ಅಭಿವೃದ್ಧಿಗಾಗಿ ಹೋರಾಟ | ಸುಳ್ಯದಲ್ಲಿ ಇನ್ನೊಂದು ಹೋರಾಟ | ರಸ್ತೆ ದುರಸ್ತಿ ಆಗುವವರೆಗೆ ದುಗಲಡ್ಕದಲ್ಲಿ ಚುನಾವಣಾ ಬಹಿಷ್ಕಾರಕ್ಕೆ ನಿರ್ಧಾರ | ಇನ್ನೊಂದು ಕಡೆ ನೀವು ಬಿದ್ದ ಹೊಂಡಕ್ಕೆ ನೀವೇ ಜವಾಬ್ದಾರರು..!

February 27, 2023
9:43 PM

ಸುಳ್ಯದಲ್ಲಿ ಈಗ ಅಭಿವೃದ್ಧಿ ವಿಷಯ ಚರ್ಚೆಯಾಗಲು ಆರಂಭವಾಗಿದೆ. ರಸ್ತೆ, ಸೇತುವೆ, ನೆಟ್ವರ್ಕ್‌ ಈಗ ಪ್ರಮುಖವಾದ ವಿಷಯವಾಗಿದೆ. ಇದೀಗ ದುಗಲಡ್ಕದಲ್ಲಿ  ರಸ್ತೆ ಹೋರಾಟ ತೀವ್ರಗೊಂಡಿದೆ. ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ದುರಸ್ತಿ ಆಗುವವರೆಗೆ ಈ ರಸ್ತೆಯ ಫಲಾನುಭವಿಗಳು ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇದೇ ವೇಳೆ ಗುತ್ತಿಗಾರು ಬಳಿಯ ವಾಲ್ತಾಜೆಯಲ್ಲಿ “ನೀವು ಬಿದ್ದ ಹೊಂಡಕ್ಕೆ ನೀವೇ ಜವಾಬ್ದಾರಿ” ಎಂಬ ಬ್ಯಾನರ್‌ ಕಾಣಲು ಆರಂಭವಾಗಿದೆ.

Advertisement
Advertisement

ಸುಳ್ಯ ತಾಲೂಕು  ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆ ದುರಸ್ತಿ ಆಗುವವರೆಗೆ ಈ ರಸ್ತೆಯ ಫಲಾನುಭವಿಗಳು ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಕಮಿಲಡ್ಕದ ಅಗ್ನಿಮಿತ್ರ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಈ ಭಾಗದ ಜನರು ಈ ನಿರ್ಧಾರ ಕೈಗೊಂಡಿದ್ದಾರೆ. ಮನೆ ಮನೆಗೆ ಕರಪತ್ರ ಹಂಚಿ ರಸ್ತೆ ಸಮಗ್ರ ಅಭಿವೃದ್ಧಿಯಾಗುವವರೆಗೆ ಮತದಾನ ಬಹಿಷ್ಕಾರ ಮತ್ತು ರಸ್ತೆ ದುರಸ್ತಿಗೆ ನಗರ ಪಂಚಾಯತ್ ಎದುರು ಭಿಕ್ಷಾಟನೆಯೊಂದಿಗೆ ಪ್ರತಿಭಟನೆ ಮಾಡುವ ನಿರ್ಧಾರ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಈ ಹೋರಾಟ ಇದೆ, 25 ವರ್ಷಗಳಾದರೂ ಈ ರಸ್ತೆ ದುರಸ್ತಿ ಆಗಿರಲಿಲ್ಲ.

Advertisement

ಹೋರಾಟದ ಸಭೆಯಲ್ಲಿ ಉದ್ಯಮಿ ಸುರೇಶ್ಚಂದ್ರ ಕಮಿಲ, ಬಾಲಕೃಷ್ಣನ್ ನಾಯರ್ ನೀರಬಿದಿರೆ, ಮನೋಜ್ ಪಾನತ್ತಿಲ ಮತ್ತಿತರರು ಮಾತನಾಡಿ, ರಸ್ತೆ ದುರಸ್ತಿಯ  ಭರವಸೆ ಸಿಕ್ಕಿದೆಯೇ ಹೊರತು ರಸ್ತೆ ಅಭಿವೃದ್ಧಿ ಆಗುವ ಲಕ್ಷಣ ಕಾಣುತ್ತಿಲ್ಲ. ಈ ರಸ್ತೆಯ ವ್ಯಾಪ್ತಿಯಲ್ಲಿ ಸುಮಾರು 500 ಮನೆ ಬರುತ್ತದೆ. ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ರಸ್ತೆ ಆಗಿಲ್ಲ ಆದುದರಿಂದ ರಸ್ತೆಯ ಸಮಗ್ರ ಅಭಿವೃದ್ಧಿ ಆಗುವ ತನಕ ಮತದಾನ ಬಹಿಷ್ಕಾರ ಮಾಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು., ಹೋರಾಟಸ ಸಭೆಯಲ್ಲಿ ಹಲವಾರು ಮಂದಿ ಮಾತನಾಡಿದರು.

ನಿಮ್ಮ ಪ್ರತಿಕ್ರಿಯೆಗಳಿಗೆ :

Advertisement

ಇದೇ ವೇಳೆ ಗುತ್ತಿಗಾರು ಬಳಿಯ ವಾಲ್ತಾಜೆ ಕಂದ್ರಪ್ಪಾಡಿ ರಸ್ತೆಯಲ್ಲೂ “ನೀವು ಬಿದ್ದ ಹೊಂಡಕ್ಕೆ ನೀವೇ ಜವಾಬ್ದಾರಿ”  ಎಂಬ ಬ್ಯಾನರ್‌ ಕಂಡಿದೆ. ಈ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿದೆ, ರಸ್ತೆ ದುರಸ್ತಿಗಾಗಿ ಜನರು ಒತ್ತಾಯಿಸುತ್ತಲೇ ಇದ್ದಾರೆ. ಹೀಗಿದ್ದರೂ ರಸ್ತೆ ದುರಸ್ತಿ ಆಗಿರಲಿಲ್ಲ.

Advertisement

ಸುಳ್ಯದಲ್ಲಿ ಮೂಲಭೂತ ಸೌಕರ್ಯಕ್ಕೆ ಹೋರಾಟ ...!!
Advertisement

ಕಳೆದ ಕೆಲವು ಸಮಯಗಳಿಂದ ಅರಂತೋಡು ಎಲಿಮಲೆ ರಸ್ತೆ ದುರಸ್ತಿ ಹಾಗೂ ಅಗಲೀಕರಣಕ್ಕೆ ಒತ್ತಾಯ ಕೇಳಿಬಂದಿತ್ತು. ಇಲ್ಲೂ ಮತದಾನ ಬಹಿಷ್ಕಾರದ ಬ್ಯಾನರ್‌ ಹಾಕಲಾಗಿತ್ತು. ಕೊನೆಗ ಅನುದಾನ ಬಿಡುಗಡೆ, ಗುದ್ದಲಿ ಪೂಜೆ ನಡೆದು ಕಾಮಗಾರಿ ನಡೆಯುತ್ತಿದೆ. ಆದರೆ ಸಂಪೂರ್ಣ ರಸ್ತೆ ಅಗಲೀಕರಣಕ್ಕೆ ಜನರು ಒತ್ತಾಯಿಸಿದ್ದಾರೆ. ಈಗಲೂ ಮತದಾನ ಬಹಿಷ್ಕಾರದ ಬ್ಯಾನರ್‌ ಕಂಡುಬಂದಿದೆ.

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಎರಡು ವರ್ಷಗಳಿಂದ ಮೂಲಭೂತ ಸಮಸ್ಯೆಯ ಕೊರತೆಯ ಬಗ್ಗೆ ಹೋರಾಟಗಳು, ಪ್ರತಿಭಟನೆಗಳು ಕೇಳಿಬರುತ್ತಲೇ ಇದೆ.

Advertisement

ಆರಂಭದಲ್ಲಿ ಸುಳ್ಯದ ಗುತ್ತಿಗಾರಿನ ಮೊಗ್ರದಲ್ಲಿ ಶಾಲಾ ಮಕ್ಕಳ ಓಡಾಟಕ್ಕಾಗಿ ಸೇತುವೆ ರಚನೆ, ಕಮಿಲ-ಬಳ್ಪ ರಸ್ತೆ ದುರಸ್ತಿಗೆ ಆಗ್ರಹಿಸಿ ಹೋರಾಟ, ಪ್ರತಿಭಟನೆ ನಡೆದು ಆಡಳಿತವು ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಚುನಾವಣೆಗೂ ಸ್ಫರ್ಧಿಸಿಲಾಗಿತ್ತು. ಜನರೇ ತಾತ್ಕಾಲಿಕ ಸೇತುವೆ ರಚನೆ ಮಾಡಿದ್ದರು. ಇದೆಲ್ಲದರ ಬಳಿಕ ರಸ್ತೆ ದುರಸ್ತಿ, ಮೊಗ್ರ ಸೇತುವೆಗೆ ಗುದ್ದಲಿ ಪೂಜೆ ನಡೆದಿದ್ದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಇಲ್ಲಿ ಜಿಯೋ ಟವರ್‌ ನಿರ್ಮಾಣದ ಭರವಸೆಗಳು ಇನ್ನೂ ಕನಸಾಗಿದೆ. ಮೊಗ್ರದ ಹೋರಾಟವು ರಾಜ್ಯ ಮಾತ್ರವಲ್ಲ ದೇಶದಲ್ಲೂ ಸುದ್ದಿಯಾಗಿತ್ತು. ಇದೀಗ ಸುಳ್ಯದ ಮೂಲಭೂತ ಸಮಸ್ಯೆಗೆ ಸಂಬಂಧಿಸಿದ ಹೋರಾಟಗಳು ಸುದ್ದಿಯಾಗುತ್ತಲೇ ಇದೆ. ಆಡಳಿತವು, ಚುನಾವಣಾ ಆಯೋಗವು ಸುಳ್ಯದ ಹಲವು ಕಡೆಯ ಚುನಾವಣಾ ಬಹಿಷ್ಕಾರದ ಸಂಗತಿಗಳ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ | ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ |
April 25, 2024
3:00 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror