2021 ರಲ್ಲಿ ಬೇಟೆಗಾರರಿಗೆ ಬಲಿಯಾದ 49 ಆನೆಗಳು | 77 ಆರೋಪಿಗಳನ್ನು ಬಂಧನ |

January 25, 2022
12:33 PM

2021 ರಲ್ಲಿ ಭಾರತದಾದ್ಯಂತ ಬೇಟೆಗಾರರಿಗೆ  ಸುಮಾರು 49 ಆನೆಗಳನ್ನು ಬಲಿಯಾಗಿವೆ. ಈ ಸಂಬಂಧ  ಕಾನೂನು ಜಾರಿ ಸಂಸ್ಥೆಗಳು 77 ಆರೋಪಿಗಳನ್ನು ಬಂಧಿಸಿದೆ ಎಂದು ಕೇಂದ್ರ ಸರ್ಕಾರದ ಏಜೆನ್ಸಿ ತಿಳಿಸಿದೆ.

ದೇಶದಲ್ಲಿ ಆನೆಗಳ ಸಹಿತ ಕಾಡುಪ್ರಾಣಿಗಳ  ಬೇಟೆಯಾಡುವ ಪರಿಸ್ಥಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನೋಯ್ಡಾ ಮೂಲದ ಸಾಮಾಜಿಕ ಮತ್ತು ಪ್ರಾಣಿ ಹಕ್ಕುಗಳ ಕಾರ್ಯಕರ್ತ ರಂಜನೆ ತೋಮರ್ ಅವರು ತಮ್ಮ ನೈಸರ್ಗಿಕ ಆವಾಸ ಸ್ಥಾನದಲ್ಲಿ ಆನೆಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಡಬ್ಲ್ಯುಸಿಸಿಬಿ ಯಿಂದ ಮಾಹಿತಿಯನ್ನು ಪಡೆದಿದ್ದರು.

ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಡಬ್ಲ್ಯುಸಿಸಿವಿ ಅಥವಾ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಆರ್‌ಟಿಐ ಮೂಲಕ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ  ಅಸ್ಸಾಂ 9, ಪಶ್ಚಿಮ ಬಂಗಾಳ, ಒಡಿಶಾ ಮತ್ತು ತಮಿಳುನಾಡು ತಲಾ 8, ಕರ್ನಾಟಕ ಮತ್ತು ಉತ್ತರಾಖಂಡ ತಲಾ 3 ರಂತೆ ಕೇರಳ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಎರಡು ಆನೆ ಹತ್ಯೆಯ ಪ್ರಕರಣಗಳನ್ನು ದಾಖಲಿಸಿದರೆ, ರಾಜಸ್ಥಾನ, ಹಿಮಾಚಲ ಪ್ರದೇಶ, ಬಿಹಾರ, ಮೇಘಾಲಯ, ಛತ್ತಿಸ್‌ಗಢ, ಮಹಾರಾಷ್ಟ್ರ ತಲಾ ಒಂದು ಆನೆ ಹತ್ಯೆಗೊಳಗಾಗಿದೆ ಎಂದು ವರದಿ ತಿಳಿಸಿದೆ.

ಆನೆಗಳನ್ನು ಹತ್ಯೆಯನ್ನು ಮಾಡಿದ ಪ್ರಕರಣದಲ್ಲಿ ತಮಿಳುನಾಡಿನಲ್ಲಿ ಗರಿಷ್ಠ 17 ಜನರನ್ನು ಬಂಧಿಸಲಾಗಿದ್ದು, ಅಸ್ಸಾಂನಲ್ಲಿ 15, ಒಡಿಶಾದಲ್ಲಿ 13 ಹಾಗೂ ಪಶ್ಚಿಮ ಬಂಗಾಳದಲ್ಲಿ 11 ಜನರನ್ನು ಬಂಧಿಸಲಾಗಿದೆ. ಮಾತ್ರವಲ್ಲದೆ, ಕೇರಳದಲ್ಲಿ ಐವರು ಉತ್ತರಾಖಂಡ ಮತ್ತು ಬಿಹಾರದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?
October 4, 2026
6:58 AM
by: ಪ್ರಬಂಧ ಅಂಬುತೀರ್ಥ
ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು
October 4, 2026
6:47 AM
by: ದ ರೂರಲ್ ಮಿರರ್.ಕಾಂ
ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ
October 4, 2026
6:37 AM
by: ದ ರೂರಲ್ ಮಿರರ್.ಕಾಂ
ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
October 4, 2026
6:31 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror