ಉತ್ತರಾಖಂಡ ರಾಜ್ಯದ ಇಬ್ಬರು ಹೆಣ್ಣು ಮಕ್ಕಳು ತಮ್ಮ ತಂದೆಯ ಸೋಲಿಗೆ ಇದೀಗ ವಿಶೇಷ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ. ಪ್ರಸ್ತುತ ವಿಧಾನಸಭೆ ಚುನಾವಣೆ ಕಣಕ್ಕಿಳಿದಿದ್ದ ಅನುಪಮಾ ರಾವತ್ ಮತ್ತು ರಿತು ಖಂಡೂರಿ ಎಂಬಿಬ್ಬರು ಮಹಿಳೆಯರು ತಮ್ಮ ಎದುರಾಳಿ ಸ್ಪರ್ಧಿಗಳ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಇದೀಗ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗು ಮಾಜಿ ಸಿಎಂ ಹರೀಶ್ ರಾವತ್ ಮತ್ತು ಬಿಜೆಪಿಯ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ಅವರ ಈ ಸುಪುತ್ರಿಯರು ತಮ್ಮ ಅಪ್ಪನ ಸೋಲಿಗೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
2012ರ ವಿಧಾನಸಭೆ ಚುನಾವಣೆಯಲ್ಲಿ ಭುವನ್ ಚಂದ್ರ ಖಂಡೂರಿ ಅವರು ಕೊಟ್‌ದ್ವಾರ ಕ್ಷೇತ್ರದಲ್ಲಿ ಸೋಲು ಕಂಡಿದ್ದರೆ, 2017ರ ಚುನಾವಣೆಯಲ್ಲಿ ಹರಿದ್ವಾರ ಗ್ರಾಮೀಣ ಕ್ಷೇತ್ರದಲ್ಲಿ ಹರೀಶ್ ರಾವತ್ ವೈಫಲ್ಯ ಅನುಭವಿಸಿದ್ದರು.
ಇದೀಗ ಉತ್ತರಾಖಂಡದ ಕೊಟ್‌ದ್ವಾರ್ ಕ್ಷೇತ್ರದಿಂದ ಅನುಪಮಾ ರಾವತ್ ಮತ್ತು ಕೊಟ್‌ದ್ವಾರ ವಿಧಾನಸಭೆ ಕ್ಷೇತ್ರದಿಂದ ರಿತು ಖಂಡೂರಿ ಭೂಷಣ್ ಕಣಕ್ಕಿಳಿದು ಗೆದ್ದು ಸಂಭ್ರಮಿಸಿದ್ದಾರೆ.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…