“ನಿಮ್ಮ ಮನೆಯ ಕನಸು ನಮ್ಮಲ್ಲಿ ನನಸು” ಎಂಬ ಧೈಯವಾಕ್ಯದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬಡಾವಣೆಗಳನ್ನು ಮತ್ತು ಮನೆಗಳನ್ನು ನಿರ್ಮಿಸಿ, ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿರುವ ಜೊತೆಗೆ ಹಿರಿಯ ನಾಗರಿಕರಿಗೂ ವಿಶೇಷ ಬಡವಾವಣೆಗಳನ್ನು ನಿರ್ಮಿಸಿ ಅಭಿವೃದ್ಧಿ ಪಡಿಸುತ್ತಿರುವ ದ್ವಾರಕಾ ಕಾರ್ಪೋರೇಷನ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನದ ವತಿಯಿಂದ 5 ನೇ ವರ್ಷದ ದ್ವಾರಕೋತ್ಸವ ಫೆ.16ರಂದು ಪುತ್ತೂರು ಮುಕ್ರಂಪಾಡಿಯ ಗೋಕುಲ ಬಡಾವಣೆಯಲ್ಲಿ ನಡೆಯಲಿದೆ. ಈ ಬಾರಿ ವಿಶೇಷವಾಗಿ ಕೃಷಿ ಹಾಗೂ ಆರ್ಥಿಕ ವಿಚಾರಗೋಷ್ಟಿ ನಡೆಯಲಿದೆ. ಇದೇ ಸಂದರ್ಭ ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ದ್ವಾರಕಾ ಪ್ರತಿಷ್ಠಾನದ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.……… ಮುಂದೆ ಓದಿ…….
ದ್ವಾರಕಾ ಪ್ರತಿಷ್ಠಾನ ವಿವಿಧ ವೈದಿಕ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ, ಯಕ್ಷಗಾನ, ಸಂಗೀತ, ಗೋಸೇವೆ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಭಾರತೀಯ ಸಂಸ್ಕೃತಿಯ ಸಂರಕ್ಷಣೆ, ಅನುಷ್ಠಾನ, ಸಂವರ್ಧನೆ ನಮ್ಮ ಧೈಯವಾಗಿದೆ ಎಂದು ದ್ವಾರಕಾ ಪ್ರತಿಷ್ಠಾನದ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಹೇಳುತ್ತಾರೆ. ಆರ್ಥಿಕ ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಆದಾಯದ ಒಂದಷ್ಟು ಭಾಗವನ್ನು ಈ ಬಗೆಯ ಕಾರ್ಯಕ್ರಮಗಳಲ್ಲಿ ವಿನಿಯೋಗಿಸುವ ಮೂಲಕ ಸಾರ್ಥಕತೆಯನ್ನು ಹೊಂದುವ ಉದ್ದೇಶ ನಮ್ಮದಾಗಿದೆ ಎನ್ನುತ್ತಾರೆ.
ಫೆ.16 ರಂದು ಬೆಳಿಗ್ಗೆ 9.30 ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಅಂಬಿಕಾ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ನೆರವೇರಿಸಲಿದ್ದು, ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ಟ ಅರ್ತ್ಯಡ್ಕ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಕ್ಕಳ ತಜ್ಞ, ಆಪ್ತ ಸಲಹೆಗಾರ್ತಿ ಡಾ.ಸುಲೇಖಾ ವರದರಾಜ್, ಹಿರಿಯ ಆರ್ಥಿಕ ತಜ್ಞ ವಿಶ್ವೇಶ್ವರ ಭಟ್ಟ ಬಂಗಾರಡ್ಕ, ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಪ್ರಸಾದ ಭಟ್ಟ ನೆಕ್ಕರಕಳೆಯ (ಸಾವಯವ ಕೃಷಿ), ಡಾ.ಗೋಪಾಲಕೃಷ್ಣ ಕಾಂಚೋಡು (ಭಾರತೀಯ ಸೇನೆ), ಪದ್ಯಾಣ ಶಂಕರನಾರಾಯಣ ಭಟ್ಟ (ಯಕ್ಷಗಾನ ಹಿಮ್ಮೇಳ), ಸ್ವಸ್ತಿಕ್ ಪದ್ಮ ಮುರ್ಗಜೆ (ವೈಜ್ಞಾನಿಕ ಸಂಶೋಧನೆ) ಹಾಗೂ ಸುದರ್ಶನ ಭಟ್ಟ ಬೆದ್ರಡಿ (ಆಹಾರೋದ್ಯಮ) ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಬೆಳಗ್ಗೆ 11.30 ರಿಂದ ಕೃಷಿ ಮತ್ತು ಆರ್ಥಿಕ ವಿಚಾರಗೋಷ್ಟಿ ನಡೆಯಲಿದ್ದು, ರಿಯಲ್ ಎಸ್ಟೇಟ್ ಮತ್ತು ಆರ್ಥಿಕತೆಯ ಬಗ್ಗೆ ಹಿರಿಯ ಆರ್ಥಿಕ ತಜ್ಞ ವಿಶ್ವೇಶ್ವರ ಭಟ್ಟ ಬಂಗಾರಡ್ಕ, ಅಡಿಕೆಗೆ ಪರ್ಯಾಯದ ಬಗ್ಗೆ ಡಾ.ಗೋಪಾಲಕೃಷ್ಣ ಕಾಂಚೋಡು ಹಾಗೂ ದೇಸೀ ಗೋವು ಹಾಗೂ ಗವ್ಯೋತ್ಪನ್ನಗಳ ಬಗ್ಗೆ ಸುಬ್ರಹ್ಮಣ್ಯ ಪ್ರಸಾದ ಭಟ್ಟ ನೆಕ್ಕರಕಳೆಯ ಅವರು ಮಾತನಾಡುವರು.
ಪ್ರವಾಸಿಗರು ಸೇರಿದಂತೆ ಜನರು ಮುಳ್ಳಯ್ಯನಗಿರಿ ಪರ್ವತ ಶ್ರೇಣಿ ಹಾಗೂ ಅರಣ್ಯ ಪ್ರದೇಶಕ್ಕೆ ತೆರಳಿ…
ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ತುಮಕೂರು ಜಿಲ್ಲೆಯಲ್ಲಿರುವ ಕುಡಿಯುವ…
ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಕೆಲವು ಪ್ರದೇಶಗಳಲ್ಲಿ ನಿರ್ವಹಣಾ ಕಾರ್ಯಗಳಿಗಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆಯೇ…
ಶಿರಾಡಿ ಫಾಟಿ ರಸ್ತೆ ಅಭಿವೃದ್ಧಿಯ ಸಾಧ್ಯತೆಗಳ ಬಗ್ಗೆ ಆದಷ್ಟು ಬೇಗ ಯೋಜನಾ ವರದಿ…
ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಕಾಣಿಸುತ್ತಿದೆ.ಲಾ ನಿನಾ ಪರಿಣಾಮ ಇರುವುದರಿಂದ ಮಾರ್ಚ್ ತಿಂಗಳ…
ಎಲ್ಲಾ ಶಿಕ್ಷಣ ಸಂಸ್ಥೆಗಳ ಮೂಲಕ ರಾಜ್ಯ ವ್ಯಾಪ್ತಿಯಲ್ಲಿ ನೀರು ಉಳಿಸಿ ಅಭಿಯಾನವನ್ನು ಯುನಿಸೆಫ್…