ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ, ಚಿನ್ನ ಬೆಳ್ಳಿ, ನಗದು ಕಳವು ಮಾಡುವುದನ್ನು ಕೇಳಿದ್ದೀವಿ. ಆದರೆ ಇಲ್ಲೋಬ್ಬ ಕಳ್ಳ ಅಕ್ಕಿ, ಬೆಲ್ಲ, ತರಕಾರಿ ಕದ್ದು ಯಾರ ಕಣ್ಣಿಗೂ ಕಾಣದಂತೆ ಪರಾರಿಯಾಗುತ್ತಿದ್ದಾನೆ. ಮನೆಯಿಂದ ಇವೆಲ್ಲ ಕದ್ದು ಉಂಡು ಮಜಾ ಮಾಡಿ ಉಂಡಾಡಿ ಗುಂಡನ ಹಾಗೆ ಕಣ್ಣು ತಪ್ಪಿಸಿ ತಿರುಗುತ್ತಿದ್ದಾನೆ ಈ ಕಳ್ಳ…! ಈ ಮಹಾನ್ ಕಿಲಾಡಿ ಯಾರು..? .
ಬಂಡೀಪುರ ಅರಣ್ಯದಂಚಿನಲ್ಲಿ ಕಾಡಾನೆ ಪುಂಡಾಟ ಜೋರಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ ಮೂರು ರಾಜ್ಯಗಳಲ್ಲಿಯೂ ಆನೆಗಳು ಸಂಚರಿಸಿ ಬೆಳೆ ನಾಶ, ಸೋಲಾರ್ ಬೇಲಿ ತಂತಿ ತುಳಿದು ಹಾನಿ ಮಾಡಿವೆ. ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ಅಲ್ಲಿ ಒಂಟಿ ಸಲಗ ಅಕ್ಕಿ, ಬೆಲ್ಲ ತರಕಾರಿ ಮೇಯುತ್ತಿದೆ. ಗುಂಡ್ಲುಪೇಟೆ ತಾಲೂಕು ಹುಂಡೀಪುರ, ಮಂಗಲ, ಜಕ್ಕಳ್ಳಿ, ಎಲಚೆಟ್ಟಿ ಸೇರಿದಂತೆ ಹಲವೆಡೆ ಕಾಡಾನೆ ಉಪಟಳ ಹೆಚ್ಚಾಗಿದೆ. ಪುಂಡಾನೆ ಸೆರೆಗೆ ಸಾಕಾನೆಗಳ ಕಾರ್ಯಾಚರಣೆ ಇದೀಗ ಆರಂಭಿಸಲಾಗಿದೆ.
ಕಳೆದ 5 ತಿಂಗಳಿಂದ ನಿರಂತರವಾಗಿ ಉಪಟಳ ನೀಡುತ್ತಿರುವ ಒಂಟಿ ಆನೆಯನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. 5 ಸಾಕಾನೆಗಳಿಂದ ಪುಂಡಾನೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ದುಬಾರೆ, ರಾಮಾಪುರ ಬಿಳಿಗಿರಿರಂಗನ ಬೆಟ್ಟದಿಂದ ಸಾಕಾನೆಗಳನ್ನು ಕರೆತರಲಾಗಿದೆ.
ಈಗಾಗಲೇ ಡ್ರೋನ್ ಕಾರ್ಯಾಚರಣೆ ಮೂಲಕ ಪುಂಡಾನೆ ಪತ್ತೆಹಚ್ಚಲಾಗಿದೆ. ಎಲಚೆಟ್ಟಿ ಬಳಿ ಒಂಟಿ ಸಲಗದ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಅರಣ್ಯ ಸಿಬ್ಬಂದಿ ಪುಂಡಾನೆ ಹಿಡಿಯುವ ನಿರೀಕ್ಷೆಯಲ್ಲಿದ್ದಾರೆ.
ಮಾರಳ್ಳಿ ಗ್ರಾಮದಲ್ಲಿ ಕಳೆದ ಶುಕ್ರವಾರ ರಾತ್ರಿ ಆನೆ ತುಳಿದು ರೈತರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆಯ ಎರಡು ಜೀಪ್‌ಗಳನ್ನು ಜಖಂಗೊಳಿಸಿದ್ದಲ್ಲದೇ, ಪ್ರತಿಭಟನೆ ನಡೆಸಿ ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಹಾಗೂ ಪುಂಡಾನೆಯನ್ನು ಹಿಡಿದು ಬೇರೆಡೆ ಬಿಡುವಂತೆ ಒತ್ತಾ ಯಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡಿದ್ದರು. ಈ ಸಂದರ್ಭ ದಲ್ಲಿ ಪುಂಡಾನೆಯನ್ನು ಹಿಡಿಯುವ ಭರವಸೆಯನ್ನು ಅರಣ್ಯಾಧಿಕಾರಿಗಳು ನೀಡಿದ್ದರು.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…