ಜಗತ್ತು ಬದಲಾಗಿದೆ.. ಚಂದ್ರ ಲೋಕ, ಸೂರ್ಯ ಲೋಕಕ್ಕೆ ವಿಜ್ಞಾನಿಗಳು ಕಾಲಿಟ್ಟಿದ್ದಾರೆ. ಈಗಂತೂ ಶಿಕ್ಷಣವೇ Education ಜಗತ್ತು. ಇಂಥ ಕಾಲದಲ್ಲೂ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರೆ ನಂಬುತ್ತೀರಾ..? ಹೌದು ನಂಬಲೇಬೇಕು.. ಇದಕ್ಕೆ ಕಾರಣ ಬಡತನ. ಶಿಕ್ಷಣ ಇಲ್ಲದ ಬಡ ತಂದೆ ತಾಯಿ. ಇಲ್ಲೋಬ್ಬ ಬಾಲಕ ತನ್ನ ತಂದೆ ತಾಯಿಯ ಅಸಾಯಕತೆಗೆ ಬಲಿಯಾಗಿ ಕುರಿ ಕಾಯಲು ಹೋಗಿ ಶಿಕ್ಷಣದಿಂದ ವಂಚಿತನಾಗಿದ್ದ. ಆದರೆ ಈಗ ಮರಳಿ ಶಾಲೆಗೆ ಹೋಗುತ್ತಿದ್ದಾನೆ.
ಶಾಲೆ ಬಿಟ್ಟು ಕುರಿ ಕಾಯುತ್ತಿದ್ದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಸಾಪುರ ಗ್ರಾಮದ ಶಿಕ್ಷಣ ವಂಚಿತ 11 ವರ್ಷದ ಬಾಲಕ ಯೋಗೇಶ್‌ನನ್ನು ಅಧಿಕಾರಿಗಳು ಮರಳಿ ಶಾಲೆಗೆ ಕರೆತಂದಿದ್ದಾರೆ. ಯೋಗೇಶ್‌ನ ಪೋಷಕರು ಬಡತನದ ಬೇಗೆಯಿಂದ ಬಳಲಿದ್ದು, ಕಳೆದ 2 ವರ್ಷಗಳಿಂದ ಯೋಗೇಶ್‌ನನ್ನು ಒತ್ತಾಯ ಪೂರ್ವಕವಾಗಿ ಶಾಲೆ ಬಿಡಿಸಿ ಕುರಿ ಕಾಯಲು ಕಳುಹಿಸುತ್ತಿದ್ದರು. ಇದನ್ನು ಗಮನಿಸಿದ ಚಳ್ಳಕೆರೆಯ ಮಹೇಂದ್ರ ಎಂಬುವವರು ಈ ಬಗ್ಗೆ ಟ್ವೀಟ್ (X) ಮಾಡಿ ಮುಖ್ಯಮಂತ್ರಿ ಕಚೇರಿಯ ಗಮನ ಸೆಳೆದಿದ್ದರು.
ಈ ಟ್ವೀಟ್(ಎಕ್ಸ್) ಮಾಡಿದ ಒಂದೇ ದಿನದಲ್ಲಿ ಬಾಲಕನನ್ನು ಪತ್ತೆ ಹಚ್ಚಿದ ಅಧಿಕಾರಿಗಳು, ಪೋಷಕರ ಮನವೊಲಿಸಿ ಮರಳಿ ಶಾಲೆಗೆ ಕರೆತಂದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್(ಎಕ್ಸ್) ಮಾಡಿದ್ದು, ಬಾಲ್ಯದಲ್ಲಿ ನಾನು ಸಹ ಶಿಕ್ಷಣದಿಂದ ವಂಚಿತನಾಗಿದ್ದೆ. ರಾಜಪ್ಪ ಎಂಬ ಮೇಷ್ಟ್ರು ನನಗೆ ಐದನೇ ತರಗತಿಗೆ ದಾಖಲಾತಿ ಮಾಡಿಸಿದ್ದರು ಎಂದು ಬರೆದುಕೊಂಡಿದ್ದಾರೆ.
ಅಂದು ನನಗೆ ಶಿಕ್ಷಣ ಸಿಕ್ಕಿದ್ದರಿಂದ ಇಂದು ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಗಿದೆ. ಮರಳಿ ಶಿಕ್ಷಣದತ್ತ ಮುಖಮಾಡಿದ ಬಾಲಕ ಯೋಗೇಶನ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದ್ದಾರೆ.
12.01.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಬರ ಪ್ರದೇಶ ಕೃಷಿಗೆ ಹೊಸ ದಾರಿ ತೆರೆದಿರುವ ICAR–ಒಂಟೆ ಸಂಶೋಧನಾ ಕೇಂದ್ರದ ಅಧ್ಯಯನವು,…
ರಾಜಸ್ಥಾನದ ಹನುಮಂಗಢ ಜಿಲ್ಲೆಯಲ್ಲಿ ಇಬ್ಬರು ಗ್ರಾಮೀಣ ಉದ್ಯಮಿಗಳು ಆರಂಭಿಸಿದ ಗ್ರೀನ್ ವಿಷನ್ ವರ್ಮಿಕಾಂಪೋಸ್ಟ್…
ಚೀನಾದ Chinese Academy of Tropical Agricultural Sciences (CATAS) ವಿಜ್ಞಾನಿಗಳು Electron…
ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…
ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…