Advertisement
ಸುದ್ದಿಗಳು

ಸುಳ್ಯ | ಭೂಕಂಪನದ ತೀವ್ರತೆ 1.8 ? |

Share

ಸುಳ್ಯ ತಾಲೂಕು ಹಾಗೂ ಕೊಡಗು-ಸಂಪಾಜೆಯಲ್ಲಿ ಗುರುವಾರ ತಡರಾತ್ರಿ ಸುಮಾರು 1.19 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು‌ ಇದರ ತೀವ್ರತೆ 3.0 ಇತ್ತು ಎಂದು ಖಾಸಗಿ ಸಂಸ್ಥೆಯೊಂದು ಮಾಹಿತಿ ನೀಡಿದೆ.ಆದರೆ 1.8 ರಷ್ಟು ತೀವ್ರತೆ ದಾಖಲಾಗಿದೆ ಎಂದು KSNDM ಮಾಹಿತಿ ನೀಡಿದೆ.ಸಂಪಾಜೆ, ಕಲ್ಲುಗುಂಡಿ , ಚೆಂಬು ಪ್ರದೇಶ ಕೇಂದ್ರಿತವಾಗಿದೆ. ಭೂಮಿಯ 10 ಕಿಮೀ ತಳಭಾಗದಲ್ಲಿ ಕಂಪನವಾಗಿದೆ ಎಂದು ಅದು ವರದಿ ಮಾಡಿದೆ.1.15 ಸೆಕೆಂಡ್ ಕಾಲ ಭೂಮಿ‌ ಕಂಪಿಸಿದೆ ಎಂದು ವರದಿ ಮಾಡಿದೆ.

ಜೂ.25 ರಂದು ಮೊದಲ ಬಾರಿಗೆ ಬೆಳಗ್ಗೆ 9.10-9.15 ಸುಮಾರಿಗೆ  ಭೂಮಿ ಕಂಪಿಸಿತ್ತು, ಆ ಸಮಯದಲ್ಲಿ 2.3 ತೀವ್ರತೆ ರಿಕ್ಟರ್‌ ಮಾಪಕದಲ್ಲಿ ದಾಖಲಾಗಿತ್ತು,  ಅದಾದ ನಂತರ ಜೂ.28 ರಂದು ಎರಡನೇ ಬಾರಿ ಬೆಳಗ್ಗೆ ಭೂಮಿ ಕಂಪಿಸಿದಾಗ 3 ತೀವ್ರತೆ ರಿಕ್ಟರ್‌ ಮಾಪಕದಲ್ಲಿ ದಾಖಲಾಗಿತ್ತು, ಸಂಜೆ 1.8  ತೀವ್ರತೆ ರಿಕ್ಟರ್‌ ಮಾಪಕದಲ್ಲಿ ದಾಖಲಾಗಿತ್ತು.  ಅದಾದ ಬಳಿಕ ಸಂಪಾಜೆ ಪ್ರದೇಶದಲ್ಲಿಯೇ ರಿಕ್ಟರ್‌ ಮಾಪಕ ಇಡಲಾಗಿದೆ. ಇದೀಗ ಜೂ.30 ತಡರಾತ್ರಿ ಮತ್ತೊಮ್ಮೆ ಭೂಮಿ ಕಂಪನವಾಗಿದೆ. ಭೂಕಂಪನದ ನಂತರ ಪಶ್ಚಾತ್‌ ಕಂಪನ ಇರುತ್ತದೆ. ಆದರೆ ಈಗ ಜನರು ಭಯಗೊಳ್ಳುವಂತಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೆಳಗಾವಿಯಲ್ಲಿ ಮಳೆ ಕೊರತೆಯ ಆತಂಕ ದೂರ ; ಜುಲೈ ಮಳೆಯಿಂದ ಕೃಷಿ ಚಟುವಟಿಕೆಗೆ ಚುರುಕು

ಜೂನ್‌ನಲ್ಲಿ ಶೇ.29ರಷ್ಟು ಮಳೆ ಕೊರತೆ ಎದುರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಜುಲೈನಲ್ಲಿ ಉತ್ತಮ ಮಳೆಯಾಗಿದ್ದು,…

7 hours ago

‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ನಕಲಿ ಸುದ್ದಿ : ಸಾರ್ವಜನಿಕರಿಗೆ ಕೇಂದ್ರ ಸಚಿವರಿಂದ ಮಾಹಿತಿ

ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ…

7 hours ago

ಆಗಸ್ಟ್ 28 ರೊಳಗೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ: ಸಚಿವ ಮಧು ಬಂಗಾರಪ್ಪ

ಸರ್ಕಾರಿ ಶಾಲೆಗಳಲ್ಲಿ ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 28ರೊಳಗೆ ಶೂ ಮತ್ತು ಸಾಕ್ಸ್…

7 hours ago

ರಾಜ್ಯಾದ್ಯಂತ ಆಹಾರ ಸುರಕ್ಷತೆ ಪರಿಶೀಲನೆಗೆ ದಾಳಿ ಮುಂದುವರಿಕೆ : ಉಲ್ಲಂಘನೆಗೆ ಕ್ಷಮೆಯಿಲ್ಲ ಎಂದ ಆರೋಗ್ಯ ಸಚಿವ

ರಾಜ್ಯಾದ್ಯಂತ ಪಿಜಿ, ಹಾಸ್ಟೆಲ್‌, ಕ್ಯಾಟರಿಂಗ್ ಹಾಗೂ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ತಪಾಸಣೆ ಮುಂದುವರಿಯಲಿದೆ…

7 hours ago

ಗೋ ಸಂರಕ್ಷಣೆಗೆ Gen Z – 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ – ಗ್ರಾಮೀಣ ಆರ್ಥಿಕತೆಗೆ ಹೊಸ ಮಾದರಿಯೇ?

ಉತ್ತರ ಪ್ರದೇಶದಲ್ಲಿ ಸುಮಾರು 10 ಸಾವಿರ ‘ಗೋ ಮಿತ್ರ’ರಿಗೆ ತರಬೇತಿ ನೀಡಿ ಗೋ…

18 hours ago

ಕಾಡು ಪ್ರಾಣಿಗಳ ಹಾವಳಿ: ಕೃಷಿಕರು ಪಾಠ ಕಲಿಯದಿದ್ದರೆ ಕೃಷಿ ಭೂಮಿಯೇ ಉಳಿಯದು

ದಕ್ಷಿಣ ಕನ್ನಡದಲ್ಲಿ ಕಾಡಾನೆಗಳ ಹಾವಳಿ ಕೃಷಿಕರ ಜೀವ ಮತ್ತು ಕೃಷಿಭೂಮಿಗೆ ಗಂಭೀರ ಅಪಾಯವಾಗುತ್ತಿರುವ…

18 hours ago