Advertisement
The Rural Mirror ಫಾಲೋಅಪ್

ಕೃಷಿಗೆ ಆನೆ ಹಾವಳಿ | ಕೃಷಿಕರ ಮೇಲೂ ದಾಳಿ | ಪರಿಹಾರ ಹೇಗೆ ? ಏನು ? | ಕೃಷಿಕರ ಸಲಹೆ ಏನು ? |

Share

ಸುಳ್ಯ ತಾಲೂಕಿನ ವಿವಿದೆಡೆ ಅದರಲ್ಲೂ ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಇದೀಗ ಮತ್ತೆ ಕೊಲ್ಲಮೊಗ್ರದಲ್ಲಿ ಕಾಡಾನೆ ದಾಳಿಗೆ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಬೆಳಗ್ಗೆ ಹಾಲು ಸೊಸೈಟಿಗೆ ತೆರಳುವ ವೇಳೆ ಆನೆ ದಾಳಿ ಮಾಡಿದೆ. ಅನೇಕರ ಕೃಷಿಯೂ ಹಾನಿಯಾಗುತ್ತಿದೆ. ಪರಿಹಾರ ಹೇಗೆ ? ಎಂಬುದು ಯಕ್ಷ ಪ್ರಶ್ನೆ. ರೂರಲ್‌ ಮಿರರ್‌ ಈ ಬಗ್ಗೆ ಜಾಗೃತಿ ವರದಿ ಪ್ರಕಟ ಮಾಡುತ್ತದೆ. ಕೃಷಿಕರ ಅಭಿಪ್ರಾಯ ತಿಳಿಸಬಹುದು.

Advertisement
Advertisement
Advertisement

ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು, ಮಂಡೆಕೋಲು, ಆಲೆಟ್ಟಿ, ಮಡಪ್ಪಾಡಿ, ಕೊಲ್ಲಮೊಗ್ರ ಸೇರಿದಂತೆ ಅರಣ್ಯ ಭಾಗದ ಅಂಚಿನಲ್ಲಿ ಅನೇಕ ವರ್ಷಗಳಿಂದ ಕಾಡಾನೆ ಹಾವಳಿ ಇದೆ. ಹಿಂದೆ ಕೃಷಿ ಹಾನಿ ಮಾಡುತ್ತಿದ್ದ ಕಾಡಾನೆ ಈಚೆಗೆ ಮನುಷ್ಯರ ಮೇಲೂ ದಾಳಿ ಮಾಡಲು ಆರಂಭಿಸಿದೆ. ಕೊಲ್ಲಮೊಗ್ರ ಪ್ರದೇಶದಲ್ಲಿ ಭಾನುವಾರ ಪ್ರಕರಣ ಸೇರಿದರೆ ಗಂಭೀರ ಗಾಯಗೊಂಡ  3 ನೇ ಪ್ರಕರಣವಾಗಿದೆ. ಈ ಹಿಂದೆ ಇಬ್ಬರು ಮೃತಪಟ್ಟಿದ್ದಾರೆ. ತೋಟಕ್ಕೆ ನೀರುಣಿಸಲು ತೆರಳಿದ ವೇಳೆ ಒಬ್ಬರು ಆನೆ ದಾಳಿ ಮಾಡಿ ಸ್ಥಳದಲ್ಲೇ ಮೃತಪಟ್ಟಿದ್ದರೆ ಇನ್ನೊಬ್ಬರು ನೀರಿನ ಪೈಪ್‌ ದುರಸ್ತಿ ವೇಳೆ ಆನೆ ದಾಳಿ ಮಾಡಿ ಗಾಯಗೊಂಡು ಮೃತಪಟ್ಟಿದ್ದರು. ಹೀಗಾಗಿ ಈಗ ರಾತ್ರಿ ವೇಳೆ ಹಾಗೂ ಮುಂಜಾನೆ ಕೃಷಿಕರು ಓಡಾಟಕ್ಕೆ ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Advertisement

