ಜಾಲ್ಸೂರು-ಕಾಸರಗೋಡು ಅಂತರಾಜ್ಯ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ | ಕೂದಳೆಲೆ ಅಂತರದಲ್ಲಿ ಪಾರಾದ ಬೈಕ್ ಸವಾರ |

November 11, 2023
12:43 PM
ಜಾಲ್ಸೂರು- ಕಾಸರಗೋಡು ಅಂತರಾಜ್ಯ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ತಿರುವಿನಲ್ಲಿ ಎದುರಿನಿಂದ ಬಂದ ಬೈಕ್‌ ಸವಾರನಿಗೆ ಆನೆ ಎದುರಾಗಿದೆ.

ಜಾಲ್ಸೂರು- ಕಾಸರಗೋಡು(Jalsoor- Kasargodu) ಅಂತರಾಜ್ಯ ರಸ್ತೆಯಲ್ಲಿ(National highway) ಒಂಟಿ ಸಲಗ(Elephant) ಪ್ರತ್ಯಕ್ಷವಾಗಿದ್ದು, ತಿರುವಿನಲ್ಲಿ ಎದುರಿನಿಂದ ಬಂದ ಬೈಕ್‌ ಸವಾರ(Bike rider)ನಿಗೆ ಆನೆ ಎದುರಾಗಿದೆ. ಬೈಕ್‌ ಸವಾರ ಕೂದಳೆಲೆ ಅಂತರದಿಂದ ಪಾರಾಗಿದ್ದು, ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಈ ಘಟನೆ ಸುಳ್ಯದ(Sullia) ಸಮೀಪ ಪಂಜಿಕಲ್ಲಿನಲ್ಲಿ ಇಂದು ಬೆಳಗ್ಗೆ ನಡೆದಿದೆ.

Advertisement
Advertisement
Advertisement

ದೇಲಂಪಾಡಿ ಗ್ರಾಮದ ಬೆಳ್ಳಿಪಾಡಿ ಗ್ರಾಮ ಸುತ್ತ ಮುತ್ತ ಕಾಡಿನಿಂದ(Forest) ಆವರಿಸಿದ್ದು, ಈ ಪರಿಸರದಲ್ಲಿ ರಾತ್ರಿ, ಹಗಲೆನ್ನದೆ ಆನೆಗಳು ಓಡಾಡುತ್ತಿರುತ್ತವೆ. ಇಲ್ಲಿನ ಜನ ಪ್ರತಿ ದಿನ ಆತಂಕದಲ್ಲೇ ಬದುಕುವಂತಾಗಿದೆ. ಹಲವು ದಿನಗಳಿಂದ ನಿರಂತರವಾಗಿ ಕಾಡಾನೆಗಳು ಕೃಷಿಕರ(Farmer) ತೋಟಗಳಿಗೆ ದಾಳಿ ಇಡುತ್ತಿದ್ದು, ಕೃಷಿಯನ್ನು ಹಾನಿ ಮಾಡುತ್ತಿದ್ದಾವೆ. ಈಗ ಕಾಡಾನೆಯೊಂದು ಪಂಜಿಕಲ್ಲಿನ ಬಳಿ ಮುಖ್ಯ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಪ್ರತ್ಯಕ್ಷವಾಗಿದೆ.

Advertisement

ಇದು ಕಾಡು ದಾರಿ ಆಗಿರುವುದರಿಂದ ಬೆಳಗ್ಗೆ ಅನೇಕರು ಬೈಕ್‌ ನಲ್ಲಿ ಹೋಗುತ್ತಿರುತ್ತಾರೆ. ಇದು ಕಾಸರಗೋಡು ಹಾಗೂ ಸುಳ್ಯ ಮುಖ್ಯ ರಸ್ತೆ ಆಗಿರುವ ಕಾರಣ ಇಲ್ಲಿ ಅನೇಕರು ದಿನನಿತ್ಯ ಓಡಾಡುತ್ತಿರುತ್ತಾರೆ. ಶಾಲಾ- ಕಾಲೇಜಿಗೆ ದಿನನಿತ್ಯ ಅನೇಕ ಮಕ್ಕಳು ಹೋಗುತ್ತಿರುತ್ತಾರೆ. ಈ ಬಗ್ಗೆ ಅನೇಕ ಬಾರಿ ಅರಣ್ಯ ಇಲಾಖೆ(Forest department) ಗಮನಕ್ಕೆ ತಂದಿದ್ದರು, ಅವರು ಏನು ಮಾಡದ ಪರಿಸ್ಥಿತಿಯಲ್ಲಿದ್ದಾರೆ. ಈ ಕಡೆಯಿಂದ ಓಡಿಸಿ ಇನ್ನೊಂದು ಕಾಡಿಗೆ ಬಿಟ್ಟರೆ, ಅಲ್ಲಿ ಜನರಿಗೆ ಕಾಟ ಕೊಟ್ಟು, ತಿಂದು ತೇಗಿ ಮತ್ತೆ ಇತ್ತಕಡೆ ಪಯಣ ಬೆಳೆಸುತ್ತದೆ. ಒಟ್ಟಿನಲ್ಲಿ ಈ ಮಾನವ- ಆನೆ ಸಂಘರ್ಷ ನಿಲ್ಲದ ಸಮಸ್ಯೆ ಅನ್ನೋದಂತು ಸತ್ಯ.

In the morning, a single elephant was seen on the Jalsoor-Kasargodu national highway, and the elephant encountered the bike rider coming from the opposite side at the turn. The biker narrowly escaped and saved his life. This incident took place in Panjikallu near Sullia this morning.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror