ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಆಕಾಶ ದೀಪಗಳು ಹಾಗೂ ಗೂಡು ದೀಪಗಳ ಖರೀದಿ ಚುರುಕುಗೊಂಡಿದೆ. ಈ ನಡುವೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಿವರಾಮ ಕೊರಂಟೈನ್ ಬೀದಿಯ ನಿವಾಸಿ ನರಹರಿ ಶೆಣೈ ಅವರು ತಯಾರಿಸುವ ಪರಿಸರ ಸ್ನೇಹಿ ಸಾಂಪ್ರದಾಯಿಕ ಗೂಡು ದೀಪಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ.
ಕಳೆದ 45 ವರ್ಷಗಳಿಂದ ನರಹರಿ ಶೆಣೈ ಅವರು ಬಿದಿರಿನ ಕಡ್ಡಿ, ದಾರ, ಅಂಟು ಹಾಗೂ ಬಣ್ಣಬಣ್ಣದ ಕಾಗದಗಳನ್ನು ಬಳಸಿ ಕೈಯಿಂದಲೇ ವಿವಿಧ ವಿನ್ಯಾಸದ ಗೂಡು ದೀಪಗಳನ್ನು ತಯಾರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕಾಲಕ್ಕೆ ತಕ್ಕಂತೆ ಹೊಸ ಹೊಸ ವಿನ್ಯಾಸಗಳು ಬಂದಿದ್ದರೂ, ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸುವ ಇವರ ಗೂಡು ದೀಪಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದಲೂ ಇವರ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿದೆ.
“ದೇಶಕ್ಕೆ ಸೇವೆ ಸಲ್ಲಿಸುವ ಉದ್ದೇಶದಿಂದ 18ನೇ ವಯಸ್ಸಿನಿಂದಲೇ ಸಾಂಪ್ರದಾಯಿಕ ಗೂಡು ದೀಪಗಳನ್ನು ತಯಾರಿಸುತ್ತಿದ್ದೇನೆ. ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸುವುದರಿಂದ ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗುತ್ತದೆ. ಯುವಜನತೆಯೂ ಈ ಕಲೆಯನ್ನು ಕಲಿತು ಮುಂದುವರಿಸಬೇಕು” ಎಂದು ನರಹರಿ ಶೆಣೈ ಹೇಳುತ್ತಾರೆ.
ಅವರ ಪುತ್ರ ವಿಘ್ನೇಶ್ ಬಹಳ ಉತ್ತಮವಾಗಿ ತನ್ನ ಚಿಂತನೆಯನ್ನು ಮುಂದಿಡುತ್ತಾರೆ, “ತಂದೆಯವರು ತಯಾರಿಸುವ ಗೂಡು ದೀಪಗಳು ನೈಸರ್ಗಿಕ ಹಾಗೂ ಸಾಂಪ್ರದಾಯಿಕ ವಸ್ತುಗಳಿಂದ ಕೂಡಿವೆ. ಇವು ಶೇಕಡಾ 100ರಷ್ಟು ಪ್ಲಾಸ್ಟಿಕ್ ಮುಕ್ತವಾಗಿವೆ. ಅವರ ಈ ಪ್ರಯತ್ನಕ್ಕೆ ಕುಟುಂಬದ ಎಲ್ಲರೂ ಬೆಂಬಲ ನೀಡುತ್ತಿದ್ದೇವೆ” ಎಂದರು.
ಹಬ್ಬದ ಸಂಭ್ರಮದ ನಡುವೆ ಪರಿಸರ ಕಾಳಜಿಯನ್ನೂ ಮೆರೆಯುವ ಇಂತಹ ಕೈಮಗ್ಗದ ಕಲಾಕೃತಿಗಳು ಸಾಂಪ್ರದಾಯಿಕ ಕೌಶಲ್ಯವನ್ನು ಉಳಿಸುವುದರ ಜೊತೆಗೆ ಪರಿಸರ ಸ್ನೇಹಿ ಹಬ್ಬದ ಆಚರಣೆಗೆ ಪ್ರೇರಣೆ ನೀಡುತ್ತಿವೆ.
As Deepavali approaches, demand for colourful sky lanterns and traditional lanterns is increasing. Narahari Shenoy of Saligrama in Udupi district has been making eco-friendly traditional lanterns by hand for 45 years, using bamboo sticks, thread, adhesive and coloured paper. His plastic-free products attract customers from across Karnataka, including Bengaluru. He hopes that younger generations will learn and preserve this traditional craft.
ಹೈನುಗಾರರ ನಷ್ಟ ತಡೆಯಲು ಮತ್ತು ಉತ್ಪಾದನೆ ಹಾಗೂ ಸಾಗಾಣಿಕೆ ವೆಚ್ಚದ ಏರಿಕೆಯನ್ನು ಸರಿದೂಗಿಸಲು…
ದೀಪಾವಳಿ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಮತ್ತು…
ಅಂಗಾಂಶ ಕೃಷಿ ಅಡಿಕೆ ಗಿಡಗಳ ಬೇರುಗಳ ಬೆಳವಣಿಗೆ ಮತ್ತು ಬದುಕುಳಿಯುವಿಕೆಯನ್ನು ಹೆಚ್ಚಿಸುವ ಮಾರ್ಪಡಿಸಿದ…
ನವೆಂಬರ್ 1ರಿಂದ ಕರ್ನಾಟಕದ ಕರಾವಳಿ, ಮಲೆನಾಡು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು…
ಮಣ್ಣಿನ ಫಲವತ್ತತೆ ಮತ್ತು ಮಾನವ ಆರೋಗ್ಯ ಕಾಪಾಡಲು ರೈತರು ಸಾವಯವ ಕೃಷಿಗೆ ಆದ್ಯತೆ…
ಎತ್ತರದ ಅಡಿಕೆ ತೋಟಗಳಲ್ಲಿ ಡ್ರೋನ್ ಮೂಲಕ ಔಷಧ ಸಿಂಪಡಿಸಲು ಐಸಿಎಆರ್–ಸಿಪಿಸಿಆರ್‌ಐ ವಿಜ್ಞಾನಿಗಳು ವೈಜ್ಞಾನಿಕ…