ಸುಳ್ಯ ತಾಲೂಕಿನ ವಿವಿದೆಡೆ ಜೂ.30 ತಡರಾತ್ರಿ ಭೂಕಂಪನದ ಬಳಿಕ ಇದೀಗ ಮತ್ತೆ 10.45 ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದೆ ಎಂದು ಜನತೆ ಹೇಳಿದ್ದಾರೆ. ಸುಳ್ಯ ತಾಲೂಕಿನ ಉಬರಡ್ಕ, ಚೆಂಬು, ಗೂನಡ್ಕದಲ್ಲಿ ಭೂಮಿ ಕಂಪನದ ಅನುಭವವಾಗಿದೆ ಎಂದು ಜನರು ಹೇಳಿದ್ದಾರೆ. ಬೆಳಗಿನ ಭೂಕಂಪನವು 2.1 ರಷ್ಟು ತೀವ್ರತೆ ಇತ್ತು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಮತ್ತೆ ಮತ್ತೆ ಭೂಕಂಪನಕ್ಕೆ ಕಾರಣ ಏನು ಹಾಗೂ ಏಕೆ ಕಂಪನವಾಗುತ್ತಿದೆ. ಇದುವರೆಗೆ ಒಟ್ಟು 5 ನೇ ಬಾರಿ ಭೂಮಿ ಕಂಪನವಾಗಿದೆ. ಇದು ಏಕೆ ಎಂಬುದು ಈಗ ಜನರ ಪ್ರಶ್ನೆಯಾಗಿದೆ.
ಜೂ.30 ತಡರಾತ್ರಿ 1.15 ಕ್ಕೆ ಭೂಕಂಪನದ ತೀವ್ರತೆ 2.5 ಮ್ಯಾಗ್ನಿಟ್ಯೂಡ್ ಇತ್ತು ಎಂದು ಕೇಂದ್ರ ಸರ್ಕಾರದ ಭೂಗರ್ಭ ಇಲಾಖೆ ಅಧಿಕೃತವಾಗಿ ತಿಳಿಸಿದೆ. ಬೆಳಗಿನ ಭೂಕಂಪನವು 2.1 ರಷ್ಟು ತೀವ್ರತೆ ಇತ್ತು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಇಲಾಖೆಯ ಚೆಂಬು ಪ್ರದೇಶದಲ್ಲಿ ಭೂಕಂಪನವನ್ನು ತಿಳಿಯುವ ಸಾಧನವನ್ನು ಇರಿಸಿದೆ. ಕಳೆದ 24 ಗಂಟೆಯಲ್ಲಿ 32 ಬಾರಿ ಲಘುಪ್ರಮಾಣದಲ್ಲಿ ಭೂಮಿ ಕಂಪಿಸಿದೆಯೇ ಎನ್ನುವ ಪ್ರಶ್ನೆ ಇದೆ. ಆದರೆ 2 ಬಾರಿ ಮಾತ್ರಾ ಅನುಭವವಾಗಿದೆಯೇ ? ಈ ಬಗ್ಗೆ ಅಧಿಕೃತವಾಗಿ ಇಲಾಖೆಗಳು ಸ್ಪಷ್ಟಪಡಿಸಬೇಕಿದೆ. ಸಂಪಾಜೆ, ಚೆಂಬು ಸೇರಿದಂತೆ ಆಸುಪಾಸಿನ ಪ್ರದೇಶದ ಈ ಕಂಪನಗಳು ಜನರನ್ನು ಆತಂಕಕ್ಕೀಡು ಮಾಡಿದೆ.
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…