ಕಳೆದ ಕೆಲವು ಸಮಯಗಳಿಂದ ಭಾರತ-ಮ್ಯಾನ್ಮಾರ್ ಗಡಿಯ ಮೂಲಕ ಅಕ್ರಮವಾಗಿ ವಿದೇಶಿ ಅಡಿಕೆ ಆಮದು ನಡೆಯುತ್ತಿತ್ತು. ಹಲವು ಬಾರಿ ಭಾರೀ ಪ್ರಮಾಣದ ಅಡಿಕೆ ವಶಕ್ಕೆ ತೆಗೆದುಕೊಂಡ ಅಧಿಕಾರಿಗಳು ಮೂಲ ಪತ್ತೆ ಮಾಡುತ್ತಿದ್ದರು. ಇದೀಗ ನಾಗಪುರ ಮೂಲದ ವ್ಯಾಪಾರಿಯೊಬ್ಬನನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿದೆ.
ಭಾರತ-ಮ್ಯಾನ್ಮಾರ್ ಗಡಿಯ ಮೂಲಕ ಬೇರೆ ದೇಶಗಳಿಂದ ಅಕ್ರಮವಾಗಿ ಅಡಿಕೆ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ನಾಗಪುರ ಮೂಲದ ವ್ಯಾಪಾರಿ ವಾಸಿಂ ಬಾವ್ಲಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಅವರನ್ನು ಮುಂಬೈನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೂನ್ 30 ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ. ಇದೀಗ ವಾರ್ಷಿಕವಾಗಿ ಸರ್ಕಾರದ ಬೊಕ್ಕಸಕ್ಕೆ 15,000 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ ಆರೋಪದ ಮೇಲೆ ನಾಗ್ಪುರ ಮತ್ತು ಮುಂಬೈ ಸೇರಿದಂತೆ ಇತರ ಪ್ರದೇಶಗಳಲ್ಲಿನ ಅಡಿಕೆ ವ್ಯಾಪಾರಿಗಳ ಮೇಲೆ ಇಡಿ(ED) ತನಿಖೆ ನಡೆಸುತ್ತಿದೆ.
ಭಾರತ, ಇಂಡೋನೇಷ್ಯಾ ಮತ್ತು ಸಾರ್ಕ್ ದೇಶಗಳಲ್ಲಿ ನೋಂದಾಯಿಸಲಾದ ನಕಲಿ ದಾಖಲೆಗಳ ಮೂಲಕ ಅಕ್ರಮವಾಗಿ ಅಡಿಕೆಯನ್ನು ಆಮದು ಮಾಡಲಾಗುತ್ತಿತ್ತು. ಇದರ ಜೊತೆಗೆ ಮ್ಯಾನ್ಮಾರ್ ಮೂಲಕವೂ ಸತತವಾಗಿ ವಿವಿಧ ಮಾರ್ಗಗಳಲ್ಲಿ ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿತ್ತು.
ಭಾರತದ ಈಶಾನ್ಯ ರಾಜ್ಯಗಳಾದ ಮಿಜೋರಾಂ ಮತ್ತು ಮಣಿಪುರ, ತ್ರಿಪುರಾ ಮೂಲಕ ಅಲ್ಲಿನ ಅಡಿಕೆಯ ಜೊತೆ ಸೇರಿಸಿಕೊಂಡು ಮಹಾರಾಷ್ಟ್ರಕ್ಕೆ ಲಾರಿ, ರೈಲು ಮೂಲಕ ತರಲಾಗುತ್ತಿತ್ತು. ಕಳೆದ ವರ್ಷ, ಸಿಬಿಐನ ನಾಗ್ಪುರ ಘಟಕವು ಸಲ್ಲಿಸಿದ ಎಫ್‌ಐಆರ್ ಆಧರಿಸಿ ಇಡಿ(ED) ಹಣ ವರ್ಗಾವಣೆಯ ತನಿಖೆಯನ್ನು ಪ್ರಾರಂಭಿಸಿತ್ತು. ಇದೀಗ ಕಸ್ಟಮ್ಸ್ ಸುಂಕವನ್ನು ತಪ್ಪಿಸುವ ಮೂಲಕ ನಡೆಯುತ್ತಿರುವ ಈ ಪ್ರಕರಣದ ಮೇಲೆ ಇಡಿ ಯ ತನಿಖೆಯು ಕೇಂದ್ರೀಕೃತವಾಗಿದೆ.
ಈ ತನಿಖೆಯ ಸಂದರ್ಭ ಅಡಿಕೆ ಕಳ್ಳಸಾಗಾಣಿಕೆಗೆ ಸಹಕಾರ ನೀಡುವ ನೆಲೆಯಲ್ಲಿ ಅಸ್ಸಾಂನ ಕೆಲವು ಪಕ್ಷಗಳಿಗೆ ಗಣನೀಯ ಮೊತ್ತದ ಹಣವನ್ನು ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ. ನಂತರ ಅದನ್ನು ಅಡಿಕೆಯ ರೂಪದಲ್ಲಿ ವಿದೇಶಿ ಅಡಿಕೆ ಆಮದು ಮೂಲಕ ಭರ್ತಿ ಮಾಡಲಾಗಿದೆ ಎಂದೂ ತಿಳಿದುಬಂದಿದೆ. ಭಾರತ ತಲಪಿದ ಬಳಿಕ ನಕಲಿ ಬಿಲ್ ಮೂಲಕ ನಾಗಪುರಕ್ಕೆ ಅಡಿಕೆ ರವಾನೆಯಾಗುತ್ತಿತ್ತು.
ಮುಂಬಯಿಗೆ ಅಡಿಕೆ ತಲಪಿದ ಬಳಿಕ ಅಲ್ಲಿಂದ ಮಾರಾಟ ಮತ್ತು ಖರೀದಿಗೆ ಅನುಕೂಲವಾಗುವಂತೆ ನಕಲಿ ಇನ್‌ವಾಯ್ಸ್‌ಗಳನ್ನು ತಯಾರಿಸಲಾಗುತ್ತಿತ್ತು ಎಂದು ಇಡಿ ಪ್ರಾಥಮಿಕ ಮಾಹಿತಿ ನೀಡಿದೆ. ಬಂಧಿತ ಆರೋಪಿ ಆಗಾಗ್ಗೆ ಫೋನ್‌ಗಳನ್ನು ಬದಲಾಯಿಸುವ ಮೂಲಕ, ಸಮನ್ಸ್‌ಗಳನ್ನು ನಿರ್ಲಕ್ಷಿಸುವ ಮೂಲಕ ಇಡಿ ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದ. ಇದಕ್ಕೆ ಕೆಲವು ಪ್ರಮುಖ ರಾಜಕೀಯ ನಾಯಕರ ಕೈವಾಡವೂ ಇತ್ತು ಎಂದು ತಿಳಿದುಬಂದಿದೆ.
30.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಜೋಳ ಮಾರಾಟಕ್ಕೆ ರೈತರ ನೋಂದಣಿ ಕಾರ್ಯವನ್ನು ಶೀಘ್ರವೇ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೇ 30 ರಿಂದ ಡಿಸೆಂಬರ್ 3 ರವರೆಗೆ ಸಾಧಾರಣ…
ಬೆಂಗಳೂರಲ್ಲಿ ಕಳೆದ ಒಂದು ವಾರದಿಂದ ಮೈಕೊರೆವ ಚಳಿ ಶುರುವಾಗಿದೆ. ಮತ್ತೊಂದೆಡೆ ಚಂಡ ಮಾರುತದ…
29.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಡಿಎಪಿ ರಸಗೊಬ್ಬರಗಳ ತ್ವರಿತ ಪೂರೈಕೆ ಹಾಗೂ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು…