ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆ ಬಳಿಕ ರಾಜಕೀಯ ಚಟುವಟಿಕೆ ಗರಿಗೆದರಿದೆ. ಎಲ್ಲಾ ಪಕ್ಷಗಳಲ್ಲೂ ಗುಂಪುಗಾರಿಕೆ, ಅಸಮಾಧಾನಗಳು ಕಂಡುಬರುತ್ತಿದೆ. ಇದೇ ಕಾರಣದಿಂದ ಕಾಂಗ್ರೆಸ್ ಪಕ್ಷವು ಮೊದಲೇ ಒಂದು ಹಂತದ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿತ್ತು. ಬಿಜೆಪಿಯು ಗುಂಪುಗಾರಿಕೆ ತಡೆಯಲು ತಂತ್ರ ಮಾಡುತ್ತಿದೆ. ಉತ್ತರ ಪ್ರದೇಶ ಮಾದರಿಯಲ್ಲೇ ಕರ್ನಾಟಕದಲ್ಲೂ ಟಿಕೆಟ್ ಹಂಚಿಕೆ ಮಾಡಲು ಸಿದ್ಧತೆ ನಡೆಸಿದೆ. ಗುಂಪುಗಾರಿಕೆ, ಅಸಮಾಧಾನ, ವಿರೋಧಿ ಅಲೆ ಇರುವ ಕಡೆಗಳಲ್ಲಿ ಹೊಸಬರಿಗೆ ಆದ್ಯತೆ ನೀಡಲು ಸಿದ್ಧತೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಗುಂಪುಗಾರಿಕೆ ಹಾಗೂ ಎಲ್ಲೆಲ್ಲಿ ಯಾವ ವಾತಾವರಣ ಇದೆ, ಅದಕ್ಕೆ ಕಾರಣಗಳ ಸಹಿತ ಕಂಡುಹಿಡಿಯಲು ತಟಸ್ಥ ಏಜೆನ್ಸಿಯೊಂದರ ಸಮೀಕ್ಷೆಯ ಮೂಲಕ ಪ್ರಾಥಮಿಕ ಹಂತದ ಮಾಹಿತಿ ಸಂಗ್ರಹ ಕಾರ್ಯವನ್ನು ಬಿಜೆಪಿ ಮಾಡಿತ್ತು. ಈ ಮೂಲಕ ಕ್ಷೇತ್ರದ ಸಮಗ್ರ ಮಾಹಿತಿ ಕಲೆ ಹಾಕಿತ್ತು. ಏಕೆ ವಿರೋಧ ಹಾಗೂ ಇದಕ್ಕೆ ಕಾರಣವನ್ನೂ ಕಂಡು ಹಿಡಿಯುತ್ತಿದೆ. ಒಂದು ವೇಳೆ ಬಣ ರಾಜಕೀಯಗಳು ಇದ್ದರೆ ಅಂತಹ ಕಡೆಗಳಲ್ಲಿ ಯಾವ ಬಣಕ್ಕೂ ಸೇರದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಹೇಗೆ ಎಂಬ ಸಮೀಕ್ಷೆಯನ್ನೂ ನಡೆಸಿದೆ.
ಟಿಕೆಟ್ ವಂಚಿತರಾಗುವವರ ಪೈಕಿ ಕೆಲ ಹಿರಿಯರಿಗೆ ಅಧಿಕಾರ ಬಂದ ಬಳಿಕ ಸ್ಥಾನಮಾನ ಗಳನ್ನು ನೀಡುವ ಭರವಸೆ ನೀಡಿ ಚುನಾವಣಾ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಸೂಚನೆ ನೀಡಲಾಗುತ್ತದೆ. ಅಮಿತ್ ಶಾ ಅವರ ರಾಜ್ಯ ಪ್ರವಾಸ ಮತ್ತು ಇನ್ನೊಂದು ಹಂತದ ಸಮೀಕ್ಷೆಯ ನಂತರ ಬಿಜೆಪಿ ನಿಲುವುಗಳು ಗಟ್ಟಿಯಾಗಲಿದೆ ಎನ್ನುವುದು ಪಕ್ಷದ ಮೂಲದಿಂದ ಲಭ್ಯ ಮಾಹಿತಿ.
ಕಾಂಗ್ರೆಸ್ ಪಕ್ಷವು ಕೂಡಾ ಈ ಬಾರಿ ಗೆಲುವು ಸಾಧಿಸಲು ತಂತ್ರಗಳನ್ನು ಮಾಡುತ್ತಿದೆ. ಗುಂಪುಗಾರಿಕೆಗಳಿಗೆ ಬ್ರೇಕ್ ಹಾಕಲು ಸಿದ್ಧತೆ ನಡೆಸಿದೆ. ಗುಂಪುಗಾರಿಕೆಯ ಕಾರಣದಿಂದ ಕ್ಷೇತ್ರವು ಸೋತರೆ ಸ್ಥಳೀಯ ನಾಯಕತ್ವನ್ನೇ ಬದಲು ಮಾಡಲು ಚಿಂತನೆ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಪಕ್ಷದ ತೀರ್ಮಾನದ ವಿರುದ್ಧ ಹೋಗದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ಪಕ್ಷದ ಮೂಲದ ಮಾಹಿತಿ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…