ಕಾಸರಗೋಡು ಸೇರಿದಂತೆ ಕರ್ನಾಟಕದಾದ್ಯಂತ ನವೆಂಬರ್ 21ರಂದು ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಆದರೆ ನಾಳೆ ಮುಂಜಾನೆಯಿಂದಲೇ ರಾಜ್ಯದಾದ್ಯಂತ ಚಳಿಯ ಪ್ರಮಾಣ ನಿಧಾನವಾಗಿ ಕಡಿಮೆಯಾಗುವ ಸೂಚನೆಗಳಿವೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿದ್ದ ಅಕ್ವಾನ್ ಚಂಡಮಾರುತ ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಹಿಂಗಾರು ಮಾರುತಗಳು ಮತ್ತೆ ಪ್ರಭಲಗೊಳ್ಳುವ ಸಾಧ್ಯತೆಯಿದ್ದು, ರಾಜ್ಯದಲ್ಲಿ ಮಳೆಯ ವಾತಾವರಣ ನಿರ್ಮಾಣವಾಗುವ ನಿರೀಕ್ಷೆಯಿದೆ.
ಒಡಿಸ್ಸಾ ಕರಾವಳಿಯಲ್ಲಿ ಅಕ್ವಾನ್ ದುರ್ಬಲ : ಅಕ್ವಾನ್ ಚಂಡಮಾರುತವು ನಿರೀಕ್ಷೆಯಂತೆ ಒಡಿಸ್ಸಾದ ಪುರಿ ಮತ್ತು ಬ್ರಹ್ಮಪುರ ಕರಾವಳಿ ಭಾಗದಲ್ಲಿ ದುರ್ಬಲಗೊಂಡು ಭೂ ಪ್ರವೇಶಿಸಿದೆ. ಮುಂದಿನ ಎರಡು ದಿನಗಳಲ್ಲಿ ಈ ಹವಾಮಾನ ವ್ಯವಸ್ಥೆ ಸಂಪೂರ್ಣವಾಗಿ ಶಿಥಿಲಗೊಳ್ಳುವ ಸಾಧ್ಯತೆಯಿದೆ.
ಇದರ ಪರಿಣಾಮವಾಗಿ ಉತ್ತರ ಭಾರತದಿಂದ ದಕ್ಷಿಣದತ್ತ ಬೀಸುತ್ತಿರುವ ಶೀತ ಗಾಳಿಯ ಪ್ರಭಾವ ಕಡಿಮೆಯಾಗಿ, ಬಂಗಾಳಕೊಲ್ಲಿಯ ಹಿಂಗಾರು ಮಾರುತಗಳು ಪ್ರಬಲಗೊಳ್ಳುವ ಸೂಚನೆಗಳಿವೆ. ಇದರಿಂದ ಕರ್ನಾಟಕದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗುವುದರ ಜೊತೆಗೆ ಮಳೆಯ ವಾತಾವರಣವೂ ನಿರ್ಮಾಣವಾಗಬಹುದು.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ನ.23ರಿಂದ ದಕ್ಷಿಣ ಒಳನಾಡು, ಮಲೆನಾಡಿನಲ್ಲಿ ಮಳೆ : ಸದ್ಯದ ಮುನ್ಸೂಚನೆಯ ಪ್ರಕಾರ, ನವೆಂಬರ್ 23ರಿಂದ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆ ಆರಂಭವಾಗುವ ಸಾಧ್ಯತೆಯಿದೆ. ನವೆಂಬರ್ 24ರಿಂದ ಕರಾವಳಿ ಜಿಲ್ಲೆಗಳಲ್ಲಿಯೂ ಮಳೆಯ ಲಕ್ಷಣಗಳಿವೆ.
ಈ ಮಳೆಯು ನವೆಂಬರ್ 27ರವರೆಗೆ ಮುಂದುವರಿಯುವ ಸಾಧ್ಯತೆಗಳಿವೆ. ಮಳೆಯ ಪ್ರಮಾಣ ಮತ್ತು ವ್ಯಾಪ್ತಿ ಜಿಲ್ಲೆಯಿಂದ ಜಿಲ್ಲೆಗೆ ಬದಲಾಗಬಹುದು. ಆದ್ದರಿಂದ ರೈತರು ಸ್ಥಳೀಯ ಹವಾಮಾನ ಮುನ್ಸೂಚನೆಯನ್ನು ಗಮನಿಸುವುದು ಅಗತ್ಯ.
