ಹರ್ಯಾಣ ಸರಕಾರ ಯಮುನಾ ನದಿಗೆ ಉದ್ದಿಶ್ಯಪೂರ್ವಕವಾಗಿ ಅಮೋನಿಯಾ ಹೆಚ್ಚು ಬೆರೆಯುವಂತೆ ಮಾಡ್ತಾ ಇದೆ.ಹಾಗಾಗಿ ಆ ನೀರನ್ನು ಬಳಸಿದ ದೆಹಲಿಯ ಜನರಿಗೆ ಆರೋಗ್ಯ ಸಮಸ್ಯೆ ಬರಲಿದೆ ಅಂತ ಅರವಿಂದ ಕೇಜ್ರೀವಾಲರ ಆರೋಪ.
ಹಾಗೇನೂ ಆಗಿಲ್ಲ ಎಂಬುದರ ಪ್ರದರ್ಶನಕ್ಕಾಗಿ ಹರ್ಯಾಣದ ಮುಖ್ಯಮಂತ್ರಿಯವರು ಎರಡು ರಾಜ್ಯಗಳ ಗಡಿಯಲ್ಲಿ ಯಮುನಾ ನದಿಯ ನೀರು ಕುಡಿದು ತೋರಿಸಿದ ವಿಡಿಯೋ ಪ್ರದರ್ಶನಕ್ಕೆ.
ನೀರು ಕುಡಿದ ನಾಟಕ ಅವರು ಮಾಡಿದ್ದು ಅಂತ ಇವರ ಪ್ರತ್ಯಾರೋಪ. ಮಾಧ್ಯಮಗಳಲ್ಲಂತೂ ಇದರದ್ದೇ ಸುದ್ದಿ,ಚರ್ಚೆ,ವಾಗ್ವಾದ. ನನಗೆ ಅರ್ಥವಾಗದ್ದು ,ದೆಹಲಿ / ಹರ್ಯಾಣ ರಾಜ್ಯದ ಗಡಿಯಲ್ಲಿನ ನೀರಿನ ರಾಸಾಯನಿಕ ಪರೀಕ್ಷೆ ಯಾವುದೇ ಮಾಧ್ಯಮ ಯಾಕೆ ಮಾಡಿಲ್ಲ ಅಂತ.ಅದು ಮತ್ತು ಅದರ ಜೊತೆ ದೆಹಲಿ ರಾಜ್ಯದ ಇನ್ನೊಂದು ಬದಿಯಲ್ಲಿನ ನದಿ ನೀರನ್ನು ಅಮೋನಿಯಾ ರಾಸಾಯನಿಕದ ಪ್ರಮಾಣಕ್ಕಾಗಿ ಪರೀಕ್ಷೆ ಮಾಡಿಸಿದ್ದರೆ ಸಮಸ್ಯೆ ಕ್ಷಣ ಮಾತ್ರದಲ್ಲಿ ಪರಿಹಾರವಾಗುತ್ತಿತ್ತಲ್ಲಾ ಅಂತ. ಅಂದ ಹಾಗೆ ದೆಹಲಿ ರಾಜ್ಯ ದಾಟಿದ ಬಳಿಕ ಯಮುನಾ ನದಿ ಯಾವ ರಾಜ್ಯದಲ್ಲಿ ಹರಿದು ಹೋಗುತ್ತಿದೆ? ಅಲ್ಲಿ ನದಿ ನೀರಿನ ಪರಿಸ್ಥಿತಿ ಹೇಗಿದೆ?
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…