ಸುಳ್ಯ ತಾಲೂಕು ಹಾಗೂ ಕೊಡುಗು-ಸಂಪಾಜೆಯಲ್ಲಿ ಗುರುವಾರ ತಡರಾತ್ರಿ ಸುಮಾರು 1.15 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಸುಳ್ಯ ತಾಲೂಕಿನ ವಿವಿದೆಡೆ ಭೂಮಿ ಕಂಪನದ ಅನುಭವ ಹಲವರಿಗೆ ಆಗಿದೆ. ಚೆಂಬು, ಸಂಪಾಜೆಯಲ್ಲೂ ಈ ಅನುಭವವಾಗಿದ್ದು ಎರಡು ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವಾಗಿದೆ ಎಂದು ಹಲವರು ಹೇಳಿದ್ದಾರೆ. ಭೂಕಂಪನದ ನಂತರ ಪಶ್ಚಾತ್ ಕಂಪನ ಇರುತ್ತದೆ. ಆದರೆ ಈಗ ಜನರು ಭಯಗೊಳ್ಳುವಂತಾಗಿದೆ.
ಜೂ.25 ರಂದು ಮೊದಲ ಬಾರಿಗೆ ಬೆಳಗ್ಗೆ 9.10-9.15 ಸುಮಾರಿಗೆ ಭೂಮಿ ಕಂಪಿಸಿತ್ತು, ಆ ಸಮಯದಲ್ಲಿ 2.3 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು, ಅದಾದ ನಂತರ ಜೂ.28 ರಂದು ಎರಡನೇ ಬಾರಿ ಬೆಳಗ್ಗೆ ಭೂಮಿ ಕಂಪಿಸಿದಾಗ 3 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು, ಸಂಜೆ 1.8 ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಅದಾದ ಬಳಿಕ ಸಂಪಾಜೆ ಪ್ರದೇಶದಲ್ಲಿಯೇ ರಿಕ್ಟರ್ ಮಾಪಕ ಇಡಲಾಗಿದೆ. ಇದೀಗ ಜೂ.30 ತಡರಾತ್ರಿ ಮತ್ತೊಮ್ಮೆ ಭೂಮಿ ಕಂಪನವಾಗಿದೆ. ಭೂಕಂಪನದ ನಂತರ ಪಶ್ಚಾತ್ ಕಂಪನ ಇರುತ್ತದೆ. ಆದರೆ ಈಗ ಜನರು ಭಯಗೊಳ್ಳುವಂತಾಗಿದೆ.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.