Advertisement
ಸುದ್ದಿಗಳು

ತಾಂತ್ರಿಕತೆ ಮುಂದುವರಿದರೂ ಸಮಸ್ಯೆ ಮುಗಿಯದು…! | ಇಲ್ಲಿ ವಿದ್ಯುತ್‌ ಕೈಕೊಟ್ಟದ್ದು ಹೇಗೆ..?

Share

ತಾಂತ್ರಿಕತೆ ಎಷ್ಟೇ ಮುಂದುವರಿದರೂ ಕೆಲವು ಸಮಸ್ಯೆಗಳಿಗೆ ಪರಿಹಾರ ಇಲ್ಲ. ಕಳೆದ ಎರಡು ದಿನಗಳಿಂದ ಸುಳ್ಯ ತಾಲೂಕಿನ ಗುತ್ತಿಗಾರು ಸಬ್‌ಸ್ಟೇಶನ್‌ಗೆ ವಿದ್ಯುತ್‌ ಸರಬರಾಜು ಸಮಸ್ಯೆ. ಕಾರಣ ಭೂಮಿ ಒಳಗಿನ ಕೇಬಲ್‌ ಸಮಸ್ಯೆ.

ಸುಳ್ಯ ತಾಲೂಕಿನ ಗುತ್ತಿಗಾರು ಸಬ್‌ಸ್ಟೇಶನ್‌ಗೆ ಕಳೆದ ಎರಡು ದಿನಗಳಿಂದ ವಿದ್ಯುತ್‌ ಸರಬರಾಜಿನಲ್ಲಿ ಸಮಸ್ಯೆ. ಹೀಗಾಗಿ ಅನೇಕ ಕಡೆಯ ವಿದ್ಯುತ್‌ ಬಳಕೆದಾರರಿಗೆ ಸಮಸ್ಯೆ. ಹಾಗೆಂದು ಇಲಾಖೆಯ ಸಿಬಂದಿಗಳು, ಅಧಿಕಾರಿಗಳು ಮೌನವಾಗಿ ಕುಳಿತಿಲ್ಲ. ಇಡೀ ದಿನ ಕೆಲಸ ಮಾಡುತ್ತಲೇ ಇದ್ದಾರೆ. ಗ್ರಾಹಕರು, ಕೃಷಿಕರಿಗೆ ಎರಡೂ ದಿನಗಳಿಂದ ಅಧಿಕಾರಿಗಳಿಗೆ, ಮೆಸ್ಕಾಂ ಸಿಬಂದಿಗಳನ್ನು ಪ್ರಶ್ನಿಸುವುದೇ ಕೆಲಸ, ಕರೆಂಟಿಲ್ಲ ಏಕೆ..?. ಕಾರಣ , ಭೂಮಿಯೊಳಗೆ ಅಳವಡಿಕೆ ಮಾಡಿದ್ದ ಕೇಬಲ್‌ ಸಮಸ್ಯೆ.(ಯು ಜಿ ಕೇಬಲ್)‌

ಭೂಮಿಯೊಳಗೆ ಕೇಬಲ್‌ ಅಳವಡಿಕೆ ಮಾಡುವ ವೇಳೆ ಎರಡೆರಡು ಕೇಬಲ್‌ ಅಳವಡಿಕೆ ಮಾಡಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಯಾವ ಸಮಸ್ಯೆಯೂ ಇಲ್ಲದೆ ಗ್ರಾಹಕರಿಗೆ ನಿಶ್ಚಿಂತೆಯಿಂದ ವಿದ್ಯುತ್‌ ಸರಬರಾಜಾಗಿತ್ತು. ಇದೀಗ ಭೂಮಿಯೊಳಗೆ ಅಳವಡಿಕೆ ಮಾಡಿದ್ದ ಒಂದು ಕೇಬಲ್‌ ಸಮಸ್ಯೆಯಾಗಿ ಇನ್ನೊಂದು ಕೇಬಲ್‌ ಮೂಲಕ ವಿದ್ಯುತ್‌ ನೀಡಿದಾಗಲೂ ಸಮಸ್ಯೆ..!. ಇದನ್ನು ದುರಸ್ತಿ ಮಾಡಲು ಇನ್ನೊಂದು ತಂಡ ಆಗಮಿಸಬೇಕು ಹಾಗೂ ಭೂಮಿಯೊಳಗಿನಿಂದ ಕೇಬಲ್‌ ತೆಗೆದು ದುರಸ್ತಿ ಮಾಡಬೇಕು. ಹೀಗಾಗಿ ಸಮಸ್ಯೆಯಾಗಿದೆ. ಅಧಿಕಾರಿಗಳು, ಸಿಬಂದಿಗಳು ನಿರಂತರ ಕೆಲಸದಲ್ಲಿದ್ದಾರೆ.

ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕೈಕೊಟ್ಟರೆ ಕೃಷಿಕರು, ಗ್ರಾಮೀಣ ಭಾಗದ ಹಲವು ಕಡೆ ಸಮಸ್ಯೆ. ಕುಡಿಯುವ ನೀರು, ಸಣ್ಣ ಪುಟ್ಟ ಇಂಡಸ್ಟ್ರೀಗಳು, ಕೃಷಿಕರು ಸೇರಿದಂತೆ ಉದ್ಯಮಿಗಳು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈಗಲೂ ಅದೇ ಸಮಸ್ಯೆ ಕಾಡಿದೆ. ತಾಂತ್ರಿಕವಾಗಿ ಎಷ್ಟೇ ಮುಂದಿವರಿದರೂ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸ್ವಲ್ಪ ವಿಳಂಬವೇ ಆಗಿದೆ. ಇದಕ್ಕೆ ಕಾರಣರು ಯಾರೂ ಅಲ್ಲ, ಪ್ರಕೃತಿಯೇ ಕಾರಣ. ಹೀಗಾಗಿ ಗ್ರಾಹಕರು ಸಮಾಧಾನ ಪಟ್ಟುಕೊಳ್ಳುವುದು, ತಾಳ್ಮೆ ಕಳೆದುಕೊಳ್ಳದಿರುವುದೇ ಪರಿಹಾರ..!.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ

ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…

2 days ago

ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!

ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…

2 days ago

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ

ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…

2 days ago

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!

ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…

2 days ago

ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!

ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…

3 days ago