ಮಳೆರಾಯ ಆಗಮನದೊಂದಿಗೆ ಸೊಳ್ಳೆ ಕಾಟನೂ ಶುರು | ಕೃಷಿ ಕೆಲಸ ಮಾಡೋರಿಗೆ ಒಂದಿಷ್ಟು ಸೊಳ್ಳೆ ಕಾಟಕ್ಕೆ ಪರಿಹಾರ |

June 4, 2024
10:25 AM
ಕೃಷಿ ಭೂಮಿಯಲ್ಲಿ ಮಳೆಗಾಲ ಸೊಳ್ಳೆಗಳನ್ನು ತಡೆಯಲು ಪರಿಣಾಮಕಾರಿ ತಂತ್ರಗಳು ಬೇಕಾಗಿದೆ . ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸರಳವಾದ ಆದರೆ ಪರಿಣಾಮಕಾರಿ ತಂತ್ರಗಳು ಬೇಕಾಗಿದೆ. ಈ ಬಗ್ಗೆ ಕೃಷಿಕ ಶ್ಯಾಮ ಸುಂದರ ಭಟ್‌ ಅವರು ನೀಡಿರುವ ಮಾಹಿತಿ ಇಲ್ಲಿದೆ....

ಮಳೆಗಾಲ(Rainy season) ಆರಂಭದಲ್ಲಿ ಕೃಷಿ(Agricultural) ಕೆಲಸ ಮಾಡುವವರಿಗೆ ಸೊಳ್ಳೆ(Mosquito) ಕಾಟ ವಿಪರೀತ. ಪಕ್ಕದಲ್ಲಿ ರಬ್ಬರ್(Rubber) ಇದ್ದರಂತೂ ಹೇಳುವುದೇ ಬೇಡ. ಶ್ರೀಮಂತರು ಓಡೋಮಸ್ ಮುಲಾಮನ್ನು ಮೈ ತುಂಬಾ ಹಚ್ಚಿಕೊಳ್ಳುತ್ತಾರೆ. ಬಡವರಿಗೆ ಇದು ಕಷ್ಟ. ಸೊಳ್ಳೆ ಬಾರದ ಹಾಗೆ ಮಾಡಲು ಕೆಲವು ಸುಲಭ ವಿಧಾನ ಇದೆ.

Advertisement
  1. 100 ml ಸೆಕೆಂಡ್ ಕ್ಲಾಸ್ ತೆಂಗಿನ ಎಣ್ಣೆ(Coconut Oil) ಯನ್ನು ಒಂದು ಬಾಟಲಿಯಲ್ಲಿ ಹಾಕಿ ಅದಕ್ಕೆ 10-15 ml ಡೀಸೆಲ್ ಮಿಶ್ರ ಮಾಡಿ. ಅದನ್ನು ಚೆನ್ನಾಗಿ ಮಿಶ್ರ ಮಾಡಿ ಕೈಕಾಲಿಗೆ ಹಚ್ಚಿ( ಮುಖಕ್ಕೆ ಬೇಡ ).
  2. ಕೆಲವರಿಗೆ ಡೀಸೆಲ್ ಅಲರ್ಜಿ ಆಗುತ್ತದೆ. ಅಂತವರು ಡೀಸೆಲ್ ಬದಲು ಎರಡು ಮೂರು ಕರ್ಪೂರದ ಬಿಲ್ಲೇ ಹಾಕಿ. ಈ ಮಿಶ್ರಣವನ್ನು ಮುಖಕ್ಕೆ ಸಹಾ ಹಚ್ಚಬಹುದು. ತಿಂಡಿ ಕರಿದು ಆದ ಮೇಲೆ ಉಳಿದ ತೆಂಗಿನ ಎಣ್ಣೆಯನ್ನು ಸಹಾ ಬಳಸಬಹುದು.
  3. ಬೇವಿನ ಎಣ್ಣೆ ಹಚ್ಚಿಕೊಂಡು ತೋಡಕ್ಕೆ ಇಳಿದರು ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಬಹುದು. ಆದರೆ ಬೇವಿನ ಎಣ್ಣೆಯ ವಾಸನೆ ತೊಳೆಯುವುದು ದೊಡ್ಡ ಕಿರಿಕಿರಿ.
  4. ಹಸಿ ಬೆಳ್ಳುಳ್ಳಿ ಮಿಸ್ರಿತ ತೆಂಗಿನ ಎಣ್ಣೆ ಲೇಪನ ಮಾಡಿದರೆ ಸೊಳ್ಳೆಗಳು ಹತ್ತಿರ ಬರುದಿಲ್ಲ.

ಕೆಲವರ ದೇಹದ ಪರಿಮಳಕ್ಕೆ ಸೊಳ್ಳೆಗಳು ಬರುವುದಿಲ್ಲ, ಕೆಲವರ ರಕ್ಷತದ ಮಾದರಿಗೆ ಸೊಳ್ಳೆಗಳು ಹತ್ತಿರ ಸುಳಿಯೋದಿಲ್ಲ. ಇನ್ನು ಕೆಲವರ ರಕ್ತಕ್ಕೆ ಸೊಳ್ಳೆಗಳು ಬಹುಬೇಗ ಹತ್ತಿರ ಬರುತ್ತವೆ. ಬೆಳಿಗ್ಗೆ ಹಚ್ಚಿದರೆ ಮಧ್ಯಾಹ್ನದವರೆಗೂ ಸೊಳ್ಳೆ ಕಡಿತ ಇರುವುದಿಲ್ಲ. ಮತ್ತೆ ಪುನಃ ಹಚ್ಚಬೇಕು. ಈ ಮದ್ದು ಹಳ್ಳಿಯಲ್ಲಿ ಸಾಮಾನ್ಯ ಎಲ್ಲರಿಗೂ ಗೊತ್ತಿರುತ್ತದೆ. ಗೊತ್ತಿಲ್ಲದವರಿಗೆ ಈ ಮಾಹಿತಿ.

ಬರಹ :
ಶಾಮ ಸುಂದರ ಭಟ್

Protecting Yourself from Mosquitoes in Agriculture: Simple Techniques for Rainy Season Safety

Protecting yourself from mosquitoes in agriculture during the rainy season is essential for maintaining health and productivity. Employing simple techniques such as wearing long-sleeved clothing, using mosquito repellent, and eliminating standing water around farming areas can significantly reduce mosquito bites and the risk of mosquito-borne diseases. Additionally, incorporating mosquito nets over work areas and ensuring proper drainage can further enhance safety and comfort while working in the fields.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ
April 16, 2025
8:40 PM
by: ದ ರೂರಲ್ ಮಿರರ್.ಕಾಂ
ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!
April 16, 2025
11:18 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |
April 16, 2025
10:50 AM
by: The Rural Mirror ಸುದ್ದಿಜಾಲ
ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |
April 16, 2025
8:14 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group