ಮಳೆಯ ಬಳಿಕ ಚಳಿ ಮರಳಲು ಸಮಯ ಬೇಕಾಗಬಹುದು : ಮಳೆಯ ಪರಿಣಾಮದಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ರಾತ್ರಿ ಮತ್ತು ಬೆಳಗಿನ ಚಳಿಯ ಪ್ರಮಾಣ ಕಡಿಮೆಯಾಗಬಹುದು. ಮಳೆಯ ನಂತರ ಮತ್ತೆ ಚಳಿ ಆರಂಭವಾಗಲು ಕೆಲವು ದಿನಗಳು ಬೇಕಾಗಬಹುದು.
ನವೆಂಬರ್ ಕೊನೆಯಲ್ಲಿ ಮತ್ತೊಂದು ವಾಯುಭಾರ ಕುಸಿತದ ಸಾಧ್ಯತೆ : ನವೆಂಬರ್ 25ರ ನಂತರ ಬಂಗಾಳಕೊಲ್ಲಿಯ ಉತ್ತರ ಸುಮಾತ್ರ ಕರಾವಳಿ ಭಾಗದಲ್ಲಿ ಮತ್ತೊಂದು ವಾಯುಭಾರ ಕುಸಿತ ರೂಪುಗೊಳ್ಳುವ ಲಕ್ಷಣಗಳಿವೆ. ಈ ವ್ಯವಸ್ಥೆ ನವೆಂಬರ್ ಕೊನೆಯ ಭಾಗದಲ್ಲಿ ದಕ್ಷಿಣ ಶ್ರೀಲಂಕಾ ಕರಾವಳಿಯನ್ನು ದಾಟಿ ಅರಬ್ಬಿ ಸಮುದ್ರ ಪ್ರವೇಶಿಸುವ ಸಾಧ್ಯತೆಯಿದೆ. ಈ ಬೆಳವಣಿಗೆ ಇನ್ನೂ ಮುನ್ಸೂಚನೆಯ ಹಂತದಲ್ಲಿದ್ದು, ಅದರ ಚಲನೆಯ ಹಾದಿ ಮತ್ತು ತೀವ್ರತೆ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ. ಇದು ಕರ್ನಾಟಕದ ಹವಾಮಾನದ ಮೇಲೂ ಪರಿಣಾಮ ಬೀರಬಹುದಾದ್ದರಿಂದ ಮುಂದಿನ ಬೆಳವಣಿಗೆಗಳನ್ನು ಗಮನಿಸಬೇಕಿದೆ.
ರೈತರು ಗಮನಿಸಬೇಕಾದ ಅಂಶ : ನವೆಂಬರ್ 23ರಿಂದ ಮಳೆಯ ಸಾಧ್ಯತೆ ಇರುವುದರಿಂದ ಸ್ಥಳೀಯ ಮಳೆ ಮುನ್ಸೂಚನೆಗೆ ಅನುಗುಣವಾಗಿ ಯೋಜಿಸುವುದು ಸೂಕ್ತ.
ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ…
ನವೆಂಬರ್ 20ರಂದು ಕರ್ನಾಟಕದಾದ್ಯಂತ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಅಕ್ವಾನ್ ಚಂಡಮಾರುತ ಶಿಥಿಲಗೊಂಡ…
ದೆಹಲಿಯ ಯಮುನಾ ನದಿಯಲ್ಲಿ ನಡೆಸಿದ ಅಧ್ಯಯನದಲ್ಲಿ 2,289 ಮೈಕ್ರೋಪ್ಲಾಸ್ಟಿಕ್ ಕಣಗಳು ಮತ್ತು 321…
ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಭಾರತದ ವಿವಿಧ ರಾಜ್ಯಗಳಿಗೆ ಅಡಿಕೆ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು…
ಅಕ್ವಾನ್ ಚಂಡಮಾರುತವು ನವೆಂಬರ್ 20ರಂದು ಒಡಿಸ್ಸಾ ಕರಾವಳಿಯಲ್ಲಿ ದುರ್ಬಲವಾಗಿ ಭೂ ಪ್ರವೇಶಿಸುವ ಸಾಧ್ಯತೆಯಿದೆ.…
ನವೆಂಬರ್ ಮೊದಲ ವಾರದಲ್ಲಿ ₹300ರ ಗಡಿ ದಾಟಿದ್ದ ನೈಸರ್ಗಿಕ ರಬ್ಬರ್ ಧಾರಣೆ ಇದೀಗ…