ಭಾರತದಲ್ಲಿ ಹೆಚ್ಚಾಗುತ್ತಿರುವ ಇ ತ್ಯಾಜ್ಯ | ಕಳೆದ ವರ್ಷ ಭಾರತದಲ್ಲಿ 3.2 ಮಿಲಿಯನ್ ಟನ್ ಇ-ತ್ಯಾಜ್ಯ ಉತ್ಪಾದನೆ | ಇ ತ್ಯಾಜ್ಯದಲ್ಲಿ ಜಾಗತಿಕವಾಗಿ ಭಾರತಕ್ಕೆ ಮೂರನೇ ಸ್ಥಾನ…! |

Advertisement
Advertisement
Advertisement

ಭಾರತದಲ್ಲಿ ಇದೀಗ ಇ ತ್ಯಾಜ್ಯ ಉತ್ಪಾದನೆ ಹೆಚ್ಚಾಗುತ್ತಿದೆ. ಕಳೆದ ವರ್ಷ ಭಾರತದಲ್ಲಿ 3.2 ಮಿಲಿಯನ್ ಟನ್ ಇ-ತ್ಯಾಜ್ಯವನ್ನು ಉತ್ಪಾದಿಸಿದೆ. ಕಳೆದ ವರ್ಷ ಭಾರತವು 3.2 ಮಿಲಿಯನ್ ಟನ್ ಇ-ತ್ಯಾಜ್ಯವನ್ನು ಉತ್ಪಾದಿಸಿ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ಇದೀಗ ಈ ತ್ಯಾಜ್ಯ ಉತ್ಪಾದನೆಯೇ ತಲೆನೋವಿನ ಸಮಸ್ಯೆಯಾಗಲಿದೆ.

Advertisement

ಕಳೆದ ಎರಡು ವರ್ಷಗಳಲ್ಲಿ ಇ ತ್ಯಾಜ್ಯ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಲಾಕ್‌ಡೌನ್ ಸಮಯದಲ್ಲಿ ಅನೇಕ ಜನರು ಸಾಮಾನ್ಯಕ್ಕಿಂತ ಹೆಚ್ಚು ತಂತ್ರಜ್ಞಾನವನ್ನು ಅವಲಂಬಿಸಿರುವುದರಿಂದ ಕಳೆದ ವರ್ಷ ಇ-ತ್ಯಾಜ್ಯ ಉತ್ಪಾದನೆಯು ಹೆಚ್ಚಾಗಿದೆ ಎಂದು ಅಧ್ಯಯನಗಳು ಹೇಳಿದೆ. ಅಭಿವೃದ್ಧಿ, ತಂತ್ರಜ್ಞಾನಗಳ ಬಳಕೆ ಈಗ ಹೆಚ್ಚಾಗುತ್ತಿರುವುದು ಇವುಗಳ ನಿಯಂತ್ರಣದ ಬಗ್ಗೆ ಈಗ ಹೆಚ್ಚಿನ ಅಧ್ಯಯನಗಳು ಆರಂಭವಾಗುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ  ಈ ಬಗ್ಗೆ ಈಗಲೇ ಕ್ರಮ ಅಗತ್ಯ ಎಂಬುದನ್ನು ಕೂಡಾ ಎಚ್ಚರಿಸಲಾಗಿದೆ.

Advertisement

ಸ್ವೀಡಿಷ್ ಸೊಸೈಟಿ ಫಾರ್ ನೇಚರ್ ಕನ್ಸರ್ವೇಶನ್ ಪ್ರಾಯೋಜಿಸಿದ ಮತ್ತು ಅಡ್ವೊಕಸಿ ಗ್ರೂಪ್ ಕನ್ಸ್ಯೂಮರ್ ಯೂನಿಟಿ & ಟ್ರಸ್ಟ್ ಸೊಸೈಟಿ  ನಡೆಸಿದ ಅಧ್ಯಯನವು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಹಾಗೂ ತಂತ್ರಜ್ಞಾನಗಳ ಬಳಕೆಯ ಬಗ್ಗೆ ಪರಿಶೀಲಿಸಿದೆ. ಈಗಿನ ಸನ್ನಿವೇಶದಲಿ ಇ ತ್ಯಾಜ್ಯ ಕಡಿಮೆ ಮಾಡಲು ಸರ್ಕಾರವು ಕೆಲವು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳದ ಹೊರತು 2030 ರ ವೇಳೆಗೆ ಭಾರತವು ಪರಿಸರಕ್ಕೆ ಸಂಬಂಧಿಸಿದ ಪ್ರಮುಖ ಗುರಿಯನ್ನು ತಲುಪಲು ಸಾಧ್ಯವಿಲ್ಲ ಎಂದು ಎಚ್ಚರಿಸಿದೆ. 2030 ರ ವೇಳೆಗೆ ಭಾರತವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕೆ ಪರಿಸರದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಭಾರತವು ಹಸಿರು ಮೂಲಸೌಕರ್ಯ ರಚಿಸಬೇಕು ಎಂದು ಸಲಹೆ ನೀಡಿದೆ.

 

Advertisement
Advertisement

 

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಭಾರತದಲ್ಲಿ ಹೆಚ್ಚಾಗುತ್ತಿರುವ ಇ ತ್ಯಾಜ್ಯ | ಕಳೆದ ವರ್ಷ ಭಾರತದಲ್ಲಿ 3.2 ಮಿಲಿಯನ್ ಟನ್ ಇ-ತ್ಯಾಜ್ಯ ಉತ್ಪಾದನೆ | ಇ ತ್ಯಾಜ್ಯದಲ್ಲಿ ಜಾಗತಿಕವಾಗಿ ಭಾರತಕ್ಕೆ ಮೂರನೇ ಸ್ಥಾನ…! |"

Leave a comment

Your email address will not be published.


*