ನಾಡ ಹಬ್ಬ ಮೈಸೂರು ದಸರಾಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಹಬ್ಬದ ಮುಖ್ಯ ಆಕರ್ಷಣೆ ಜಂಬೂ ಸವಾರಿ. ಇದರಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ವಿಶೇಷ ಕಾಳಜಿ ತೋರಲಾಗುತ್ತದೆ. ಅವು ದುಬಾರೆಯಿಂದ ಅರಮನೆಗೆ ಬಂದ ಮೇಲೆ ಅದಕ್ಕೆ ವಿಶೇಷ ಆಹಾರಗಳನ್ನು ನೀಡಿ ಭಾರಿ ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ. ಈಗ ಅವುಗಳ ತೂಕವನ್ನು ಅಳೆಯಲಾಗಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಾಡಿನಿಂದ ಅರಮನೆಯ ಆವರಣಕ್ಕೆ ಬಂದಿರುವ ಗಜಪಡೆಯ ತೂಕ ಪರೀಕ್ಷೆ ಮಾಡಲಾಯಿತು. ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ತೂಕ ಪರೀಕ್ಷೆ ಒಳ ಪಡಿಸಲಾಯಿತು. ಈ ವೇಳೆ ಆನೆಗಳ ತೂಕ ಆರೋಗ್ಯಕರವಾಗಿರುವುದು ಕಂಡು ಬಂದಿದೆ.
ಮೈಸೂರು ಅರಮನೆಯಿಂದ ಪೊಲೀಸರ ಬಿಗಿ ಭದ್ರತೆಯಲ್ಲಿ ತೂಕ ಮಾಪನ ಕೇಂದ್ರಕ್ಕೆ ಗಜಪಡೆಗೆಯನ್ನು ಕರೆತರಲಾಯಿತು. ಈ ವೇಳೆ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು 5,160 ಕೆಜಿ ತೂಗಿದ್ದಾನೆ. ಈ ಮೂಲಕ ಆರೋಗ್ಯವಂತ ತೂಕವನ್ನು ಹೊಂದಿದ್ದಾನೆ ಎಂದು ಗುರುತಿಸಲಾಗಿದೆ.
ಆನೆಗಳ ತೂಕದ ಆಧಾರದ ಮೇಲೆ ಅವುಗಳ ಆಹಾರ ಮತ್ತು ತರಬೇತಿ ನಿಗದಿಯಾಗುತ್ತದೆ. ಆನೆಗಳು ಆರೋಗ್ಯವಂತ ತೂಕವನ್ನು ಹೊಂದಿದ್ದು, ಅವುಗಳಿಗೆ ಸೂಕ್ತ ಆಹಾರ ಹಾಗೂ ತರಬೇತಿಗೆ ಸಜ್ಜುಗೊಳಿಸಲು ಕ್ರಮ ವಹಿಸಲಾಗಿದೆ.
ದಸರಾ ಗಜಪಡೆಯ ತೂಕದ ವಿವರ:
ವಿಜಯ – 2,830 ಕೆಜಿ
ಭೀಮ – 4,370 ಕೆಜಿ
ವರಲಕ್ಷ್ಮಿ – 3,020 ಕೆಜಿ
ಮಹೇಂದ್ರ – 4,530 ಕೆಜಿ
ಧನಂಜಯ – 4,940 ಕೆಜಿ
ಕಂಜನ್ – 4,240 ಕೆಜಿ
ಗೋಪಿ – 5,080 ಕೆಜಿ
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …