆ ವರುಣರಾಯ(Rain) ಕೃಪೆ ತೋರಿ ತಕ್ಕಮಟ್ಟಿಗೆ ತಂಪೆರೆದಿದ್ದಾನೆ.…

9 hours ago

Karnataka Weather | 19-05-2024 | ಇಂದೂ ಮಳೆ ಇದೆ ಅಲ್ಲಲ್ಲಿ | ಮೇ.22 ನಂತರ ಚಂಡಮಾರುತ ಸಾಧ್ಯತೆ |

ಮೇ 22ರ ನಂತರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಚಂಡಮಾರುತವಾಗಿ ಪರಿವರ್ತನೆಗೊಳ್ಳವ…

11 hours ago