ಕೃಷಿಗೆ ದಾಳಿ ಮಾಡುವ ಕಾಡಾನೆ ಬಾಳೆ, ತೆಂಗು, ಅಡಿಕೆ ಗಿಡ ಸಹಿತ ಎಲ್ಲವನ್ನೂ ನಾಶ ಮಾಡುತ್ತದೆ. ಫಸಲು ಬರಲು ಸಿದ್ಧವಾದ ಗಿಡಗಳು ನಾಶವಾದರೆ ಅಪಾರ ನಷ್ಟವನ್ನು ಕೃಷಿಕರು ಅನುಭವಿಸಬೇಕಾಗುತ್ತದೆ. ಈ ನಾಶಕ್ಕೆ ಕಿಂಚಿತ್‌ ಪರಿಹಾರ ಮಾತ್ರಾ ಇಲಾಖೆಗಳಿಂದ ದೊರೆಯುತ್ತದೆ. ಸರ್ಕಾರಗಳು ಈ ಬಗ್ಗೆ ಇನ್ನೂ ಗಂಭೀರವಾಗಿ ಯೋಚನೆ ಮಾಡಿಲ್ಲ. ಈಗಾಗಲೇ ಸುಳ್ಯ ತಾಲೂಕಿನಲ್ಲಿ ಅಡಿಕೆ ಹಳದಿ ಎಲೆರೋಗ ಸಹಿತ ವಿವಿಧ ರೋಗಗಳಿಂದ ತುತ್ತಾಗುತ್ತಿರುವ ವೇಳೆ ಆನೆ ದಾಳಿಯೂ ಗಂಭೀರ ಸಮಸ್ಯೆಯಾಗಿದೆ.

ಆನೆ ದಾಳಿ ತಡೆಯಲು ಇಡೀ ರಾತ್ರಿ ಕೃಷಿಕರು ತಮ್ಮ ತೋಟದಲ್ಲಿ ವಿವಿಧ ಪ್ರಯತ್ನ ಮಾಡಿದ್ದೂ ಇದೆ. ತಂಡವಾಗಿ ಇಡೀ ಊರು ಕೆಲಸ ಮಾಡಿದೆ. ವ್ಯಾಟ್ಸಪ್‌ ಗುಂಪು ರಚನೆ ಮಾಡಿ ಈ ಮೂಲಕ ಮಾಹಿತಿ ರವಾನೆ ಮಾಡಿಕೊಂಡಿದೆ, ವಿದ್ಯುತ್‌ ಬೇಲಿ ಅಳವಡಿಕೆ, ಕಂದಕ ಹೀಗೇ ವಿವಿಧ ಪ್ರಯತ್ನ ಮಾಡಿದ್ದಾರೆ. ಇದೆಲ್ಲದರ ಫಾಲೋ ಅಪ್‌ ಜೊತೆಗೆ ಸರ್ಕಾರ ಈ ಸಮಸ್ಯೆಗೆ ಏನು ಮಾಡಬಹುದು ಎಂಬುದರ ಬಗ್ಗೆ ಅಭಿಯಾನ ರೂಪದಲ್ಲಿ ಕೃಷಿಕರ ಅಭಿಪ್ರಾಯ ಬೇಕಾಗಿದೆ. ಈ ಕೆಲಸವನ್ನು ಮಾಧ್ಯಮವಾಗಿ ರೂರಲ್‌ ಮಿರರ್‌ ಮಾಡುತ್ತದೆ. ಹೀಗಾಗಿ ಆನೆ ದಾಳಿಯಿಂದ ಕೃಷಿ ರಕ್ಷಣೆಗೆ , ಮನುಷ್ಯರ ರಕ್ಷಣೆಗೆ ಮಾಡಬೇಕಾದ ಮುಂಜಾಗ್ರತೆ ಬಗ್ಗೆ ನಮಗೆ ತಿಳಿಸಿ, ಸರ್ಕಾರ ಮಾಡಬೇಕಾದ ಕ್ರಮಗಳ ಬಗ್ಗೆಯೂ ತಿಳಿಸಿ. ರೂರಲ್‌ ಮಿರರ್‌ ಈ ಬಗ್ಗೆ ವರದಿ ಮಾಡುತ್ತಾ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ವರದಿ ರೂಪದಲ್ಲಿ ದಾಖಲೆ ನೀಡುವ ಪ್ರಯತ್ನ ಮಾಡುತ್ತದೆ.  ನಮ್ಮ ವ್ಯಾಟ್ಸಪ್‌ ಸಂಖ್ಯೆ 9449125447 . ಈ ಸಂಖ್ಯೆಗೆ ವ್ಯಾಟ್ಸಪ್‌ ಮೆಸೇಜ್‌ ಮಾಡಬಹುದು. ಅಥವಾ ಅಭಿಪ್ರಾಯವನ್ನು ವಿಡಿಯೋ ಮಾಡಿ ಕಳುಹಿಸಬಹುದು.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಾವಯವ ಕೃಷಿ ಎಂದರೆ ಏನು..?

https://youtu.be/VwddfpkQ94Y?si=LMz9u08OYbG4B2il

6 hours ago

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |

ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…

6 hours ago

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

1 day ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

1 day ago

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |

ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…

1 day ago